ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿ 20 ವರ್ಷಗಳಾದ ಹಿನ್ನಲೆಯಲ್ಲಿ, ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಸಂಸದ್ ಟಿವಿಗೆ ನೀಡಿದ ಸಂದರ್ಶನಲ್ಲಿ, “ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ. ಅವರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಅವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಅಮಿತ್ ಶಾ ಅವರು ಮೋದಿ ಅವರನ್ನು ಉದ್ದೇಶಿಸಿ ಇದನ್ನು ಹೇಳಿದ್ದಾರೆ ಎಂದು ತಿಳಿಸಿದೆ.
ಸಂಸದ್ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಅಮಿತ್ ಶಾ, “ಸಾಕ್ಷರತೆಯನ್ನು ಮೌಲ್ಯಮಾಪನ ಮಾಡಿದಾಗ ರಾಷ್ಟ್ರದ ಪ್ರಗತಿಗೆ ಅದರ ಕೊಡುಗೆ ಏನೆಂದು ತಿಳಿಯುತ್ತದೆ. ಅನಕ್ಷರಸ್ಥ ವ್ಯಕ್ತಿ ದೇಶಕ್ಕೆ ಹೊರೆಯಾಗಿದ್ದು, ಆತನಿಗೆ ಸಂವಿಧಾನ ನೀಡಿದ ಹಕ್ಕುಗಳು ತಿಳಿಯುವುದಿಲ್ಲ. ಅಲ್ಲದೆ, ಆತನಿಗೆ ತನ್ನ ಕರ್ತವ್ಯಗಳು ಗೊತ್ತಿರುವುದಿಲ್ಲ. ಅಂತಹ ವ್ಯಕ್ತಿ ಹೇಗೆ ಉತ್ತಮ ಪ್ರಜೆಯಾಗುತ್ತಾನೆ” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ
ಇದಕ್ಕೆ ಸಾಮಾಜಿಕ ಜಾಲತಾಣಲ್ಲಿ ಕಾಂಗ್ರೆಸ್ ವ್ಯಂಗ್ಯವಾಡಿದೆ. “ಅಮಿತ್ ಶಾ ಅವರು ಮೋದಿಯವರನ್ನು ಗುರಿಯಾಗಿಸಿ ಮೊದಲ ಬಾರಿ ಸತ್ಯ ನುಡಿದಿದ್ದಾರೆ!” ಎಂದು ಅದು ತಿಳಿಸಿದೆ.
ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ಮಾತಾಡುವುದು ಕುರಿಮರಿಯ ಎದುರು ತೋಳ ಕಣ್ಣೀರು ಸುರಿಸಿದಂತೆ!
ಸಂವಿಧಾನದ ಸಮಾನತೆಯ ಆಶಯವನ್ನು @BJP4Karnataka ಪಾಲಿಸಿದ್ದೆಷ್ಟು ಹೇಳಲಿ.
ಮುಸ್ಲಿಮರ ಪರ ಮೊಸಳೆ ಕಣ್ಣೀರು ಸುರಿಸುವ ಬದಲು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ತಾವು ಬಿತ್ತಿದ ದ್ವೇಷಕ್ಕೆ, ಮಾಡಿದ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ
— Karnataka Congress (@INCKarnataka) October 12, 2021
ಇದಕ್ಕೆ ಕೆಲವರು ಪ್ರತಿಕ್ರಿಯಿಸಿದ್ದು, “ಶಾಲೆಗೆ ಹೋಗದೆ ಇದ್ದೋರು ದೇಶಕ್ಕೆ ಹೊರೆ. ಹಾಗೇನೇ ಈ ವ್ಯಕ್ತಿ ಮಾತ್ರ ದೇಶಕ್ಕೆ ಬರೆ ಮೇಲೆ ಬರೆ ಕೊಡ್ತಾ ಇದ್ದಾರೆ” ಎಂದು ಹೇಳಿದ್ದಾರೆ.
ನಿಜ, ಶಾಲೆಗೆ ಹೋಗದೆ ಇದ್ದೋರು ದೇಶಕ್ಕೆ ಹೊರೆ. ಹಾಗೇನೇ ಈ ವ್ಯಕ್ತಿ ಮಾತ್ರ ದೇಶಕ್ಕೆ ಬರೆ ಮೇಲೆ ಬರೆ ಕೊಡ್ತಾ ಇದ್ದಾರೆ. ??♂️ https://t.co/2lwqxCPUXM
— ಶಶಿಗೌಡ ನಿರವಾಣಿ | Shashigoud Niravani? (@SNiravani) October 12, 2021
ಇದನ್ನೂ ಓದಿ: ಸಚಿವ ಸುಧಾಕರ್ ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ ರವಿ: ವ್ಯಾಪಕ ಖಂಡನೆ
ಮೋನಿಶ್ ಅಲಿ ಅವರು, “ವಿದ್ಯಾವಂತರೇ ನಾಚಿಸುವಂತಹಾ ಮಾತನ್ನು ಅವಿದ್ಯಾವಂತ ಅಮಿತ್ ಶಾ ಹೇಳೋದಾದರೆ, ನಮ್ಮ ದೇಶ ನಿಜಕ್ಕೂ ಪ್ರಕಾಶಿಸುತ್ತಿದೆ. ಏನ್ ಕಾಲ ಬಂತು ನೋಡಿ ಅವಿದ್ಯಾವಂತ ಗುರು-ಶಿಷ್ಯರು ದೇಶವನ್ನಾಳಬೇಕಾದರೆ ವಿದ್ಯಾವಂತಿಕೆಯ ಮಾನದಂಡವೇ ಬದಲಾಯಿತು” ಎಂದು ಹೇಳಿದ್ದಾರೆ.
ವಿಧ್ಯಾವಂತರೇ ನಾಚಿಸುವಂತಹಾ ಮಾತನ್ನು ಅವಿಧ್ಯಾವಂತ ಅಮಿತ್ ಶಾ ಹೇಳೋದಾದರೆ ನಮ್ಮ ದೇಶ ನಿಜಕ್ಕೂ ಪ್ರಕಾಶಿಸುತ್ತಿದೆ ?
ಏನ್ ಕಾಲ ಬಂತು ನೋಡಿ ಅವಿದ್ಯಾವಂತ ಗುರು ಶಿಷ್ಯರು ದೇಶವನ್ನಾಳಬೇಕಾದರೆ ವಿಧ್ಯಾವಂತಿಕೆಯ ಮಾನದಂಡವೇ ಬದಲಾಯಿತು ? pic.twitter.com/B0p5P3Ly1h— Moonish Ali Bantwal (@moonishbantwal) October 12, 2021
ಸನ್ಮಾನ್ಯ ಮೋದಿಯನ್ನು ನೇರವಾಗಿ ಟೀಕಿಸಿದ ಅಮಿತ್ ಶಾ..
ಅಯ್ಯೋ ಇದು ಎಂತಹ ವಿಧಿ ??? pic.twitter.com/avlhZeQ4bw— AutoRaja ✋ (@AutoRaja1212) October 11, 2021
ಇದನ್ನೂ ಓದಿ: ಬಾಗಲಕೋಟೆ: ಇಳಕಲ್‌ನಲ್ಲಿ ಧಾರ್ಮಿಕ ಸಂಘಟನೆಗಳ ನಡುವೆ ಘರ್ಷಣೆ, 8 ಮಂದಿ ಬಂಧನ


