Homeಮುಖಪುಟಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಮಂಡನೆಯಾಗಲಿವೆ 26 ಹೊಸ ಮಸೂದೆ: ಇಲ್ಲಿದೆ ಸಂಕ್ಷಿಪ್ತ ವಿವರ

ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಮಂಡನೆಯಾಗಲಿವೆ 26 ಹೊಸ ಮಸೂದೆ: ಇಲ್ಲಿದೆ ಸಂಕ್ಷಿಪ್ತ ವಿವರ

ಎರಡು ಬ್ಯಾಂಕುಗಳ ಖಾಸಗೀಕರಣಕ್ಕೆ ಸರ್ಕಾರ ಮುಂದಾಗಿದ್ದು, ಬ್ಯಾಂಕ್‌ ನೌಕರರ ವಿರೋಧ ವ್ಯಕ್ತವಾಗಿದೆ.

- Advertisement -
- Advertisement -

ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಬ್ಯಾಂಕುಗಳ ಖಾಗೀಕರಣ, ಕೃಷಿ ಕಾಯ್ದೆಗಳ ರದ್ದು ಮಸೂಸೆ ಸೇರಿದಂತೆ 26 ಹೊಸ ಮಸೂದೆಗಳನ್ನು ಈ ಬಾರಿಯ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಚಳಿಗಾಲದ ಅಧಿವೇಶನವು ನವೆಂಬರ್‌ 29ರಿಂದ ಆರಂಭವಾಗಲಿದೆ.

ಲೋಕಸಭೆಯ ಬುಲೆಟಿನ್‌ನಲ್ಲಿ ಬಹಿರಂಗಪಡಿಸಿದ ಶಾಸಕಾಂಗ ಕಾರ್ಯಸೂಚಿಯ ಪ್ರಕಾರ, ಹಲವು ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ದಿವಾಳಿ ಮತ್ತು ದಿವಾಳಿತನ ಸಂಹಿತೆ 2016ಕ್ಕೆ ಬದಲಾವಣೆಗಳನ್ನು ತರಲು ಸರ್ಕಾರ ನಿರ್ಧರಿಸಿದೆ. ಬ್ಯಾಂಕುಗಳ ಖಾಸಗೀಕರಣಕ್ಕೆ ಬ್ಯಾಂಕ್‌ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.

1.ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021

ಕಾರ್ಯಸೂಚಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟು ರಚಿಸುವುದು. ಮಸೂದೆಯು ಭಾರತದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ. ಆದಾಗ್ಯೂ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ನೀಡುವುದು.

2.ದಿವಾಳಿ ಮತ್ತು ದಿವಾಳಿತನ ನೀತಿ (ಎರಡನೇ ತಿದ್ದುಪಡಿ) ಮಸೂದೆ

ಕಾರ್ಯಸೂಚಿ: 2016ರ ದಿವಾಳಿ ಮತ್ತು ದಿವಾಳಿತನ ಕಾಯ್ದೆಯನ್ನು ಬಲಿಷ್ಠಗೊಳಿಸುವುದು ಹಾಗೂ ಸುಗಮಗೊಳಿಸುವುದು.

3.ಬ್ಯಾಂಕಿಂಗ್‌ ಕಾನೂನು (ತಿದ್ದುಪಡಿ) ಮಸೂದೆ 2021

ಕಾರ್ಯಸೂಚಿ: 1970 ಮತ್ತು 1980ರ ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ಉದ್ಯಮಗಳ ವರ್ಗಾವಣೆ) ಕಾಯಿದೆಗಳಲ್ಲಿ ತಿದ್ದುಪಡಿಗಳನ್ನು ತರುವುದು, ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ಗೆ ಪ್ರಾಸಂಗಿಕ ತಿದ್ದುಪಡಿಗಳನ್ನು ಜಾರಿಗೆ ತರುವುದು.

4.ಕೃಷಿ ಕಾನೂನುಗಳ ರದ್ದತಿ ಮಸೂದೆ, 2021

ಕಾರ್ಯಸೂಚಿ: ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ, ಕೃಷಿ ಸೇವೆಗಳ ಕಾಯಿದೆ, 2020; ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020- ಈ ಕಾಯ್ದೆಗಳನ್ನು ರದ್ದುಪಡಿಸುವುದು.


ಇದನ್ನೂ ಓದಿರಿ: ರೈತ ಹೋರಾಟದ ಮುಂದಿನ ಯೋಜನೆ ನ.27 ರಂದು ನಿರ್ಧಾರ: ರಾಕೇಶ್ ಟಿಕಾಯತ್


5.ಮಧ್ಯಸ್ಥಿಕೆ ಮಸೂದೆ, 2021

ಕಾರ್ಯಸೂಚಿ: ಈ ಮಸೂದೆಯು ವ್ಯಾಜ್ಯಪೂರ್ವ ಮಧ್ಯಸ್ಥಿಕೆಯನ್ನು ಪ್ರಸ್ತಾಪಿಸುತ್ತದೆ ಮತ್ತು ಅದೇ ಸಮಯದಲ್ಲಿ ತುರ್ತು ಪರಿಹಾರವನ್ನು ಕೋರಿದರೆ ಸಮರ್ಥ ನ್ಯಾಯಾಧಿಕರಣ ವೇದಿಕೆಗಳು/ನ್ಯಾಯಾಲಯಗಳನ್ನು ಸಂಪರ್ಕಿಸಲು ದಾವೆದಾರರ ಹಿತಾಸಕ್ತಿ ಕಾಪಾಡುತ್ತದೆ.

6.ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2021

ಕಾರ್ಯಸೂಚಿ: ಸಾರ್ವತ್ರಿಕ ಪಿಂಚಣಿ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಪಿಎಫ್ಆರ್‌‌ಡಿಎ ಬಲಪಡಿಸಲು ವಿತ್ತ ಸಚಿವರ 2020 ರ ಬಜೆಟ್ ಘೋಷಿತ ಭರವಸೆಯನ್ನು ಉದ್ದೇಶಿತ ಮಸೂದೆಯು ಪೂರೈಸುತ್ತದೆ. ಪಿಎಫ್ಆರ್ಡಿಎ ಕಾಯಿದೆ ತಿದ್ದುಪಡಿಯೊಂದಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಟ್ರಸ್ಟ್ ನ ಅಧಿಕಾರಗಳು, ಕಾರ್ಯಗಳು ಮತ್ತು ಕರ್ತವ್ಯಗಳು, ಪ್ರಸ್ತುತ ಪಿಎಫ್ಆರ್ಡಿಎ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್) ನಿಯಮಗಳು 2015 ರ ಅಡಿಯಲ್ಲಿ ನಿಗದಿಪಡಿಸಲಾಗಿದ್ದು, ತಿದ್ದುಪಡಿಯ ನಂತರ ಇದು ಚಾರಿಟಬಲ್ ಟ್ರಸ್ಟ್ ಅಥವಾ ಕಂಪನಿಗಳ ಕಾಯಿದೆಯ ಅಡಿಯಲ್ಲಿ ಬರಬಹುದಾಗಿದೆ.

7.ಇಂಧನ ಸಂರಕ್ಷಣೆ (ತಿದ್ದುಪಡಿ) ಮಸೂದೆ, 2021

ಕಾರ್ಯಸೂಚಿ: ಪ್ಯಾರಿಸ್ ಒಪ್ಪಂದವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹಣಕಾಸು, ತಾಂತ್ರಿಕ ಮತ್ತು ಸಾಮರ್ಥ್ಯ ನಿರ್ಮಾಣ ಮಾಡುವುದು.

8.ಚಾರ್ಟರ್ಡ್ ಅಕೌಂಟೆಂಟ್ಸ್, ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿಗಳ (ತಿದ್ದುಪಡಿ) ಮಸೂದೆ

ಕಾರ್ಯಸೂಚಿ: ಸಂಸ್ಥೆಗಳ ಶಿಸ್ತಿನ ಕಾರ್ಯವಿಧಾನವನ್ನು ಸುಧಾರಿಸುವುದು ಹಾಗೂ ವೇಗಗೊಳಿಸುವುದು.

9.ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ, 2021

ಕಾರ್ಯಸೂಚಿ: ಇತರ ವಿತರಣಾ ವ್ಯವಹಾರಗಳಿಗೆ ಪರವಾನಗಿಯನ್ನು ನೀಡುವುದು, ವಿದ್ಯುತ್ ದಂಡಕ್ಕಾಗಿ ಮೇಲ್ಮನವಿ ನ್ಯಾಯಾಧಿಕರಣವನ್ನು ಬಲಪಡಿಸುವುದು ಇತ್ಯಾದಿ.


ಇದನ್ನೂ ಓದಿರಿ: ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿಗೆ ನಾಳೆ ಬೃಹತ್‌ ಜಾಥಾ, ಸಮಾವೇಶ; ‘ಬಾಡೂಟದ ಬುತ್ತಿಯೊಂದಿಗೆ ಬನ್ನಿ…’


ಇತರ ಮಸೂದೆಗಳು

10. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟಿಕ್ ಸಬ್ಸ್ಟೆನ್ಸ್ (ತಿದ್ದುಪಡಿ) ಮಸೂದೆ

11. ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ

12. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ

13. ಕಂಟೋನ್ಮೆಂಟ್ ಮಸೂದೆ

14. ಅಂತರ-ಸೇವೆಗಳ ಸಂಸ್ಥೆಗಳು (ಕಮಾಂಡ್, ನಿಯಂತ್ರಣ ಮತ್ತು ಶಿಸ್ತು) ಮಸೂದೆ

15. ಭಾರತೀಯ ಅಂಟಾರ್ಟಿಕಾ ಮಸೂದೆ

16. ಎಮಿಗ್ರೇಷನ್ ಮಸೂದೆ

17. ಭಾರತೀಯ ಸಮುದ್ರ ಮೀನುಗಾರಿಕೆ ಮಸೂದೆ

18. ರಾಷ್ಟ್ರೀಯ ದಂತ ಆಯೋಗದ ಮಸೂದೆ

19. ರಾಷ್ಟ್ರೀಯ ನರ್ಸಿಂಗ್ ಮಿಡ್‌ವೈಫರಿ ಕಮಿಷನ್ ಬಿಲ್

20. ಮೆಟ್ರೋ ರೈಲು (ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ) ಮಸೂದೆ

21. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು (ಸಂಬಳ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ

22. ರಾಷ್ಟ್ರೀಯ ಸಾರಿಗೆ ವಿಶ್ವವಿದ್ಯಾಲಯದ ಮಸೂದೆ

23. ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ

24. ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ

25. ಮಾನವ ಕಳ್ಳಸಾಗಣೆ (ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ

26. ರಾಷ್ಟ್ರೀಯ ಡೋಪಿಂಗ್ ವಿರೋಧಿ ಮಸೂದೆ.

ಮೋದಿನಾಮಿಕ್ಸ್‌: ಬ್ಯಾಂಕುಗಳ ಖಾಸಗೀಕರಣಕ್ಕೆ ಬ್ಯಾಂಕ್‌ ನೌಕರರ ವಿರೋಧ

ರಾಷ್ಟ್ರೀಯಕೃತ ಬ್ಯಾಂಕುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಲೇ ಇದ್ದು, ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್ ಆಫ್ ಇಂಡಿಯಾ- ಈ ನಾಲ್ಕು ಬ್ಯಾಂಕುಗಳ ಪೈಕಿ ಎರಡು ಬ್ಯಾಂಕುಗಳು ಖಾಸಗೀಕರಣಗೊಳ್ಳಲಿವೆ. ಈ ನಿಟ್ಟಿನಲ್ಲಿ ಉದ್ದೇಶತ ಬ್ಯಾಂಕುಗಳ ನೌಕರರಿಗೆ ಸ್ವಯಂ ನಿವೃತ್ತಿ ಘೋಷಿಸಿದೆ. ಬ್ಯಾಂಕಿಂಗ್ ನೌಕರರ ಸಂಘಟನೆಗಳು ಖಾಸಗೀಕರಣವನ್ನು ವಿರೋಧಿಸಿವೆ.


ಇದನ್ನೂ ಓದಿರಿ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ರೈತ ಹೋರಾಟದ ಅಪಪ್ರಚಾರ: ವರದಿಯಿಂದ ಬಹಿರಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...