“ಹೊಸದಾಗಿ ಹುಟ್ಟಿಕೊಂಡಿರುವ ರೈತ ಸಂಘಟನೆಗಳನ್ನು ನಿಯಂತ್ರಿಸಬೇಕಿದೆ. ಪ್ರತಿ ಜಿಲ್ಲೆಯಲ್ಲಿ, ವಿಶೇಷವಾಗಿ ಉತ್ತರ ಹಾಗೂ ಪಶ್ಚಿಮ ಹರ್ಯಾಣದಲ್ಲಿ ಈ ಸಮಸ್ಯೆ ಇಲ್ಲ. ಇಲ್ಲೇ ನಮ್ಮವರನ್ನು ಸ್ವಯಂಸೇವರಕರನ್ನಾಗಿ ಮಾಡಿ. 500-1000ರ ಗುಂಪು ಮಾಡಿ. ಪ್ರತಿ ಜಾಗದಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಕೋಲು ಎತ್ತಿಕೊಳ್ಳಿ…”
-ಇದು ಹರಿಯಾಣದ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಅವರ ಪ್ರಚೋದನಾತ್ಮಕ ಹೇಳಿಕೆ. ರೈತ ಸಮುದಾಯದ ವಿರುದ್ಧ ಕಾರ್ಯಕರ್ತರನ್ನು ಖಟ್ಟರ್ ಪ್ರಚೋದಿಸಿರುವ ವಿಡಿಯೋ ಈಗ ವೈರಲ್ ಆಗಿದೆ.
ಇದನ್ನೂ ಓದಿರಿ: ಯುಪಿ ರೈತರ ಹತ್ಯೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ- ಬಿಜೆಪಿ ವಿರುದ್ಧ ಆಕ್ರೋಶ
“ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ. ಕೋಲು ಎತ್ತಿಕೊಂಡರೆ ಸಮಯದ ಬಗ್ಗೆ ಚಿಂತೆ ಮಾಡಬೇಡಿ. ತಿಂಗಳೆರಡು ತಿಂಗಳಾದರೂ, ಇಲ್ಲಿ ಕಲಿಯುವುದಕ್ಕಿಂತ ಅಲ್ಲಿ ಕಲಿಯುತ್ತೀರಿ. ಲೀಡರ್ ಆಗಿಬಿಡಬಹುದು. ಇದು ಇತಿಹಾಸದಲ್ಲಿ ದಾಖಲಾಗಿ ಬಿಡುತ್ತದೆ” ಎಂದು ಹಿಂಸೆಗೆ ಪ್ರೇರೇಪಿಸಿದ್ದಾರೆ.
ಭಾನುವಾರ ನಡೆದ ಬಿಜೆಪಿಯ ಕಿಸಾನ್ ಮೋರ್ಚಾದ ಸಭೆಯಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಲು ಸಿದ್ದವಿರುವವರು ಸಂಘಟಿತರಾಗುವಂತೆ ಕರೆ ನೀಡಿದ್ದಾರೆ. ರೈತ ಹೋರಾಟ ಆರಂಭವಾದಾಗಿನಿಂದ ರೈತರ ವಿರುದ್ಧ ಮಾತನಾಡುತ್ತಾ ಬಂದಿರುವ ಖಟ್ಟರ್ ಈ ವಿಡಿಯೋ ಹೋರಾಟ ನಿರಂತರ ರೈತರನ್ನು ಇನ್ನಷ್ಟು ಕೆರಳಿಸಿದೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷದಿಂದ ಪಂಜಾಬ್‌ನಲ್ಲಿ ನಂತರದಲ್ಲಿ ಹರ್ಯಾಣದಲ್ಲಿ ರೈತರು ಹೋರಾಟ ಆರಂಭಿಸಿದರು. ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿರುವ ಹರ್ಯಾಣ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಾಗಲೆಲ್ಲಾ, ತೀವ್ರವಾದ ಪ್ರತಿಭಟನೆ ವ್ಯಕ್ತವಾಗಲಾರಂಭಿಸಿತು.
