Homeಕರ್ನಾಟಕನಾಳೆ ನರಗುಂದದಲ್ಲಿ ಹುತಾತ್ಮ ರೈತರ ದಿನಾಚರಣೆ: ದೆಹಲಿ ರೈತ ಚಳವಳಿ ನಾಯಕರ ಸಾಥ್

ನಾಳೆ ನರಗುಂದದಲ್ಲಿ ಹುತಾತ್ಮ ರೈತರ ದಿನಾಚರಣೆ: ದೆಹಲಿ ರೈತ ಚಳವಳಿ ನಾಯಕರ ಸಾಥ್

- Advertisement -
- Advertisement -

ರಾಜ್ಯದ ಗದಗ ಜಿಲ್ಲೆಯ ನರಗುಂದ ನವಲಗುಂದ ರೈತ ಬಂಡಾಯಗಾರರು ಚರಿತ್ರೆ ಸೃಷ್ಟಿಸಲು ಮುಂದಾಗಿದ್ದು, ನಾಳೆ (ಜುಲೈ 21) ಹುತಾತ್ಮ ರೈತರ ದಿನಾಚರಣೆ, ಬೃಹತ್ ಸಮಾವೇಶ ಆಚರಿಸಲು ಸಜ್ಜಾಗಿದ್ದಾರೆ. ದೆಹಲಿ ರೈತ ಹೋರಾಟದ ಚುಕ್ಕಾಣಿ ಹಿಡಿದಿರುವ ಸಂಯುಕ್ತ ಕಿಸಾನ್ ಮೋರ್ಚಾದ ನಾಯಜರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

’ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಜುಲೈ 21ರಂದು ನರಗುಂದದಲ್ಲಿ ವಿವಿಧ ರೈತ ಸಂಘಟನೆಗಳ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿ ರೈತರ ಸಮಾವೇಶ ನಡೆಸುವ ಮೂಲಕ ಚರಿತ್ರೆ ನಿರ್ಮಿಸಲಾಗುವುದು’ ಎಂದು ಮಹದಾಯಿ ಮಹಾ ವೇದಿಕೆ ಸಂಚಾಲಕ ಶಂಕ್ರಣ್ಣ ಅಂಬಲಿ ತಿಳಿಸಿದ್ದರು.

‘ಪ್ರತಿ ವರ್ಷ ಪ್ರತ್ಯೇಕ ವೇದಿಕೆಯಲ್ಲಿ ರೈತರು ಸಭೆ ನಡೆಸುತ್ತಿದ್ದರು. ಅದನ್ನು ನಿಲ್ಲಿಸಿ ಒಂದೇ ವೇದಿಕೆಯಲ್ಲಿ ಎಲ್ಲ ಸಂಘಟನೆಗಳ ರೈತರು ಭಾಗವಹಿಸಿ, ಒಗ್ಗಟ್ಟಾಗಿ ಸಮಸ್ಯೆಗಳನ್ನು ಚರ್ಚಿಸಿ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುವುದು’ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಹೋರಾಟ ನಿರತ ರೈತರಿಂದ ದೆಹಲಿಯಲ್ಲಿ ‘ಕಿಸಾನ್ ಮೆಟ್ರೋ’ ಆರಂಭ!

ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ನಾಳೆ ನಡೆಯಲಿರುವ 41 ನೇ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದ ವಿವಿಧ ರೈತ ಸಂಘಟನೆಗಳಾದ ಕರ್ನಾಟಕ ರಾಜ್ಯ ರೈತ ಸಂಘ, ಮಹದಾಯಿ ಮಹಾವೇದಿಕೆ ಕರ್ನಾಟಕ ರೈತ ಸೇನೆ, ರೈತ ಸೇನಾ ಕರ್ನಾಟಕ, ಕರ್ನಾಟಕ ಪ್ರಾಂತ ರೈತ ಸಂಘ, ಉತ್ತರ ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕಾರ್ಮಿಕ, ದಲಿತ ಪರ ಸಮಿತಿ, ಕರ್ನಾಟಕ ಜನಶಕ್ತಿ, ಜನಾಂದೋಲನ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ), ಕನ್ನಡ ಪರ ಸಂಘಟನೆಗಳು, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸದಸ್ಯರು ಸಮಾವೇಶದಲ್ಲಿ ಸೇರಲಿದ್ದಾರೆ.

ರೈತ ಬಂಡಾಯ ದಿನಾಚರಣೆ ಸಮಾವೇಶ ಯಶಸ್ಸಿಗೆ ಸ್ವಯಂ ಸೇವಕ ಸಮಿತಿ, ಸ್ವಾಗತ ಸಮಿತಿ, ಉಪಾಹಾರ ಸಮಿತಿ, ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಂಚಾಲಕರು ತಿಳಿಸಿದ್ದಾರೆ.


ಇದನ್ನೂ ಓದಿ: ನರಗುಂದ: ದಲಿತ ಬಾಲಕಿಯ ಸುಟ್ಟ ಮೃತದೇಹ ಪತ್ತೆ – ಅತ್ಯಾಚಾರ, ಕೊಲೆ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...