13 ವರ್ಷದ ಕಾಶ್ಮೀರಿ ಬಾಲಕಿಯೊಬ್ಬರು ಜಮ್ಮು ಕಾಶ್ಮೀರದಲ್ಲಿ ಸೋಮವಾರ ನಡೆದ ಭದ್ರತಾ ಕಾರ್ಯಾಚರಣೆ ವೇಳೆ ಹತ್ಯೆಗೀಡಾದ ತನ್ನ ತಂದೆಯ ಬಗ್ಗೆ ಮಾತನಾಡುತ್ತಾ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ತಂದೆಯನ್ನು ಕೊಂದು ನನ್ನನ್ನು ನೋಡಿ ನಗುತ್ತಿದ್ದರು” ಎಂದು ಬಾಲಕಿ ವಿಡಿಯೊದಲ್ಲಿ ಬಿಕ್ಕಳಿಸುತ್ತಾ ಹೇಳಿದ್ದಾರೆ.
ಶ್ರೀನಗರದ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ವೇಳೆ ಮೃತಪಟ್ಟವರಲ್ಲಿ ಬಾಲಕಿಯ ತಂದೆ ಉದ್ಯಮಿ ಮೊಹಮ್ಮದ್ ಅಲ್ತಾಫ್ ಭಟ್ ಕೂಡಾ ಸೇರಿದ್ದಾರೆ. ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಮತ್ತು ಅವನ ಸಹಚರನನ್ನು ಪಡೆಗಳು ಕೊಂದಿದ್ದಾರೆ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಯಾರೊಬ್ಬರು ಉಸಿರಾಡಲೂ ಆಗುತ್ತಿಲ್ಲ: ಮೆಹಬೂಬಾ ಮುಫ್ತಿ
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಅಲ್ತಾಫ್ ಭಟ್ ಮತ್ತು ಮತ್ತೊಬ್ಬ ಉದ್ಯಮಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು ಎಂದು ಪೊಲೀಸರು ಮೊದಲು ಹೇಳಿದ್ದರು. ಆದರೆ ನಂತರ ಮಾತು ಬದಲಿಸಿದ ಪೊಲೀಸರು ಅವರಿಬ್ಬರು ಕ್ರಾಸ್ ಫೈರ್‌ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು. ಅದರ ನಂತರ, ಕಾಂಪ್ಲೆಕ್ಸ್ ಮಾಲೀಕ ಅಲ್ತಾಫ್ ಭಟ್ ತನ್ನ ಬಾಡಿಗೆದಾರರ ಬಗ್ಗೆ ಅಧಿಕಾರಿಗಳಿಗೆ ತಿಳಿಸದ ಕಾರಣ ಅವರನ್ನು ‘ಭಯೋತ್ಪಾದಕರ ಸಹಚರರು’ ಎಂದು ಪರಿಗಣಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅವರ ಕಾಂಪ್ಲೆಕ್ಸ್‌ನಲ್ಲಿದ್ದ ಬಾಡಿಗೆದಾರರಲ್ಲಿ ಒಬ್ಬ ಭಯೋತ್ಪಾದಕನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ ಎಂದು ಎನ್‌ಡಿಟಿವಿ ತನ್ನ ವರದಿಯಲ್ಲಿ ತಿಳಿಸಿದೆ.
ಇದೀಗ, ಅಲ್ತಾಫ್ ಭಟ್ ಅವರ 13 ವರ್ಷದ ಮಗಳು ನೀಡಿರುವ ಹೇಳಿಕೆಯ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಅದರಲ್ಲಿ ಬಾಲಕಿಯು ಕಣ್ಣೀರಿಡುತ್ತಾ ಅಂದಿನ ಘಟನೆಯನ್ನು ವಿವರಿಸಿದ್ದಾರೆ.
