Homeಮುಖಪುಟಕಾಶ್ಮೀರದಲ್ಲಿ ಯಾರೊಬ್ಬರು ಉಸಿರಾಡಲೂ ಆಗುತ್ತಿಲ್ಲ: ಮೆಹಬೂಬಾ ಮುಫ್ತಿ

ಕಾಶ್ಮೀರದಲ್ಲಿ ಯಾರೊಬ್ಬರು ಉಸಿರಾಡಲೂ ಆಗುತ್ತಿಲ್ಲ: ಮೆಹಬೂಬಾ ಮುಫ್ತಿ

‘ಬಹುಕಾಲದವರೆಗೆ ಬಂದೂಕಿನ ಅಡಿಯಲ್ಲಿ ಯಾರನ್ನೂ ಅದುಮಿಡಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ಕಾಶ್ಮೀರದಲ್ಲಿ ಪ್ರಜಾಪ್ರಭುತ್ವಕ್ಕೆ ಯಾವುದೇ ಅವಕಾಶಗಳನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಅಧ್ಯಕ್ಷರಾದ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಲೇಖಕ ಡೇವಿಡ್‌ ದೇವದಾಸ್‌ ಅವರು ‘ದಿ ಕ್ವಿಂಟ್’ ಜಾಲತಾಣಕ್ಕಾಗಿ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಆರೋಪಿಸಿರುವ ಅವರು, “ಕಾಶ್ಮೀರಿ ಪ್ರಜೆಗಳನ್ನು ದುರ್ಬಲಗೊಳಿಸಲು ಮಾಡಬೇಕಾದದ್ದನ್ನೆಲ್ಲ ಸರ್ಕಾರ ಮಾಡಿದೆ” ಎಂದಿದ್ದಾರೆ.

‘ಕಾಶ್ಮೀರದಲ್ಲಿ ಯಾರೊಬ್ಬರೂ ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂದಿರುವ ಅವರು, ‘ಕಾಶ್ಮೀರವನ್ನು ತೆರೆದ ಕಾರಾಗೃಹ’ವನ್ನಾಗಿ ಮಾಡಲಾಗಿದೆ. ಈ ಹಿಂದೆಯೂ ದಬ್ಬಾಳಿಕೆ ನಡೆದಿರುವುದನ್ನು ಒಪ್ಪಿಕೊಂಡಿರುವ ಅವರು, “ಆಗಿನ ಪರಿಸ್ಥಿತಿ ಈಗಿನಷ್ಟು ಭೀಕರವಾಗಿರಲಿಲ್ಲ” ಎಂದಿದ್ದಾರೆ. “ಜನರು ತಮ್ಮ ಮನೆಯ ನಾಲ್ಕು ಗೋಡೆಗಳ ಒಳಗೆಯೂ ಇರಲು ಹೆದರುವಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಬಹುಕಾಲದವರೆಗೆ ಬಂದೂಕಿನ ಅಡಿಯಲ್ಲಿ ಯಾರನ್ನೂ ಅದುಮಿಡಲು ಸಾಧ್ಯವಿಲ್ಲ’ ಎಂದು ಹೇಳಿರುವ ಅವರು, “ಜನರಿಗೆ ನೋವು ಮತ್ತು ಅವಮಾನದ ಅನುಭವವಾಗುತ್ತಿದೆ” ಎಂದಿದ್ದಾರೆ.

ಅಧಿಕಾರಿ ವರ್ಗದ ಇಬ್ಬಂದಿತನವನ್ನು ಉಲ್ಲೇಖಿಸಿರುವ ಅವರು, “25 ಮಂದಿಗಿಂತ ಹೆಚ್ಚು ಜನರು ಸಭೆಯಲ್ಲಿ ಸೇರಿದ್ದರೆಂದು ಕಾರಣ ನೀಡಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದಾರೆಂದು ನಮಗೆ ನೋಟೀಸ್ ನೀಡಲಾಯಿತು. ಆದರೆ ಲೆಫ್ಟಿನೆಂಟ್ ಗವರ್ನರ್‌ ಹಾಗೂ ಅವರ ಸಂಬಂಧಿಕರ ಸಮಾರಂಭ ದೊಡ್ಡ ಮಟ್ಟದಲ್ಲಿ ನಡೆಯಿತು. ಬಿಜೆಪಿ ನಾಯಕರೊಬ್ಬರ ಮಗನ ಮದುವೆ ಕಾರ್ಯಕ್ರಮಕ್ಕಾಗಿ ಖನದಾಲ್‌ನಲ್ಲಿನ ಡಕ್‌ ಬಂಗಲೆಯ ಮೈದಾನವನ್ನು ಮೀಸಲಿಡಲಾಗಿತ್ತು’ ಎಂದು ‌ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಜಮ್ಮು ಕಾಶ್ಮೀರ: 2019 ರಿಂದ 2,300 ಕ್ಕೂ ಹೆಚ್ಚು ಜನರ ಮೇಲೆ UAPA ಅಡಿ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕಾಶ್ಮೀರ ಜನ ಆರಾಮ ವಾಗಿಯೇ ಇದ್ದಾರೆ ಈಗ ,ಆದರೆ ಈ ಅಯೋಗ್ಯ ,ಅವಿವೇಕಿ,ಪಾಕ್ ಪ್ರೇಮಿ ,ದೇಶದ್ರೋಹಿ ಮೆಹಭೂಬ ಹಾಗೂ ಅವರ ಸಂಘ ಪರಿವಾರದವರಿಗೆ, ಚೀನಿ ಪ್ರೇಮಿ ಕಮ್ಯೂನಿಸ್ಟ್ ರಿಗೆ ,ನಗರ ನಕ್ಸಲರಿಗೆ ಮಾತ್ರ ಅಲ್ಲಿ ಉಸಿರಾಟ ಮಾಡಲು ತೊಂದರೆ ಆಗಿದೆ……

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...