ಕಳೆದ ತಿಂಗಳು ಬಸ್ತಾರಾ ಟಾಲ್‌ಪ್ಲಾಜ ಬಳಿ ಎಸ್‌ಡಿಎಂ ರೈತರ ತಲೆ ಒಡೆಯುವಂತೆ ಕರೆ ನೀಡಿದ್ದರು, ಆಗಲೂ ಹಿಂಸಾಚಾರ ನಡೆದಿತ್ತು. ಇದನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದರೂ ಕೂಡ. ಅಧಿಕಾರವನ್ನು ಪ್ರಶ್ನಿಸುತ್ತಿರುವ ರೈತರ ಮೇಲೆ ಪ್ರತಿಕಾರದ ನಡೆಯನ್ನು ಅನುಸರಿಸುತ್ತಿರುವ ಖಟ್ಟರ್ ಅವರ ನಿಲುವನ್ನು ರೈತ ಸಂಘಟನೆಗಳು ತೀವ್ರವಾಗಿ ವಿರೋಧಿಸಿ, ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಲಾಖಿಮ್‌ಪುರ್ ಖೇರಿ ಹಿಂಸಾಚಾರವನ್ನು ಪ್ರತಿಭಟಿಸಿ, ಹಾಗೂ ಖಟ್ಟರ್ ಹೇಳಿಕೆಯನ್ನು ಖಂಡಿಸಿ ಅಕ್ಟೋಬರ್ 4ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಹಾಗೂ ಆತನ ಗೂಂಡಾಪಡೆ ರೈತರ ಮೇಲೆ ವಾಹನಗಳನ್ನು ಹತ್ತಿಸಿ, ನಾಲ್ವರು ರೈತರನ್ನು ಕೊಂದಿದ್ದಾರೆ. ಸಾಂವಿಧಾನಿಕವಾಗಿ ಹೋರಾಡುತ್ತಿರುವವರ ಮೇಲೆ ಬಿಜೆಪಿಯವರು ಪ್ರಯೋಗಿಸುತ್ತಿರುವ ಕ್ರೌರ್ಯದ ಅಸ್ತ್ರ ಆತಂಕಕ್ಕೆ ಕಾರಣವಾಗಿದೆ.
ಛತ್ತೀಸ್‌ಘಡ ಮುಖ್ಯಮಂತ್ರಿ ಪ್ರತಿಕ್ರಿಯೆ
ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹೇಳಿಕೆ ಹಾಗೂ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಆಗಿರುವ ದಾಳಿಯನ್ನು ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ಅವರು ಕಟುವಾಗಿ ಟೀಕಿಸಿದ್ದಾರೆ.
“ಲಖಿಂಪುರ್ ಖೇರಿಗೆ ಭೇಟಿ ನೀಡಲು ಹಾಗೂ ಸಂತ್ರಸ್ತ ರೈತ ಕುಟುಂಬವನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ. ನಿನ್ನೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ. ಸೀತಾಪುರಕ್ಕೆ ಅವರು ತೆರಳದಂತೆ, ಯಾವುದೇ ವಾರಂಟ್ ಇಲ್ಲದೆಯೂ ತಡೆದಿದ್ದಾರೆ” ಎಂದು ರಾಯಪುರದಲ್ಲಿ ಹೇಳಿಕೆ ನೀಡಿದ್ದಾರೆ.
“ತನ್ನ ವಿರುದ್ಧದ ಯಾವುದೇ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಬಯಸುತ್ತಿದೆ. ಖಟ್ಟರ್ ಹೇಳಿಕೆ ಅವರ ಮನಸ್ಥಿತಿಯನ್ನು ಬಿಂಬಿಸುತ್ತಿದ್ದು, ಅವರು ಎಲ್ಲ ವಿರೋಧಗಳನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಇದು ಸರ್ವಾಧಿಕಾರವಾಗಿದೆ. ಇದನ್ನು ನಾವು ಸಹಿಸುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
BJP wants to suppress opposition & crush any voice that is against them. Haryana CM ML Khattar's statement also shows their mentality that wants to end every opposition. This is dictatorship. We will not tolerate it: Chhattisgarh CM Bhupesh Baghel
— ANI (@ANI) October 4, 2021



Fake news