ಡ್ರಗ್ಸ್-ಸಂಬಂಧಿತ ಆರೋಪಗಳ ಮೇಲೆ ನಟ ಶಾರುಖ್‌ಖಾನ್ ಅವರು ಪುತ್ರ ಆರ್ಯನ್ ಖಾನ್ ಸೆರೆಮನೆಯಲ್ಲಿದ್ದಾಗ, ಶಾರುಖ್ ಖಾನ್ ಅವರಿಗೆ ಅನೇಕರು ಬೆಂಬಲ ನೀಡಿದ್ದರು.
ಚಿತ್ರರಂಗದ ಬಂಧುಗಳು ಮತ್ತು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ- ಕಾಂಗ್ರೆಸ್‌ನಿಂದ ಬೆಂಬಲ ದೊರೆತ್ತಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಆ ಸಮಯದಲ್ಲಿ ಶಾರುಖ್ ಖಾನ್ ಅವರಿಗೆ ಪತ್ರ ಬರೆದಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಆರ್ಯನ್ ಅವರನ್ನು ಇರಿಸಲಾಗಿದ್ದ ಆರು ದಿನಗಳ ನಂತರ ರಾಹುಲ್ ಗಾಂಧಿ ಅವರು ಶಾರುಖ್ ಖಾನ್ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ರಾಹುಲ್ ಗಾಂಧಿಯವರು ಶಾರುಖ್ ಖಾನ್ ಅವರಿಗೆ “ದೇಶವು ನಿಮ್ಮೊಂದಿಗಿದೆ” ಎಂದು ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.
ಅಕ್ಟೋಬರ್ 28ರಂದು ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಅಂತಿಮವಾಗಿ ಜಾಮೀನು ನೀಡಿತು. ಕಳೆದ ಶನಿವಾರ ಜಾಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ ಬಳಿಕ ಆರ್ಯನ್ ಬಿಡುಗಡೆಯಾಗಿದ್ದರು. ಮುಂಬೈ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಮೂರು ವಾರಗಳ ಜೈಲು ವಾಸದ ನಂತರ ಆರೋಪಿ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ರೂಸ್ ಹಗಡಿನಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಿದ ಕೆಲವು ಗಂಟೆಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ರನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿತ್ತು. ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಅವರಿಗೆ ಈ ಹಿಂದೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿತ್ತು.
ಪ್ರಕರಣದಲ್ಲಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿರುದ್ಧ ಆರ್ಯನ್ ಖಾನ್‌ಗೆ ಮತ್ತು ಸಹ-ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಮೂರು ದಿನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಆರ್ಯನ್ ಖಾನ್ ಪರ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಆರ್ಯನ್ ಖಾನ್ ಬಳಿ ಯಾವುದೇ ಮಾದಕ ದ್ರವ್ಯ ಪತ್ತೆಯಾಗಿಲ್ಲ ಎಂಬುದನ್ನು ಒತ್ತಿ ಹೇಳಿದ್ದರು. ವಾಟ್ಸ್‌ಆಪ್ ಚಾಟ್‌ಗಳ ಆಧಾರದಲ್ಲಿ ಆರ್ಯನ್ ಡ್ರಗ್ ಜಾಲದಲ್ಲಿದ್ದರು ಎಂದು ನಿರೂಪಿಸಲಾಗದು ಎಂದು ಕೋರ್ಟ್ ಹೇಳಿತ್ತು.
ಇದನ್ನೂ ಓದಿರಿ: ‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ



ಕಳ್ಳನಿಗೆ ಕಳ್ಳ ಸಾಥ್ ಕೊಡೋದು ಅಂದ್ರೆ ಇದೆ .ಡ್ರಗ್ರ್ಸ್ ಪೆಡ್ಲರ್ ಒಬ್ಬ ಇಂಥ ಮಾತು ಹೇಳೋದು ಅಂದ್ರೆ ಸಮಾಜವನ್ನು ಈ ಪಪ್ಪು ಯಾವ ರೀತಿ ಮಾಡಲು ಹೋಗಿದ್ದಾರೆ ಅನ್ನೋದು ಸಹಜವಾಗಿಯೇ ಜನರಿಗೆ ಅರ್ಥ ಆಗುತ್ತೇ …..
ಸ್ವಗೋಶಿತ ಗಾಂಧಿ ಕುಟುಂಬ ಹಿಂದೆ ಯಿಂದ ಇದೇ ಮಾಡಿರೋದು