ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ರವಿ ಕುಮಾರ್‌‌ ದಹಿಯಾ ಅವರು ರಷ್ಯಾ ಒಲಿಂಪಿಕ್ಸ್‌ ಸಮಿತಿಯ ಜೌರ್ ಉಗುವ್ ಅವರ ವಿರುದ್ದ 4-7 ಅಂತರದಲ್ಲಿ ಸೋಲುಂಡಿದ್ದಾರೆ. ಈ ಮೂಲಕ ಅವರು ಪಂದ್ಯದಲ್ಲಿ ಬೆಳ್ಳಿಗೆ ಸಮಾಧಾನ ಪಟ್ಟುಕೊಂಡಿದ್ದಾರೆ.

ಬುಧವಾರ ನಡೆದ ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಎದುರು ರವಿ ದಹಿಯಾ ಭರ್ಜರಿ ಜಯಗಳಿಸಿದ್ದರು.

ಸುಶೀಲ್ ಕುಮಾರ್ ನಂತರ ಒಲಿಂಪಿಕ್ ಬೆಳ್ಳಿ ಗೆದ್ದ 2 ನೇ ಭಾರತೀಯ ಎಂಬ ಗೌರವಕ್ಕೆ ಕುಸ್ತಿಪಟು ರವಿ ಕುಮಾರ್ ದಹಿಯಾ ಅವರು ಪಾತ್ರರಾಗಿದ್ದಾರೆ. 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇದು ಭಾರತದ ಎರಡನೇ ಬೆಳ್ಳಿ ಮತ್ತು ಐದನೇ ಪದಕವಾಗಿದೆ.

ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ 

ಒಲಿಂಪಿಕ್-ಭಾರತಕ್ಕೆ ಕೈಜಾರಿದ ಚಿನ್ನ; ಬೆಳ್ಳಿಗೆ ಸಮಾಧಾನ ಪಟ್ಟುಕೊಂಡ ರವಿ ದಹಿಯಾ | Naanu Gauri
PC: Reuters / Leah Millis

ಟೋಕಿಯೊ-2020 ಒಲಿಂಪಿಕ್ಸ್‌ನಲ್ಲಿ ಭಾರತವು ಪ್ರಸ್ತತ 2 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಇದುವರೆಗೂ ಗೆದ್ದುಕೊಂಡಿದೆ. ಒಲಿಂಪಿಕ್ಸ್‌ ಮುಗಿಯಲು ಇನ್ನೂ 3 ದಿನಗಳು ಬಾಕಿಯಿದೆ.

ಫೈನಲ್‌‌ ಪಂದ್ಯದಲ್ಲಿ ರವಿ ಕುಮಾರ್ ಮೊದಲ ಸುತ್ತಿನಲ್ಲಿ 0-2 ಹಿನ್ನಡೆಯಲ್ಲಿದ್ದರು. ಮೊದಲ ಸುತ್ತು ಮುಗಿಯುವ ಹೊತ್ತಿಗೆ ಅವರು ತನ್ನ ಅಂಕವನ್ನು 2-4 ಏರಿಸಿದ್ದರು.

ಜೌರ್ ಉಗುವ್ ನಂತರ 7-2 ರ ಮುನ್ನಡೆ ಸಾಧಿಸಿದರು, ಆದರೂ ರವಿಕುಮಾರ್ 2 ಪಾಯಿಂಟ್‌ಗಳನ್ನು ತನ್ನ ತೆಕ್ಕೆಗೆ ಸೇರಿಸಿದರು. ಆದರೆ ಮೂರು ಅಂಕಗಳ ಕೊರತೆಯನ್ನು ನೀಗಿಸಲು ಅವರು ವಿಫಲವಾದರು.

ಇಂದು ಬೆಳಿಗ್ಗೆ ಭಾರತೀಯ ಪುರುಷರ ಹಾಕಿ ತಂಡವು  ಜರ್ಮನಿಯನ್ನು 5-4 ಅಂತರದಲ್ಲಿ ಸೋಲಿಸಿ ಕಂಚನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ!

LEAVE A REPLY

Please enter your comment!
Please enter your name here