Homeಮುಖಪುಟಹೋರಾಟ ನಿರತ ರೈತರಿಂದ ದೆಹಲಿಯಲ್ಲಿ ‘ಕಿಸಾನ್ ಮೆಟ್ರೋ’ ಆರಂಭ!

ಹೋರಾಟ ನಿರತ ರೈತರಿಂದ ದೆಹಲಿಯಲ್ಲಿ ‘ಕಿಸಾನ್ ಮೆಟ್ರೋ’ ಆರಂಭ!

- Advertisement -
- Advertisement -

ರೈತರ ಹೋರಾಟದ ಅಖಾಡಗಳಾಗಿ ಬದಲಾಗಿರುವ ದೆಹಲಿ ಗಡಿಗಳಲ್ಲಿ ಹೊಸದಾಗಿ ‘ಕಿಸಾನ್ ಮೆಟ್ರೋ’ ಸೇವೆ ಆರಂಭವಾಗಿದೆ. ದೆಹಲಿಯ ಹೊರವಲಯಗಳಲ್ಲಿರುವ ಈ ಪ್ರತಿಭಟನಾ ಸ್ಥಳಗಳಲ್ಲಿ ಮೆಟ್ರೋ ಸೇವೆ ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ!. ಇಲ್ಲಿದೆ ನೋಡಿ ಕಿಸಾ‌ನ್ ಮೆಟ್ರೋ ಬಗೆಗಿನ ಮಾಹಿತಿ.

ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ಶುರುವಿಟ್ಟುಕೊಂಡ ದಿನದಿಂದಲೂ ಹೋರಾಟ ನಿರತರು ಒಂದು ಗಡಿಯಿಂದ ಮತ್ತೊಂದು ಗಡಿಗೆ ಸಂಚರಿಸಲು ಯಾವುದೇ ರೀತಿಯ ಸಾರಿಗೆ ಸೌಲಭ್ಯವಿಲ್ಲ. ಹೀಗಾಗಿ ಪ್ರತಿಭಟನಾ ಸ್ಥಳಗಳ ನಡುವೆ ಸಂಪರ್ಕ ಕಲ್ಪಿಸಲು ರೈತ ನಾಯಕರು ಕಿಸಾನ್ ಮೆಟ್ರೋ ಆರಂಭಿಸಿದ್ದಾರೆ.

ಏನಿದು ಕಿಸಾನ್ ಮೆಟ್ರೋ ?

ಹೊಲದಲ್ಲಿ ಉಳುಮೆ ಮಾಡಲು ಸೀಮಿತವಾಗಿದ್ದ ಟ್ರ್ಯಾಕ್ಟರ್‌ಗಳೇ ಇದೀಗ ಕಿಸಾನ್ ಮೆಟ್ರೋಗಳಾಗಿ ಪರಿವರ್ತನೆಯಾಗಿವೆ. ದೆಹಲಿಯ ವಿವಿಧ ಗಡಿಗಳ ನಡುವೆ ಸಂಪರ್ಕ ಕಲ್ಪಿಸುವ ಸಲುವಾಗಿ ರೈತ ಹೋರಾಟದ ಭಾಗವಾಗಿರುವ ಸ್ವಚ್ಛ ಕಿಸಾನ್ ಮೋರ್ಚಾ ಹಾಗೂ ಲೈಫ್ ಕೇರ್ ಫೌಂಡೇಶನ್, “ಕಿಸಾನ್ ಮೆಟ್ರೋ” ಸೇವೆಯನ್ನು ಆರಂಭಿಸಿವೆ.

ಇದನ್ನೂ ಓದಿ: ಚಿತ್ರರಂಗದ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳುವ ಕೇಂದ್ರದ ಹೊಸ ಕಾನೂನು: ಕಮಲ್ ಹಾಸನ್ ಸೇರಿ ಚಿತ್ರತಾರೆಯರ ವಿರೋಧ

ಸದ್ಯಕ್ಕೆ ಕಿಸಾನ್ ಮೆಟ್ರೊ ಸಂಚಾರ ಸೇವೆ ಸಿಂಘು ಮತ್ತು ಟಿಕ್ರಿ ಗಡಿಗಳ ನಡುವೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಈ ಸಂಚಾರ ಸೇವೆಯನ್ನು ಘಾಜಿಪುರ್ ಸೇರಿದಂತೆ ಉಳಿದ ಗಡಿಗಳಿಗೂ ವಿಸ್ತರಿಸಲಾಗುವುದು ಎಂದು ಮೇಕ್ ಶಿಫ್ಟ್ ಆಸ್ಪತ್ರೆಯ ನಿರ್ವಾಹಕ ಅವತಾರ್ ಸಿಂಗ್ ತಿಳಿಸಿದ್ದಾರೆ.

ಕಿಸಾನ್ ಮೆಟ್ರೋ ಸೇವೆ ಆರಂಭಕ್ಕೆ ಕಾರಣ ತಿಳಿಸಿರುವ ಸಿಂಗ್, “ಹೋರಾಟದಲ್ಲಿ ನಿರತರಾಗಿರುವ ಹಲವು ರೈತರು ಒಂದು ಗಡಿಯಿಂದ ಮತ್ತೊಂದು ಗಡಿಗೆ ಸಂಚರಿಸಲು ಇಚ್ಛಿಸುತ್ತಾರೆ. ಆದರೆ, ಸೂಕ್ತ ಸಾರಿಗೆ ಸಂಪರ್ಕವಿಲ್ಲದೆ ಗಡಿಗಳ ಮಧ್ಯ ಸಂಚಾರ ಕಷ್ಟಕರವಾಗಿತ್ತು. ಇದೇ ಕಾರಣಕ್ಕೆ ರೈತ ಹೋರಾಟದ ಪ್ರಮುಖ ಅಸ್ತ್ರ ಎನ್ನಿಸಿಕೊಂಡಿರುವ ಟ್ರ್ಯಾಕ್ಟರ್‌ಗಳನ್ನೇ ಕಿಸಾನ್ ಮೆಟ್ರೋಗಳನ್ನಾಗಿಸಿ ಸಾರಿಗೆ ಸಂಪರ್ಕ ಕಲ್ಪಿಸಿದ್ದೇವೆ ಎಂದರು.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿರುದ್ಧ KOCCA ಕಾಯ್ದೆ ಕೈಬಿಡದಂತೆ ಸುಪ್ರೀಂ ತಡೆಯಾಜ್ಞೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...