Homeಮುಖಪುಟಮಗನ ಡ್ರಗ್ಸ್‌ ಪ್ರಕರಣದ ವಿಚಾರದಲ್ಲಿ ಶಾರುಖ್ ಮೇಲಿನ ದಾಳಿ ಅಸಹ್ಯವಾಗಿದೆ: ಶಶಿ ತರೂರ್‌

ಮಗನ ಡ್ರಗ್ಸ್‌ ಪ್ರಕರಣದ ವಿಚಾರದಲ್ಲಿ ಶಾರುಖ್ ಮೇಲಿನ ದಾಳಿ ಅಸಹ್ಯವಾಗಿದೆ: ಶಶಿ ತರೂರ್‌

- Advertisement -
- Advertisement -

ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್ ಅವರ ಮಗ ಆರ್ಯನ್ ಖಾನ್ ಬಂಧನಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಲಪಂಥೀಯ ಗುಂಪು ಮತ್ತು ಬಿಜೆಪಿ ಪರ ವಾಹಿನಿಗಳು ಶಾರುಖ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಶಶಿ ತರೂರು ಅವರು, ಈ ದಾಳಿ ಅಸಹ್ಯವಾಗಿದೆ ಎಂದು ಹೇಳಿದ್ದಾರೆ.

ಮುಂಬೈನ ಕಡಲ ತೀರದಲ್ಲಿ ಐಷಾರಾಮಿ ಕ್ರೂಸ್‌ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ, ಆರ್ಯನ್ ಖಾನ್‌ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದರು. ಅವರ ಜೊತೆಗೆ ಇತರ 8 ಮಂದಿಯನ್ನು ಕೂಡಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದಲ್ಲಿ ಇದುವರೆಗೂ ಒಟ್ಟು 12 ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಡ್ರಗ್ಸ್ ಪಾರ್ಟಿ: ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್‌ ಎನ್‌ಸಿಬಿ ವಶಕ್ಕೆ

ಪ್ರಕರಣದ ಕುರಿತು ಸೋಮವಾರ ಟ್ವೀಟ್ ಮಾಡಿರುವ ಶಶಿ ತರೂರ್‌, ‘‘ನಾನು ಡ್ರಗ್ಸ್‌ ಪ್ರಿಯನಲ್ಲ ಮತ್ತು ಎಂದಿಗೂ ಅದನ್ನು ಬಳಸಿಲ್ಲ. ಆದರೆ, ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್‌ ಖಾನ್‌ ಬಂಧನವಾದ ವಿಚಾರವನ್ನು ಇಟ್ಟುಕೊಂಡು ಶಾರುಖ್‌ ಖಾನ್‌ ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ಕಂಡು ಅಸಹ್ಯವಾಗಿದೆ. ಅವರ ವಿಚಾರದಲ್ಲಿ ಸ್ವಲ್ಪ ಸಹಾನುಭೂತಿ ಇರಬೇಕು ಜನರೇ. ಇಷ್ಟೊಂದು ತುಚ್ಚೀಕರಣ ಸರಿಯಲ್ಲ. 23 ವರ್ಷದ ಹುಡುಗನ ಮೇಲೆ ಇಷ್ಟು ಸಂತೋಷದಿಂದ ದಾಳಿ ಮಾಡುವುದು ಬೇಕಿಲ್ಲ” ಎಂದು ಬರೆದಿದ್ದಾರೆ.

ಮಂಗಳವಾರದಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ನ್ಯಾಯಾಲಯವು ಬಂಧನಕ್ಕೆ ಒಳಪಟ್ಟ ಅಬ್ದುಲ್ ಖಾದಿರ್ ಶೇಖ್ (30), ಶ್ರೇಯಸ್ ನಾಯರ್ (23), ಮನೀಶ್ ರಾಜಗರಿಯಾ (26) ಮತ್ತು ಅವಿನ್ ಸಾಹು (30) ಅವರನ್ನು ಅಕ್ಟೋಬರ್ 11 ರವರೆಗೆ ಎನ್‌ಸಿಬಿ ವಶಕ್ಕೆ ನೀಡಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಯೋ ಜಾಹಿರಾತಿನಿಂದ ಶಾರುಖ್ ಖಾನ್‌ನನ್ನು ಮುಖೇಶ್ ಅಂಬಾನಿ ಕಿತ್ತೆಸೆದರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...