“ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌ಗೆ ಸುಳ್ಳು ಹೇಳಿದೆ” ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಆರೋಪಿಸಿದ್ದು, #ModiGovtLied ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
ದೆಹಲಿ ಮತ್ತು ಉತ್ತರದ ಭಾರತದ ರಾಜ್ಯಗಳಲ್ಲಿ ಗಾಳಿಯ ಗುಣಮಟ್ಟ ಹದಗೆಡಲು ಕೃಷಿ ತ್ಯಾಜ್ಯ ಸುಡುವಿಕೆ ಪ್ರಮುಖ ಕಾರಣವಲ್ಲ ಎಂದಿರುವ ಕೇಂದ್ರ ಸರ್ಕಾರ, ಒಟ್ಟು ವಾಯು ಮಾಲಿನ್ಯದಲ್ಲಿ ಶೇಕಡಾ 10ರಷ್ಟು ಮಾಲಿನ್ಯ ಮಾತ್ರ ಕೃಷಿ ತ್ಯಾಜ್ಯ ಸುಡುವುದರಿಂದ ಆಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದು ಅಪ್ಪಟ ಸುಳ್ಳಿನ ಸಂಗತಿ ಎಂದು ಜನರು ವಾದಿಸಿದ್ದಾರೆ.
ಮಾಲಿನ್ಯವನ್ನು ತಗ್ಗಿಸಲು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೂರು ಕ್ರಮಗಳನ್ನು ತಿಳಿಸಿದೆ. ಅವುಗಳೆಂದರೆ: ಬೆಸ-ಸಮ ವಾಹನ ಯೋಜನೆ, ದೆಹಲಿಯಲ್ಲಿ ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸುವುದು ಮತ್ತು ಕಠಿಣವಾದ ಲಾಕ್‌ಡೌನ್ ಜಾರಿ.
ವಾಯು ಮಾಲಿನ್ಯಕ್ಕೆ ಸಾರಿಗೆ, ಕೈಗಾರಿಕೆಗಳು, ವಾಹನ ದಟ್ಟಣೆಯನ್ನು ಹೊರತುಪಡಿಸಿ ಕೆಲವು ಪ್ರದೇಶಗಳಲ್ಲಿ ಹುಲ್ಲು ಸುಡುತ್ತಿರುವುದು ಕಾರಣ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ (ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ) ವಾಯುಮಾಲಿನ್ಯವನ್ನು ತಡೆಯಲು ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವುದು, ಅನಿವಾರ್ಯವಲ್ಲದ ಸಾರಿಗೆ, ವಿದ್ಯುತ್ ಸ್ಥಾವರಗಳಿಗೆ ಕಡಿವಾಣ ಹಾಕುವುದು ಮತ್ತು ವರ್ಕ್ ಫ್ರಂ ಹೋಮ್ ಸೇರಿದಂತೆ ಹಲವು ವಿಷಯಗಳ ಕುರಿತು ತುರ್ತು ಸಭೆಯನ್ನು ಕರೆಯುವಂತೆ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿದೆ. ಈ ಕುರಿತು ಮಂಗಳವಾರ (ಇಂದು) ನಿರ್ಧಾರವಾಗಲಿದೆ.
ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಸುಳ್ಳು ಹೇಳಿದೆ ಎಂದು ಜನರು ಆರೋಪಿದ್ದು, ಟ್ವಿಟ್ಟರ್‌ನಲ್ಲಿ #ModiGovtLied ಟ್ರೆಂಡ್ ಆಗಿದೆ. ಹುಲ್ಲು ಸುಡುವುದರಿಂದಾಗಿ ಆಗುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಆಗಿರುವ ವರದಿಯ ತುಣುಕುಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಈ ಹಿಂದೆ ಪ್ರತಿಪಾದಿಸಿರುವ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
Center lied Deliberately in Supreme Court
? Modi govt's own affidavit on page 114 states stubble burning contributes 35-40% towards Delhi/NCR
? SG put it at merely 10%#ModiGovtLied pic.twitter.com/moT23E3bTD— Aarti (@aartic02) November 15, 2021
As usual Centre is lying about data on #pollution #ModiGovtLied pic.twitter.com/V8iKYftWQq
— Aarti (@aartic02) November 15, 2021
Interesting part is, it was not Delhi govt agency. It was central govt agency that gave data on contribution of stubble burning in pollution of Delhi.#ModiGovtLied pic.twitter.com/7P7qi2L1BG
— Dr Nehal Vaidya (@DrNehalVaidya) November 15, 2021
#ModiGovtLied its Habitual pic.twitter.com/66uh8fqJ7D
— Shubham (@shubhamarora844) November 15, 2021
Modi Government's affidavit on page 114 says that it's own high level committee on 14th November evening said Pollution due to stubble burning is 35-40%
THEN WHY LIE TO THE SUPREME COURT TODAY THAT POLLUTION DUE TO STUBBLE BURNING IS ONLY 4%❓#ModiGovtLied pic.twitter.com/bZH26mvLun
— T̳u̳f̳a̳i̳l̳ A̳A̳P̳ (@tufailaap) November 15, 2021
“ಮಾಲಿನ್ಯವನ್ನು ಕಡಿಮೆ ಮಾಡಲು ನಾಗರಿಕರಾದ ನಾವು ಯಾವ ಪರಿಹಾರಗಳನ್ನು ಕಂಡುಕೊಳ್ಳಬಹುದು? ಅದು ಬಿಜೆಪಿಯಾಗಿರಲಿ, ಬೇರೆ ಪಕ್ಷವಾಗಲಿ ಅವರು ಎಂದಿಗೂ ಯಾವುದೇ ಪರಿಹಾರವನ್ನು ತಿಳಿಸುವುದಿಲ್ಲ. ಅವರು ಕೇವಲ ಆಪಾದನೆಯನ್ನು ಮಾಡುತ್ತಾರೆ. ಅದಕ್ಕಾಗಿಯೇ ಭಾರತ ಎಂದಿಗೂ ಅಭಿವೃದ್ಧಿ ಹೊಂದುವುದಿಲ್ಲ” ಎಂದು ಮನ್ಮಿತ ಎಂಬವರು ಟ್ವೀಟ್ ಮಾಡಿದ್ದಾರೆ.
what solutions as citizens can as can we find reduce pollution?Whether it is BJP, some other party they never find any solutions. They are just going to pass the blame.That why India will never develop
— manmita (@manmita505) November 15, 2021
#ModiGovtLied ಹ್ಯಾಷ್ ಟ್ಯಾಗ್ ಮಂಗಳವಾರ ಬೆಳಿಗ್ಗೆ 8.50ರ ವೇಳೆಗೆ ಗಮನ ಸೆಳೆದಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ.
ಇದನ್ನೂ ಓದಿರಿ: ವಾಯು ಮಾಲಿನ್ಯ ತಡೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲು ಸಿದ್ಧ: ದೆಹಲಿ ಸರ್ಕಾರ


