ತಮಿಳಿನ ಖ್ಯಾತ ನಟ ಸೂರಿಯಾ ಅಭಿನಯದ ಹಾಗೂ ಅವರ 2ಡಿ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿರುವ ಬಹುನಿರೀಕ್ಷಿತ ‘ಜೈ ಭೀಮ್’ ಸಿನಿಮಾ ನವೆಂಬರ್ 02 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಪ್ರೀಮಿಯರ್ ಶೋನಲ್ಲಿ ಚಿತ್ರ ವೀಕ್ಷಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್ ‘ಜೈ ಭೀಮ್’ ನಂತಹ ಮತ್ತಷ್ಟು ಚಿತ್ರಗಳು ಬರಲಿ ಎಂದು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಪ್ರೇಕ್ಷಕರ ಮನಸ್ಸಿನ ಮೇಲೆ ಪ್ರಭಾವ ಬೀರುವುದು ಮತ್ತು ಆ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಉತ್ತಮ ಕಲೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಚಿತ್ರವನ್ನು ನಿರ್ಮಾಣ ಮಾಡಿರುವ ಗೆಳೆಯ ಸೂರಿಯಾ ಅವರು ‘ಇರುವ ಬುಡಕಟ್ಟು ಸಮುದಾಯ ಶಿಕ್ಷಣ ಸಂಸ್ಥೆಗೆ’ ಒಂದು ಕೋಟಿ ರೂ ದೇಣಿಗೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಜೈ ಭೀಮ್ ನಂತಹ ಚಿತ್ರಗಳು ಮತ್ತಷ್ಟು ಬರಲಿ. ಚಿತ್ರತಂಡಕ್ಕೆ ಶುಭವಾಗಲಿ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಕೋರ್ಟ್ ರೂಮ್ ಡ್ರಾಮಾ ಎಂದೇ ಗುರುತಿಸಲಾಗಿರುವ ‘ಜೈ ಭೀಮ್’ ಬಿಡುಗಡೆಗೂ ಮುನ್ನವೇ ಸಾಕಷ್ಟು ಗಮನ ಸೆಳೆದಿದೆ. ಆದಿವಾಸಿ ಮಹಿಳೆಯೊಬ್ಬಳ ನ್ಯಾಯಕ್ಕಾಗಿನ ಹೋರಾಟವು ಟ್ರೇಲರ್‌ನಲ್ಲಿ ಕಂಡುಬಂದಿದೆ.
படம் எடுத்ததோடு நில்லாமல், பழங்குடியினர் பாதுகாப்புச் சங்கத்தின் மேம்பாட்டுக்கு ரூ.1 கோடி நிதியினை வழங்கிய நண்பர் @Suriya_offl அவர்களை எத்தனை பாராட்டினாலும் தகும்!
படக்குழுவினருக்குப் பாராட்டுகள்! வாழ்த்துகள்!#JaiBhim போன்ற படங்கள் இன்னும் ஏராளமாக வரவேண்டும்! pic.twitter.com/lF0FjySD5Y
— M.K.Stalin (@mkstalin) November 1, 2021
ಗರ್ಭಿಣಿ ಮಹಿಳೆಯೊಂದಿಗೆ ಮಗು ಹಾಗೂ ವಕೀಲರಾಗಿ ಸೂರ್ಯ ಕಾಣಿಸಿಕೊಂಡಿರುವ ಪೋಸ್ಟರ್‌ಅನ್ನು ಹಂಚಿಕೊಳ್ಳಲಾಗಿದೆ. ಜೈ ಭೀಮ್ ಸಿನಿಮಾವನ್ನು ಜ್ಞಾನವೇಲ್ ನಿರ್ದೇಶಿಸಿದ್ದು, 2ಡಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸೂರಿಯಾ ಹಾಗೂ ಜ್ಯೋತಿಕ ನಿರ್ಮಾಣ ಮಾಡಿದ್ದಾರೆ. ಬುಡಕಟ್ಟು ಸಮುದಾಯಗಳ ಪರವಾಗಿ ಹೋರಾಟ ಮಾಡುವ ವಕೀಲನಾಗಿ ಸೂರಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
‘ನ್ಯಾಯದ ಅನ್ವೇಷಣೆಯಲ್ಲಿನ ಧೈರ್ಯ ಮತ್ತು ನಂಬಿಕೆಯ ಈ ಕಥೆಯನ್ನು ತೆರೆಗೆ ತರಲು ಹೆಮ್ಮೆಯಾಗುತ್ತಿದೆ’ ಎಂದು ಸೂರಿಯಾ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಹಿಂದೆ ಬರೆದುಕೊಂಡಿದ್ದರು. ‘ಸೂರರೈ ಪೋಟ್ರು’ ಯಶಸ್ಸಿನ ಬಳಿಕ ಬಿಡುಗಡೆಯಾಗುತ್ತಿರುವ ಸೂರಿಯಾ ಅಭಿನಯದ ಸಿನಿಮಾ ಇದಾಗಿದೆ.
‘ಕರ್ಣನ್’ ಖ್ಯಾತಿಯ ರಜಿಶಾ ವಿಜಯನ್ ಪ್ರಧಾನ ಮಹಿಳಾ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಕಾಶ್ ರಾಜ್, ರಾವ್ ರಮೇಶ್ ಮತ್ತು ಲಿಜೋ ಮೋಲ್ ಜೋಸ್ ಥರದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿದ್ದಾರೆ. ‘ಜೈ ಭೀಮ್’ ಸಿನಿಮಾ ತಮಿಳು ಮತ್ತು ತೆಲಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸೀನ್ ರೋಲ್ಡನ್ ಅವರ ಸಂಗೀತ, ಎಸ್.ಆರ್.ಖದೀರ್ ಅವರ ಸಿನಿಮಾಟೋಗ್ರಫಿ, ಪಿಲೋಮಿನ್ ರಾಜ್ ಅವರ ಸಂಕಲನ ಈ ಸಿನಿಮಾಕ್ಕಿದೆ.
ಇದನ್ನೂ ಓದಿ: ಟೀಸರ್ ಬಿಡುಗಡೆ: ನವೆಂಬರ್ 02 ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಜೈಭೀಮ್



It is very unfortunate that even 75 years we resting facing caste system in our
society they should be hanged