Homeಮುಖಪುಟಬಿಹಾರ: ಜಾತಿ ಗಣತಿಗೆ ಒಕ್ಕೂಟ ಸರ್ಕಾರ ನಕಾರ; ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು

ಬಿಹಾರ: ಜಾತಿ ಗಣತಿಗೆ ಒಕ್ಕೂಟ ಸರ್ಕಾರ ನಕಾರ; ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು

- Advertisement -
- Advertisement -

ಬಿಹಾರ ರಾಜಕೀಯದಲ್ಲಿ ಭಾರಿ ತಲ್ಲಣ ಮೂಡಿಸಿದ್ದ ‘ಜಾತಿ ಗಣತಿ’ಯನ್ನು ಮಾಡುವುದಿಲ್ಲ ಎಂದು ಒಕ್ಕೂಟ ಸರ್ಕಾರವು ಶುಕ್ರವಾರದಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಲ್ಲಿನ ವಿರೋಧ ಪಕ್ಷಗಳು ಬಿಜೆಪಿ ಹಿಂದುಳಿದ ಜಾತಿ(ಒಬಿಸಿ)ಗಳಿಗೆ ಮೋಸ ಮಾಡಿದೆ ಎಂದು ಆರೋಪಿಸಿವೆ. ಜಾತಿ ಗಣತಿಗೆ ಬೆಂಬಲ ನೀಡದಿದ್ದರೆ ಒಬಿಸಿ ಸಚಿವರು ಮತ್ತು ಬಿಜೆಪಿಯ ಸಂಸದರನ್ನು ಬಹಿಷ್ಕರಿಸುವಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಜನರನ್ನು ಕೇಳಿಕೊಂಡಿದ್ದಾರೆ.

“ಬಿಜೆಪಿ ಮತ್ತು ಆರೆಸ್ಸೆಸ್ ಹಿಂದುಳಿದ ಜಾತಿಗಳನ್ನು ಏಕೆ ದ್ವೇಷಿಸುತ್ತವೆ? ಜಾತಿ ಜನಗಣತಿಯು ಎಲ್ಲಾ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಎಲ್ಲದರ ಸತ್ಯಾಂಶ ಹೊರಬರುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಜಾತಿಯಾಧಾರಿತ ಜನಗಣತಿಗೆ ನಕಾರ: ಕೇಂದ್ರದ ವಿರುದ್ಧ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ವಾಗ್ದಾಳಿ

ಆದರೆ ಒಕ್ಕೂಟ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ಜಾತಿ ಗಣತಿಯು ಅಪ್ರಾಯೋಗಿಕ ಬೇಡಿಕೆ ಎಂದು ಹೇಳಿದೆ. “2011 ರ ತಪ್ಪನ್ನು ಪುನರಾವರ್ತಿಸುವುದು ಸರಿಯಲ್ಲ. ಇದು ಅಪ್ರಾಯೋಗಿಕ ಬೇಡಿಕೆ. 2011 ರ ಜನಗಣತಿಯಲ್ಲಿ ಸುಮಾರು 4.28 ಲಕ್ಷ ಜಾತಿಗಳ ಬಗ್ಗೆ ಜನರು ಹೇಳಿದ್ದು ಕಂಡುಬಂದಿವೆ” ಎಂದು ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರು,

“ಹೆಚ್ಚಿನ ಜನರು ತಮ್ಮ ಜಾತಿಗಳನ್ನು ಉಲ್ಲೇಖಿಸಿಲ್ಲ. ಒಕ್ಕೂಟ ಸರ್ಕಾರವು 4.28 ಲಕ್ಷ ಕಾಲಮ್‌ಗಳನ್ನು ರಚಿಸುವುದು ಅಪ್ರಾಯೋಗಿಕವೆಂದು ಕಂಡುಕೊಂಡಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ. 2011 ರಲ್ಲಿ ನಡೆದ ಸಾಮಾಜಿಕ-ಆರ್ಥಿಕ ಗಣತಿಯಲ್ಲಿ, ಪ್ರಸ್ತುತ ಜಾತಿ ಆಧಾರಿತ ಜನಗಣತಿಯನ್ನು ನಡೆಸುವುದು ಸಂಪೂರ್ಣವಾಗಿ ಅಪ್ರಾಯೋಗಿಕವಾಗಿದೆ ಎಂದು ಒಕ್ಕೂಟ ಸರ್ಕಾರವು ಕಂಡುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ, ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಡಿಯು ಜಾತಿ ಗಣತಿಯ ಪರವಾಗಿ ಇದೆ. ಸ್ವತಃ ಮುಖ್ಯಮಂತ್ರಿ ಅವರೇ ಆಗಸ್ಟ್‌ ತಿಂಗಳಲ್ಲಿ ಜಾತಿ ಗಣತಿ ವಿಚಾರವಾಗಿ ಸರ್ವ ಪಕ್ಷ ನಿಯೋಗವೊಂದನ್ನು ಪ್ರಧಾನಿ ಭೇಟಿಗೆ ಕರೆದೊಯ್ದಿದ್ದರು.

ಇದನ್ನೂ ಓದಿ: ಜಾತಿಗಣತಿಗೆ ಸರ್ಕಾರಗಳು ಹಿಂಜರಿಯುತ್ತಿರುವುದೇಕೆ? ಕರ್ನಾಟಕದ ವರದಿ ಬಿಡುಗಡೆಯಾಗಿಲ್ಲವೇಕೆ?

ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿ ಒಮ್ಮೆಯಾದರೂ ನಡೆಯಲೇ ಬೇಕು- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...