Homeಮುಖಪುಟಜಮ್ಮು ಕಾಶ್ಮೀರ: 2019 ರಿಂದ 2,300 ಕ್ಕೂ ಹೆಚ್ಚು ಜನರ ಮೇಲೆ UAPA ಅಡಿ ಪ್ರಕರಣ

ಜಮ್ಮು ಕಾಶ್ಮೀರ: 2019 ರಿಂದ 2,300 ಕ್ಕೂ ಹೆಚ್ಚು ಜನರ ಮೇಲೆ UAPA ಅಡಿ ಪ್ರಕರಣ

- Advertisement -
- Advertisement -

ಜಮ್ಮು ಕಾಶ್ಮೀರ ಆಡಳಿತವು 2019 ರಿಂದ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(ಯುಎಪಿಎ)ಯ ಅಡಿಯಲ್ಲಿ 2,300 ಕ್ಕೂ ಹೆಚ್ಚು ಜನರ ಮೇಲೆ 1,200 ಪ್ರಕರಣಗಳನ್ನು ದಾಖಲಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕಳೆದ 3 ವರ್ಷಗಳಲ್ಲಿ ಯುಎಪಿಎ ಅಡಿಯಲ್ಲಿ ಸುಮಾರು 2,364 ಜನರನ್ನು ಬಂಧಿಸಲಾಗಿದೆ. 2019 ರಲ್ಲಿ 918 ಜನರ ಮೇಲೆ 437 ಪ್ರಕರಣಗಳು ದಾಖಲಾಗಿತ್ತು. 2020 ರಲ್ಲಿ 957 ಜನರ ಮೇಲೆ 557 ಪ್ರಕರಣಗಳು ಮತ್ತು 2021 ರಲ್ಲಿ 495 ಜನರ ಮೇಲೆ 275 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪೈಕಿ 1,100 ಜನರು ಇನ್ನೂ ಬಂಧನದಲ್ಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಕಲಿ ಭಯೋತ್ಪಾದಕ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

945 ಜನರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ (ಪಿಎಸ್‌ಎ) ಪ್ರಕರಣ ದಾಖಲಿಸಲಾಗಿದೆ, ಅವರಲ್ಲಿ ಸುಮಾರು 30% ಜನರು ಇನ್ನೂ ಬಂಧನದಲ್ಲಿದ್ದಾರೆ.

ಆಗಸ್ಟ್ 5, 2019 ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ 30 ದಿನಗಳಲ್ಲಿ ದಾಖಲಾದ ಮೊದಲ 290 ಜನರ ಪೈಕಿ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ಸೇರಿದ್ದಾರೆ.

ಪಿಎಸ್ಎ ಅಡಿಯಲ್ಲಿ 2019 ರಲ್ಲಿ ಸುಮಾರು 700, 2020 ರಲ್ಲಿ 160 ಮತ್ತು ಈ ವರ್ಷದ 7 ತಿಂಗಳಲ್ಲಿ 95 ಜನರನ್ನು ಬಂಧಿಸಲಾಗಿದೆ.

“ರಾಜ್ಯದ ಭದ್ರತಾ ಸನ್ನಿವೇಶದಲ್ಲಿ ಯಾವುದೆ ಬದಲಾವಣೆ ಇಲ್ಲದಿರುವಿಕೆಯ ಕಠೋರ ಜ್ಞಾಪನೆ ಇದು” ಎಂದು ಸಜಾದ್ ಲೋನ್ ನೇತೃತ್ವದ ಪೀಪಲ್ಸ್ ಕಾನ್ಫರೆನ್ಸ್‌‌ ಹೇಳಿದೆ. ಜಮ್ಮು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಒಕ್ಕೂಟ ಸರ್ಕಾರದ ಪ್ರತಿಪಾದನೆಗೆ ಈ ಅಂಕಿ ಅಂಶವು ವಿರುದ್ದವಾಗಿದೆ ಎಂದು ಪಕ್ಷ ಹೇಳಿದೆ.

ಇದನ್ನೂ ಓದಿ: ಜಮ್ಮುಕಾಶ್ಮೀರದ ರಾಜ್ಯತ್ವ ಮರುಸ್ಥಾಪನೆಯೆ ನಮ್ಮ ಪ್ರಮುಖ ಅಜೆಂಡಾ: ಗುಲಾಮ್‌ ನಬಿ ಆಝಾದ್‌

ನ್ಯಾಷನಲ್ ಕಾನ್ಫರೆನ್ಸ್ ಪ್ರಾಂತೀಯ ಅಧ್ಯಕ್ಷ ನಾಸಿರ್ ಅಸ್ಲಂ ವಾನಿ ಮಾತನಾಡಿ, ಕೈದಿಗಳನ್ನು ರಾಜ್ಯದ ಹೊರಗೆ ಸ್ಥಳಾಂತರಿಸಲು ಆಡಳಿತವು ಕನಿಷ್ಟಪಕ್ಷ ಪರಿಗಣಿಸಬೇಕು, ಇದರಿಂದ ಅವರು ತಮ್ಮ ಕುಟುಂಬಗಳನ್ನು ಭೇಟಿ ಮಾಡಬಹುದು ಎಂದು ಹೇಳಿದ್ದಾರೆ.

2020 ರಲ್ಲಿ ಪಿಎಎಸ್‌ಎ ಪ್ರಕರಣಗಳ ಸಂಖ್ಯೆ 2020 ರಲ್ಲಿ ಕಡಿಮೆಯಾಗಿದ್ದು, ಯುಎಪಿಎ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕಾನೂನು ತಜ್ಞರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಪಿಎಎಸ್‌ಎಗಿಂತಲೂ ಹೆಚ್ಚು ಕಠಿಣವಾಗಿರುವ ಯುಎಪಿಎ ಅಡಿಯಲ್ಲಿ ಹೆಚ್ಚಿನ ಜನರ ಮೇಲೆ ಪ್ರಕರಣ ದಾಖಲಿಸಲು ಪೊಲೀಸರು ಪ್ರಯತ್ನಿಸುವುದರಿಂದ ಈ ಬದಲಾವಣೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಯುಎಪಿಎ ಕಾಯ್ದೆಯು ಜನರನ್ನು ಹೆಚ್ಚು ಕಾಲ ಕಸ್ಟಡಿಯಲ್ಲಿಡಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ.

ಜೂನ್‌‌ 24 ರಂದು ಜಮ್ಮು ಕಾಶ್ಮೀರದ ರಾಜಕೀಯ ನಾಯಕರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಯುಎಪಿಎ ಮತ್ತು ಪಿಎಸ್ಎ ಅಡಿಯಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡಲು ಕೋರಿದ್ದರು.

ಇದನ್ನೂ ಓದಿ: ಜಮ್ಮುಕಾಶ್ಮೀರ – ನೌಕರರ ಮೇಲ್ವಿಚಾರಣೆಗೆ ಟಾಸ್ಕ್‌ಫೋರ್ಸ್; ಸಿಪಿಎಂ ನಾಯಕ‌ ತರಿಗಾಮಿ ವಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...