“ನನ್ನ ಚಿಕ್ಕಪ್ಪ 10 ಗಂಟೆಯ ಸುಮಾರಿಗೆ ಫೋನ್ ಮಾಡಿ, ಅಳಲು ಪ್ರಾರಂಭಿಸಿದರು…ಆಗ ನಾನು ಮನೆಯಲ್ಲಿದ್ದೆ…ಈ ವೇಳೆ ನಾನು ಕೂಗು ಮತ್ತು ಕಿರುಚಾಟದ ಶಬ್ದಗಳನ್ನು ಕೇಳಿದೆ…ನಾನು ಓಡಿಹೋದೆ. ನಾನು ಅಲ್ಲಾನನ್ನು ಪ್ರಾರ್ಥಿಸುತ್ತಿದ್ದೆ” ಎಂದು ಅವರು ಅಳುತ್ತಾ ಹೇಳುತ್ತಾರೆ.
“ನನ್ನ ತಂದೆಯನ್ನು ಮೂರು ಬಾರಿ ಕರೆದುಕೊಂಡು ಹೋಗಲಾಯಿತು ಎಂದು ನನ್ನ ನನ್ನ ಸೋದರಸಂಬಂಧಿ ನನಗೆ ಹೇಳಿದರು. ಎರಡು ಭಾರಿ ಅವರನ್ನು ಬಿಟ್ಟು, ಮೂರನೇ ಬಾರಿ ಅವರನ್ನು ಕೊಲ್ಲಲಾಯಿತು. ಇದರ ಅರ್ಥವೇನು? ಇತರನ್ನೂ ಕೂಡಾ ಕೊಲ್ಲಲಾಯಿತು, ಏನಿದೆಲ್ಲಾ?”
ಬಾಲಕಿಯು ಅಂದಿನ ನೆನಪುಗಳನ್ನು ಹೇಳುವಾಗ ಬಿಕ್ಕಳಿಸುತ್ತಾ ಹೆಚ್ಚು ಹೆಚ್ಚು ವಿಚಲಿತಳಾಗುತ್ತಾರೆ. “ನಾನು ಅವರ ಬಳಿ ಕೇಳುತ್ತೇನೆ, ಅಂಕಲ್ ಏನಿದು? ಏನು ಮಾಡಿದ್ರಿ ನೀವು? ಇವರು ನನ್ನ ತಂದೆ, ನಿಮಗೆ ಹೇಗೆ ಅನಿಸ್ತು ಇವರು ‘ಅವರು’ (ಭಯೋತ್ಪಾದಕ) ಎಂದು?… ಈ ಸಂದರ್ಭದಲ್ಲಿ ಅವರು ನನ್ನನ್ನು ನೋಡಿ ನಗುತ್ತಾರೆ. ನಾನು ಅವರಿಗೆ ಏನು ಪ್ರತಿಕ್ರಿಯೆ ನೀಡಬಹುದು? ಅವರು ನಗುತ್ತಿದ್ದರು…ನಾಚಿಕೆಯಿಲ್ಲದೆ ನಗುತ್ತಿದ್ದರು ನಾನು ಅವರಿಗೆ ಏನು ಹೇಳಲಿ?” ಎಂದು ಬಾಲಕಿ ದುಃಖತಪ್ತರಾಗಿ ಹೇಳುತ್ತಾರೆ.
