ದೀಪಾವಳಿ: ಪಟಾಕಿ ಸಂಗ್ರಹಣೆ, ಮಾರಾಟ, ಬಳಕೆ ನಿಷೇಧಿಸಿದ ದೆಹಲಿ ಸರ್ಕಾರ
PC: ProKerala

ದೀಪಾವಳಿ ಹಬ್ಬದ ಸಮಯದಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ ಏರುವ ಕಾರಣ ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಆದೇಶಿಸಿದೆ.

ಕಳೆದ ವರ್ಷ ಕೂಡ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಪಟಾಕಿಯನ್ನು ನಿಷೇಧಿಸಿ ಆದೇಶಿಸಿತ್ತು.

“ಕಳೆದ ಮೂರು ವರ್ಷಗಳಲ್ಲಿ ದೀಪಾವಳಿಯ ಸಮಯದಲ್ಲಿ ದೆಹಲಿಯ ಮಾಲಿನ್ಯದ ಅಪಾಯಕಾರಿ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಳೆದ ವರ್ಷದಂತೆ, ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತಿದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇನ್ನು ಕಳೆದ ವರ್ಷದ ಪಟಾಕಿ ನಿಷೇಧವನ್ನು ತಡವಾಗಿ ವಿಧಿಸಲಾಯಿತು. ಇದರಿಂದ ವ್ಯಾಪಾರಿಗಳಿಗೆ ಅಧಿಕ ನಷ್ಟ ಉಂಟಾಯಿತು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ, ಹರಿಯಾಣ ಬಳಿಕ ಮುಂಬೈನಲ್ಲೂ ಪಟಾಕಿ ನಿಷೇಧ!

 

ಪಟಾಕಿ ಮೇಲೆ ನಿಷೇಧ ಹೇರುವುದು ವಿಳಂಬವಾದ ಕಾರಣ ಕೆಲವು ವ್ಯಾಪಾರಿಗಳು ಪಟಾಕಿಗಳನ್ನು ದಾಸ್ತಾನು ಮಾಡಲು ಮತ್ತು ಮಾರಾಟ ಮಾಡಲು ಕಾರಣವಾಯಿತು. ಹೀಗಾಗಿ ಎಲ್ಲಾ ವ್ಯಾಪಾರಿಗಳಲ್‌ಇ ಮನವಿ ಮಾಡುತ್ತಿದ್ದೇನೆ. ಯಾರು ಪಟಾಕಿಗಳನ್ನು ಸಂಗ್ರಹಿಸಬೇಡಿ ಅಥವಾ ಮಾರಾಟ ಮಾಡಬೇಡಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

ಪಟಾಕಿಗಳ ಹೊರತಾಗಿಯೂ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಅತಿಯಾದ ಮಾಲಿನ್ಯಕ್ಕೆ ಕೃಷಿತ್ಯಾಜ್ಯ ಸುಡುವಿಕೆಯೂ ಕಾರಣವಾಗಿದೆ. ವರದಿಗಳ ಪ್ರಕಾರ, ಪಂಜಾಬ್‌ನಲ್ಲಿ ಅತಿ ಹೆಚ್ಚಾಗಿ ಸುಡಲಾಗುವ ಕೃಷಿ ತ್ಯಾಜ್ಯವು  ಗಾಳಿಯ ಗುಣಮಟ್ಟ ಕುಸಿಯಲು ಪ್ರಾಥಮಿಕ ಕಾರಣವಾಗಿದೆ ಎನ್ನಲಾಗಿದೆ.

ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಕಳೆದ ವರ್ಷ ಎಲ್ಲಾ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಂಪೂರ್ಣ ನಿಷೇಧ ಹೇರಿತ್ತು.


ಇದನ್ನೂ ಓದಿ: ಪಟಾಕಿ ಅಪಘಾತ: ಬಿಜೆಪಿ ಸಂಸದೆಯ 6 ವರ್ಷದ ಮೊಮ್ಮಗಳು ನಿಧನ

LEAVE A REPLY

Please enter your comment!
Please enter your name here