ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಮೈತ್ರಿಪಕ್ಷ ಕಾಂಗ್ರೆಸ್‌ನ ಉಪಯುಕ್ತತೆಯನ್ನು ಪ್ರಶ್ನಿಸಿದ್ದಾರೆ. ಠೇವಣಿಯನ್ನೂ ಉಳಿಸಿಕೊಳ್ಳಲು ಆಗದ ಕಾಂಗ್ರೆಸ್‌ಗೆ ಒಂದು ವಿಧಾನಸಭಾ ಉಪಚುನಾವಣೆಯನ್ನು ಬಿಟ್ಟು ಕೊಡಬೇಕಿತ್ತೇ ಎಂದು ಅವರು ಆಶ್ಚರ್ಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ಬಿಹಾರದ ಮಹಾಮೈತ್ರಿಯಿಂದ ಹೊರ ನಡೆದ ಕಾಂಗ್ರೆಸ್‌ಗೆ ಲಾಲು ಪ್ರಸಾದ್ ಯಾದವ್ ತಿರುಗೇಟು ನೀಡಿದ್ದಾರೆ.
“ಕಾಂಗ್ರೆಸ್‌ನ ಮಹಾಮೈತ್ರಿ ಎಂದರೇನು?” ಎಂದು ಲಾಲು ಪ್ರಸಾದ್ ಕೇಳಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಡಲು RJD ನಿರಾಕರಿಸಿದ್ದಕ್ಕಾಗಿ ತಮ್ಮ ಮೈತ್ರಿಯನ್ನು ಕಾಂಗ್ರೆಸ್ ಮುರಿದುಕೊಂಡಿದ್ದರ ಬಗ್ಗೆ ಮಾತನಾಡುತ್ತಿದ್ದರು.
ಇದನ್ನೂ ಓದಿ: ಕನ್ಹಯ್ಯ, ಜಿಗ್ನೇಶ್ ಮತ್ತು ಹಾರ್ದಿಕ್ ಮೇಲೆ ‘ಬಿಹಾರ ಕಾಂಗ್ರೆಸ್’ಗೆ ನಂಬಿಕೆ – RJD ಜೊತೆ ಮೈತ್ರಿಗೆ ಬ್ರೇಕ್
“ತನ್ನ ಠೇವಣಿಯನ್ನೂ ಉಳಿಸಿಕೊಳ್ಳಲು ಆಗದ ಕಾಂಗ್ರೆಸ್‌ಗೆ ಸೋಲಲು ಬೇಕಾಗಿ ನಾವು ಒಂದು ಸ್ಥಾನವನ್ನು ಬಿಟ್ಟುಕೊಡಬೇಕಿತ್ತೇ?” ಎಂದು ಅವರು ತಿರಸ್ಕಾರದಿಂದ ಹೇಳಿದ್ದಾರೆ. ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಆರ್‌ಜೆಡಿಯ ಉತ್ತಮವಾಗಿ ಪ್ರದರ್ಶನ ನೀಡಿದ್ದು, ಆದರೆ ಮತ್ರಿ ಪಕ್ಷವಾದ ಕಾಂಗ್ರೆಸ್ ಕಳಪೆಯಾಗಿ ಪ್ರದರ್ಶನ ನೀಡಿತ್ತು. ಈ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್ ಅನ್ನು ಕಾಲೆಳೆದಿದ್ದಾರೆ. ಮಹಾಮೈತ್ರಿಯನ್ನು ಮುರಿದು ಆರ್‌ಜೆಡಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಬಿಹಾರ ಕಾಂಗ್ರೆಸ್ ನಾಯಕ ಚರಣ್ ದಾಸ್ ಅವರನ್ನು ಲಾಲು ಪ್ರಸಾದ್ ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿ ಆರ್‌ಜೆಡಿ ನೇತೃತ್ವದ ಮೈತ್ರಿಕೂಟದೊಂದಿಗೆ ಕಾಂಗ್ರೆಸ್ ಇನ್ನು ಮುಂದೆ ಇರುವುದುಲ್ಲ ಎಂದು ಚರಣ್ ದಾಸ್ ಇತ್ತೀಚೆಗೆ ಹೇಳಿದ್ದರು ಮತ್ತು ಆರ್‌ಜೆಡಿ ಬಿಜೆಪಿಯೊಂದಿಗೆ ತೆರೆಮರೆಯಲ್ಲಿ ಸಂಬಂಧ ಹೊಂದಿದೆ ಎಂದು ಆರೋಪಿಸಿದ್ದರು.
ಅಕ್ಟೋಬರ್ 30 ರಂದು ನಡೆಯಲಿರುವ ಎರಡು ಕ್ಷೇತ್ರಗಳ ಉಪಚುನಾವಣೆಗಳ ಕ್ಷೇತ್ರ ಹಂಚಿಕೆಯಲ್ಲಿ ಮಹಾಮೈತ್ರಿಯ ಪ್ರಮುಖ ಪಕ್ಷಗಳ ನಡುವೆ ಬಿರುಕು ಮೂಡಿದೆ. ಕಾಂಗ್ರೆಸ್ ಮೈತ್ರಿಯಿಂದ ಹೊರ ಬಂದು ಸ್ವಂತ ಬಲದಿಂದ ಸ್ಪರ್ಧಿಸುವುದಾಗಿ ಹೇಳಿದೆ. ಜೊತೆಗೆ ಆರ್‌ಜೆಡಿ ಕೂಡಾ ಎರಡು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.
ಇದನ್ನೂ ಓದಿ: ಬಿಹಾರ: ಜಾತಿ ಗಣತಿಗೆ ಒಕ್ಕೂಟ ಸರ್ಕಾರ ನಕಾರ; ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು


