ಇಂದು (ಶುಕ್ರವಾರ) ರೈತ ವಿರೋಧಿ ಕಾನೂನು ಆಂದೋಲನದ ಮೊದಲ ವಾರ್ಷಿಕೋತ್ಸವ ನಡೆಯುತ್ತಿದೆ. ಈ ಹಿನ್ನೆಲೆ ಪಂಜಾಬ್ ಮತ್ತು ಹರಿಯಾಣದ ಸಾವಿರಾರು ರೈತರು ಪ್ರತಿಭಟನಾ ನಿರತ ಸಿಂಘಿ, ಟಿಕ್ರಿ, ಗಾಝಿಪುರ್, ಶಹಜಾನ್‌ಪುರ್ ಗಡಿಗಳಿಗೆ ಬಂದಿದ್ದಾರೆ.
ನವೆಂಬರ್ 29 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಂದಿನಿಂದ ಸಂಸತ್ ಬಳಿ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಇದರಲ್ಲಿ ಭಾಗವಹಿಸಲು ಭಾರಿ ಸಂಖ್ಯೆಯಲ್ಲಿ ರೈತರು ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಗಳಿಗೆ ಮರಳಿದ್ದಾರೆ.
ಕೃಷಿ ಕಾನೂನುಗಳ ರದ್ದತಿಯನ್ನು ಆಚರಿಸಲು ರೈತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಎಂಎಸ್‌ಪಿ ಕಾನೂನು ಜಾರಿಗೊಳಿಸಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗಲಿವೆ 26 ಹೊಸ ಮಸೂದೆ: ಇಲ್ಲಿದೆ ಸಂಕ್ಷಿಪ್ತ ವಿವರ
A one of its kind, a first in the world, a farmers parliament was held outside of a Parliament in a democracy.
— Tractor2ਟਵਿੱਟਰ (@Tractor2twitr) November 26, 2021
The "terr0rist" farmers wr escorted into Delhi by the Police.
National Anthem ws sung daily, farm laws debated, streets shouted "democracy"!
#1YearOfFarmersProtest pic.twitter.com/MNHYVyipLp
ಸಾವಿರಾರು ಸಂಖ್ಯೆಯಲ್ಲಿ ರೈತರು ಗಡಿಗಳಿಗೆ ಮರಳಿರುವುದರಿಂದ ನಗರದ ಗಡಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ. ಎಂಎಸ್‌ಪಿಗೆ ಕಾನೂನು ಜಾರಿಗೊಳಿಸುವ ಜೊತೆಗೆ ಇತರ ಬೇಡಿಕೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾದ ನಿರ್ದೇಶನದವರೆಗೆ ರೈತರು ಗಡಿಯಲ್ಲಿ ಉಳಿಯಲು ಸಿದ್ಧರಾಗಿದ್ದಾರೆ. “ಈ ಚಳಿಯನ್ನು ನಿಭಾಯಿಸಲು ನಾವು ಕಳೆದ ಚಳಿಗಾಲದಲ್ಲಿ ಮಾಡಿಕೊಂಡಿದ್ದ ತಯಾರಿಯನ್ನೇ ಈಗಲೂ ಮಾಡಿಕೊಂಡಿದ್ದೇವೆ” ಎಂದು ರೈತ ಪ್ರೀತ್ಪಾಲ್ ಸಿಂಗ್ ಹೇಳಿದರು.
ಮುಖ್ಯ ಕಾರ್ಯಕ್ರಮ ನಡೆಸಲು ಟಿಕ್ರಿ ಗಡಿಯ ಪಕೋರಾ ಚೌಕ್‌ನಲ್ಲಿ ದೊಡ್ಡ ಟೆಂಟ್ ಹಾಕಲಾಗುತ್ತಿದೆ. ಸಿಂಗು ಗಡಿಯಲ್ಲಿ ಮತ್ತೊಂದು ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. ರೈತ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನೂ ಆರಂಭಿಸಿವೆ.
ದೆಹಲಿಯ ಗಡಿಗಳು, ರಾಜ್ಯ ರಾಜಧಾನಿಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತಾನು ನೀಡಿರುವ ತನ್ನ ಕರೆಗೆ ರೈತರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಎಸ್‌ಕೆಎಂ ಹೇಳಿದೆ.