“ನನ್ನ ತಂದೆಯನ್ನು ಕೊಂದ ಅವರು ನನ್ನನ್ನು ನೋಡಿ ನಗುತ್ತಿದ್ದರು. ನಾಚಿಕೆಯಿಲ್ಲದೆ ನಗುತ್ತಿದ್ದರು. ನನ್ನ ತಾಯಿಯನ್ನು ಹೇಗೆ ಸಮಾಧಾನ ಮಾಡಲಿ? ಅವರು ಊಟ ಮಾಡದೆ ಒಂದೇ ಸಮನೆ ಅಳುತ್ತಿದ್ದಾರೆ”
-ಕಾಶ್ಮೀರಿ ಬಾಲಕಿ
ಕ್ರಾಸ್ ಫೈರಿಂಗ್ನಲ್ಲಿ ಇವರ ತಂದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಸುದ್ದಿhttps://t.co/YiRvV6p9Jp pic.twitter.com/tkvZhHKqbT— Naanu Gauri (@naanugauri) November 17, 2021
“ನನ್ನ ತಮ್ಮ ಎರಡನೆ ಕ್ಲಾಸ್‌ನಲ್ಲಿದ್ದಾನೆ. ಅವನು ತುಂಬಾ ಚಿಕ್ಕವನು. ಅವನಿಗೆ ನಾವು ಏನು ಹೇಳಬೇಕು? ಅವನಿಗೆ ಏನೂ ಗೊತ್ತಿಲ್ಲ. ಅವನು ತಂದೆಯನ್ನು ತುಂಬಾ ಹಚ್ಚಿಕೊಂಡಿದ್ದ. ನಾನು ಕೂಡಾ ತಂದೆಯನ್ನು ತುಂಬಾ ಹಚ್ಚಿಕೊಂಡಿದ್ದೆ. ಈಗ ನಾನು ಏನು ಮಾಡಲಿ? ನನ್ನ ತಾಯಿಯನ್ನು ಹೇಗೆ ಸಮಾಧಾನ ಪಡಿಸಲಿ? ಅವಳು ಈಗ ಏನನ್ನೂ ತಿನ್ನುತ್ತಿಲ್ಲ, ಒಂದೇ ಸಮನೆ ಅಳುತ್ತಿದ್ದಾರೆ, ನಾನು ಏನು ಮಾಡಲಿ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರ: ಸಿಆರ್‌ಪಿಎಫ್ ಯೋಧರಿಂದ ಕಾರ್ಮಿಕನ ಹತ್ಯೆ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ರಾಜಕೀಯ ನಾಯಕರು ಶ್ರೀನಗರದ ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಅಂದು ಇಬ್ಬರೂ ಉದ್ಯಮಿಗಳನ್ನು ಭದ್ರತಾ ಪಡೆಗಳೆ ಕೊಂದಿವೆ ಎಂದು ಕುಟುಂಬಗಳು ಆರೋಪಿಸಿವೆ. ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಕಾರಣಕ್ಕಾಗಿ ಪೊಲೀಸರು ಮೃತದೇಹಗಳನ್ನು ಹಸ್ತಾಂತರಿಸಲು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ.
ಅಂದು ಕೊಲ್ಲಲ್ಪಟ್ಟವರಲ್ಲಿ ತನ್ನ ಮಗನೂ ಇದ್ದು, ಅವನನ್ನು ಭಯೋತ್ಪಾದಕ ಎಂದು ಹೆಸರಿಸಲಾಗಿದೆ ಎಂದು ಭಯೋತ್ಪಾದನಾ ವಿರೋಧಿ ಹೋರಾಟಗಾರ ಅಬ್ದುಲ್ ಲತೀಫ್ ಮಗ್ರೆ ಹೇಳಿದ್ದಾರೆ. ಅವರು 2005 ರಲ್ಲಿ ರಾಂಬನ್‌ನಲ್ಲಿ ಭಯೋತ್ಪಾದಕನನ್ನು ಕಲ್ಲಿನಿಂದ ಕೊಂದಿದ್ದರು. ಲತೀಫ್ ಹೇಳುವಂತೆ ಅವರ ಮಗ ಅಮೀರ್ ಮುಗ್ಧನಾಗಿದ್ದು, ಕಾರ್ಮಿಕನಾಗಿದ್ದನು. ಆದರೆ, ಪೊಲೀಸರು ಅಮೀರ್ ಅವರನ್ನು ‘ಹೈಬ್ರಿಡ್’ ಭಯೋತ್ಪಾದಕ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಾಕ್ ಗೆಲುವಿಗೆ ಸಂಭ್ರಮ ಆರೋಪ: ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಮೇಲೆ UAPA ಪ್ರಕರಣ



ಭಯೋತ್ಪಾದನೆಯ ಹೆಸರಿನಲ್ಲಿ ನಮ್ಮದೇ ದೇಶದ ಪ್ರಜೆಗಳನ್ನು ಕೊಲ್ಲುವುದರಿಂದ ಭಯೋತ್ಪಾದನೆ ಕಡಿಮೆ ಆಗುವುದಿಲ್ಲ.
Deshada olagina kempu bhayodpadakaru hecchu apayakaari