ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ರಾಮನ ಅವತಾರದಂತೆ ಉತ್ತರ ಪ್ರದೇಶದ ಬಿಜೆಪಿ ಬಿಂಬಿಸಿರುವ ವ್ಯಂಗ್ಯಚಿತ್ರ ಪ್ರಕಟಿಸಿದೆ.
ದಸರಾ ಸಂಭ್ರಮಾಚರಣೆಯ ಅಂಗವಾಗಿ ಉತ್ತರ ಪ್ರದೇಶದ ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವ್ಯಂಗ್ಯಚಿತ್ರದಲ್ಲಿ ಯೋಗಿ ಆದಿತ್ಯನಾಥ ಅವರನ್ನು ರಾಮನಂತೆ ಬಿಂಬಿಸಿ, ಅವರ ಕೈಗೆ ಬಿಲ್ಲು ಬಾಣವನ್ನು ನೀಡಲಾಗಿದೆ. ಆದಿತ್ಯನಾಥ ಅವರು ರಾವಣನ ಮೇಲೆ ಬಾಣ ಪ್ರಯೋಗಿಸುತ್ತಿದ್ದಾರೆ. ಹತ್ತು ತಲೆಯ ರಾವಣನ ಒಂಬತ್ತು ತಲೆಗಳು ಒಂದೊಂದು ಸಾಮಾಜಿಕ ಅನಿಷ್ಟವೆಂಬಂತೆ ಬಿಂಬಿಸಲಾಗಿದೆ.
“ಸಾಮಾಜಿಕ ಅನಿಷ್ಟಗಳು ಉತ್ತರ ಪ್ರದೇಶದಲ್ಲಿ ಅಳಿಯುತ್ತಿವೆ. ಭ್ರಷ್ಟಾಚಾರ, ಗುಂಡಾರಾಜ್ಯ, ಹಗರಣ, ಅಪರಾಧ, ಜಂಗಲ್ ರಾಜ್, ವಂಚನೆ, ಸಮಾಧಾನಪಡಿಸುವಿಕೆ, ಕೊರೊನಾ, ಮತಾಂತರದ ಮೇಲೆ ಬಿಜೆಪಿ ಸರ್ಕಾರ ದಾಳಿ ಮಾಡಿದೆ” ಎಂದು ಬಿಜೆಪಿ ಹೇಳಿಕೊಂಡಿದೆ.
यूपी से बुराई का हो रहा अंत…
भ्रष्टाचार, गुंडाराज, घोटाला, अपराध, जंगलराज, धांधली, तुष्टीकरण, कोरोना, जबरन धर्मांतरण पर योगी सरकार का प्रहार#BJP4UP pic.twitter.com/jxy3QzceXu
— BJP Uttar Pradesh (@BJP4UP) October 15, 2021
ಬಿಜೆಪಿ ವಕ್ತಾರ ಹರ್ಷ ಶ್ರೀನಿವಾಸ ಪ್ರತಿಕ್ರಿಯಿಸಿ, “ರಾವಣನನ್ನು ದುಷ್ಟತನದ ಪ್ರತೀಕವಾಗಿ ನೋಡಲಾಗುತ್ತದೆ. ಭ್ರಷ್ಟಾಚಾರ, ಅಪರಾಧ, ಗೂಂಡಾರಾಜ್‌ಗಳು ಕೂಡ ಸಮಾಜದ ದುಷ್ಟತನಗಳು. ಮುಖ್ಯಮಂತ್ರಿ ಆದಿತ್ಯನಾಥ ಅವರು ಸಾಂಕೇತಿಕವಾಗಿ ಅವುಗಳಿಗೆ ಗುರಿ ಇಟ್ಟಿದ್ದಾರೆ” ಎಂದು ಸಮರ್ಥಿಸಿದ್ದಾರೆ.
