Homeಮುಖಪುಟಜಮ್ಮು ಕಾಶ್ಮೀರದಲ್ಲಿ ನಕಲಿ ಭಯೋತ್ಪಾದಕ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

ಜಮ್ಮು ಕಾಶ್ಮೀರದಲ್ಲಿ ನಕಲಿ ಭಯೋತ್ಪಾದಕ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಕಲಿ ಭಯೋತ್ಪಾದಕ ದಾಳಿ ನಡೆಸಿದ ಆರೋಪದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ಇಬ್ಬರು ಪೊಲೀಸ್ ಗಾರ್ಡ್‌ಗಳನ್ನು ಬಂಧಿಸಲಾಗಿದೆ. ಭದ್ರತಾ ಪಡೆ ಮತ್ತು ಹಿರಿಯ ನಾಯಕರ ಗಮನ ಸೆಳೆಯುವ ಪ್ರಯತ್ನದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ತಾವೇ ದಾಳಿ ನಡೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಶ್ಫಾಕ್ ಅಹ್ಮದ್ ಮತ್ತು ಬಶರತ್ ಅಹ್ಮದ್ ಮತ್ತು ಅವರ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಶುಕ್ರವಾರ ಸಂಜೆ, ಇಬ್ಬರು ಅಪರಿಚಿತ ಬಂದೂಕುಧಾರಿಗಳು ನಮ್ಮ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಪೊಲಿಸರ ಬಳಿ ಹೇಳಿಕೊಂಡಿದ್ದರು. ಇದರಲ್ಲಿ ಆರೋಪಿ ಇಶ್ಫಾಕ್ ಅಹ್ಮದ್ ಅವರ ಕೈಗೆ ಗಾಯವಾಗಿತ್ತು.

ಇದನ್ನೂ ಓದಿ: ಜಮ್ಮು ಹೊರವಲಯದಲ್ಲಿ ಮತ್ತೆ ಮೂರು ಡ್ರೋಣ್‌ಗಳು ಪತ್ತೆ; ಭಾರತದ ಭದ್ರತಾ ಪಡೆಗಳ ತೀವ್ರ ನಿಗಾ

ಆರಂಭದಲ್ಲಿ ಪೊಲೀಸರು ಇದನ್ನು ಗಾರ್ಡ್‌ಗಳು ಆಕಸ್ಮಿಕವಾಗಿ ಬೆಂಕಿ ಹಚ್ಚಿದ್ದರಿಂದ ಬಿಜೆಪಿ ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದ್ದರು.

ಆದರೂ, ಹೆಚ್ಚಿನ ತನಿಖೆ ಇದು ಭಯೋತ್ಪಾದಕ ದಾಳಿ ಎಂದು ಸೂಚಿಸುತ್ತದೆ ಎನ್ನಲಾಗಿದೆ.

ಇಶ್ಫಾಕ್ ಅಹ್ಮದ್ ಬಿಜೆಪಿಯ ಜಿಲ್ಲಾ ಮುಖ್ಯಸ್ಥ ಮೊಹಮ್ಮದ್ ಶಫಿ ಮಿರ್ ಅವರ ಪುತ್ರ. ಸದ್ಯ ಮೊಹಮ್ಮದ್ ಶಫಿ ಮಿರ್, ಅವರ ಪುತ್ರ ಇಶ್ಫಾಕ್ ಅಹ್ಮದ್ ಮತ್ತು ಬಶರತ್ ಅಹ್ಮದ್ ಅವರನ್ನು ಅಮಾನತುಗೊಳಿಸಿದೆ. ಮುಂದಿನ ಕ್ರಮ ಕೈಗೊಳ್ಳಲು ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಬ್ಬರು ಬಿಜೆಪಿ ಪಂಚಾಯತ್ ಸದಸ್ಯರನ್ನು ಅನಂತ್‌ನಾಗ್ ಮತ್ತು ಸೊಪೋರ್ ಪ್ರದೇಶಗಳಲ್ಲಿ ಸುಲಿಗೆ ದಂಧೆ ನಡೆಸಿದ್ದಕ್ಕಾಗಿ ಬಂಧಿಸಲಾಯಿತು. ವ್ಯಾಪಾರಿಗಳು ಮತ್ತು ಸೇಬು ವ್ಯಾಪಾರಿಗಳಿಂದ ಹಣವನ್ನು ಸುಲಿಗೆ ಮಾಡಲು ಭಯೋತ್ಪಾದಕರಂತೆ ನಟಿಸಿದ ಆರೋಪ ಅವರ ಮೇಲಿತ್ತು.

ಕಳೆದ ವರ್ಷ ಮತ್ತೊಬ್ಬ ಬಿಜೆಪಿ ನಾಯಕ ತಾರಿಖ್ ಅಹ್ಮದ್ ಮಿರ್ ಅವರನ್ನು ಭಯೋತ್ಪಾದಕರ ಜೊತೆಗೆ ಸಂಪರ್ಕವಿದ್ದ ಕಾರಣಕ್ಕೆ ಎನ್ಐಎ ಬಂಧಿಸಿತ್ತು. ತಾರಿಖ್ ಅಹ್ಮದ್ ಮಿರ್ ಮೇಲೆ ಭಯೋತ್ಪಾದಕ ಗುಂಪು ಹಿಜ್ಬುಲ್ ಮುಜಾಹಿದ್ದೀನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪವಿದೆ.


ಇದನ್ನೂ ಓದಿ: ಜಮ್ಮುಕಾಶ್ಮೀರದ ರಾಜ್ಯತ್ವ ಮರುಸ್ಥಾಪನೆಯೆ ನಮ್ಮ ಪ್ರಮುಖ ಅಜೆಂಡಾ: ಗುಲಾಮ್‌ ನಬಿ ಆಝಾದ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...