“ಭ್ರಷ್ಟಾಚಾರ, ಅಪರಾಧ ಕೃತ್ಯಗಳನ್ನು ರಾಜ್ಯದಲ್ಲಿ ತಡೆಯಲು ಮುಖ್ಯಮಂತ್ರಿ ಆದಿತ್ಯನಾಥ ಅವರು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಹೆಚ್ಚೇನು ಹೇಳದೆ ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಟೂನ್ ಬಳಸಿ ಹೇಳಬಹುದು” ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಅವರನ್ನು ಭಗವಾನ್ ರಾಮನಿಗೆ ಹೋಲುವಂತೆಯೇ ಬಿಂಬಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರೀನಾಟೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಯುಪಿ ಮುಖ್ಯಮಂತ್ರಿಯವರನ್ನು ರಾಮನಂತೆ ಪೋಸ್ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಮನು ನಂಬಿಕೆ, ಘನತೆ, ನ್ಯಾಯ ಮತ್ತು ಸತ್ಯದ ಸಂಕೇತ. ಯೋಗಿ ಆದಿತ್ಯನಾಥ್ ಅವರು ಕಾರ್ಟೂನ್‌ನಲ್ಲಿ ಗುರಿ ಇಟ್ಟಿರುವ ವಿಚಾರಗಳು ಉತ್ತರ ಪ್ರದೇಶದಲ್ಲಿ ವಿಜೃಂಭಿಸುತ್ತಿವೆ” ಎಂದು ಶ್ರೀನಾಟೆ ಹೇಳಿದ್ದಾರೆ.
“ಅನ್ಯಾಯದಿಂದ ಅಧೀನದವರೆಗೂ, ಮಹಿಳೆಯರ ವಿರುದ್ಧದ ಅಪರಾಧದವರೆಗೆ, ಇಡೀ ರಾಜ್ಯದಲ್ಲಿ ಹಬ್ಬಿರುವ ಭಯ ಮತ್ತು ಭಯೋತ್ಪಾದನೆಯವರೆಗೆ ರಾಜ್ಯದ ಮುಖ್ಯಮಂತ್ರಿ ಉತ್ತರದಾಯಿ ಆಗುತ್ತಾರೆ. ಸಾರ್ವಜನಿಕ ಅಭಿಪ್ರಾಯವನ್ನು ಗೌರವಿಸುವ ಬದಲು, ಅವರು ಇಂದು ಯುಪಿಯಲ್ಲಿ ರೈತರನ್ನು ಸದೆಬಡಿಯಲು ನಿಂತಿದ್ದಾರೆ. ರಾಜ್ಯದ ಜನತೆ ಅವರ ದುರಾಡಳಿತಕ್ಕೆ ತಕ್ಕ ಉತ್ತರ ನೀಡುತ್ತಾರೆ ” ಎಂದು ಎಚ್ಚರಿಸಿದ್ದಾರೆ.
ಮುಂದಿನ ಚುನಾವಣೆಯ ಭಾಗವಾಗಿ ಕಾರ್ಟೂನ್‌ಗಳನ್ನು ಯುಪಿ ಬಿಜೆಪಿ ಪೋಸ್ಟ್ ಮಾಡುತ್ತಿದೆ. ಕೆಲವು ದಿನಗಳ ಹಿಂದೆ “ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಹಿಂದುತ್ವದ ವೇಷ ಧರಿಸುತ್ತಿದ್ದಾರೆ” ಎಂಬ ಕಾರ್ಟೂನ್‌ಅನ್ನು ಟ್ವಿಟ್ ಮಾಡಲಾಗಿತ್ತು.
रखे व्रत, लगाए जयकारे, पहनी रुद्राक्ष की माला
यूपी में चुनाव आते ही प्रियंका ने भेष बदल डाला #BJP4UP pic.twitter.com/dJBc9Hv6dT— BJP Uttar Pradesh (@BJP4UP) October 12, 2021
ಇದನ್ನೂ ಓದಿರಿ: ರೈತ ಹೋರಾಟ ನೆಲದಲ್ಲಿ ಕೊಲೆ: ನಿಹಾಂಗ್ ಬೆಂಬಲಿತ ವ್ಯಕ್ತಿ ಪೊಲೀಸರಿಗೆ ಶರಣು


