ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಪಳೆಯುಳಿಕೆ ಬಿಜೆಪಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
“ದೇಶಕ್ಕಾಗಿ ಬಿಜೆಪಿಯವರು ಏನು ತ್ಯಾಗ ಮಾಡಿದ್ದಾರೆ. ಏನು ಇಲ್ಲ… ಮಹಾತ್ಮ ಗಾಂಧಿಯವರನ್ನು ಕೊಂದಿದ್ದೇ ಇವರ ಕೊಡುಗೆ. ಮಹಾತ್ಮಾ ಗಾಂಧಿಯನ್ನು ಕೊಂದು ಹಾಕಿದ್ದು ಇದೇ ಆರ್‌ಎಸ್‌ಎಸ್‌ನವರು. ದೇಶಕ್ಕಾಗಿ ಹೋರಾಡಿದ ಮಹಾತ್ಮಗಾಂಧಿಯವರನ್ನು ಕೊಂದದ್ದು ಗೋಡ್ಸೆ. ಅವರ ಪಳೆಯುಳಿಕೆಯೇ ಬಿಜೆಪಿ. ಅವರ ವಂಶಸ್ಥರು ಬಿಜೆಪಿ ಮತ್ತು ಆರ್‌ಎಸ್‌ಎಸ್” ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
“ಬಿಜೆಪಿಯವರು ಯಾರು ದೇಶಕ್ಕಾಗಿ ಪ್ರಾಣ ಬಿಟ್ಟಿಲ್ಲ. ಲಕ್ಷಾಂತರ ಜನರು ಸ್ವಾತಂತ್ರ್ಯ ಹೋರಟಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಒಬ್ಬನೇ ಒಬ್ಬ ಬಿಜೆಪಿಯವರು ಪ್ರಾಣ ತ್ಯಾಗ ಮಾಡಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ಇವರ ಪಕ್ಷ ಹುಟ್ಟಿದೆ. ಇವರು ಕಾಂಗ್ರೆಸ್‌ಗೆ ದೇಶಭಕ್ತಿಯ ಪಾಠ ಮಾಡುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆಯಿಂದ ರೈತರ ಬೆಳೆಯಲ್ಲಿ ಶೇ. 60 ರಷ್ಟು ನಷ್ಟ, ತಕ್ಷಣ ಪರಿಹಾರ ನೀಡಿ: ಸಿದ್ದರಾಮಯ್ಯ
“ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್‌ನಿಂದ ಬಂದವರು. ಆದರೆ ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ನವರಲ್ಲ. ಲಾಟರಿ ಹೊಡೆದು ಸಿಎಂ ಆಗಿ ಬಿಟ್ಟಿದ್ದಾರೆ. ಯಡಿಯೂರಪ್ಪ ಅವರನ್ನು ಕಿತ್ತೆಸೆದಾಗ ಇವರನ್ನು ತಂದು ಕೂರಿಸಿದ್ದಾರೆ. ಈಗ ಇವರನ್ನು ತೆಗೆಯಬೇಕು ಎಂದು ಈಶ್ವರಪ್ಪ ಪ್ರಯತ್ನಿಸುತ್ತದ್ದಾರೆ” ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
’ಬಿಜೆಪಿಯವರು ಯಾವತ್ತಿಗೂ ಅಧಿಕಾರ ವಿಕೇಂದ್ರಿಕರಣದಲ್ಲಿ ನಂಬಿಕೆ ಇಟ್ಟವರಲ್ಲ. ಕೇಂದ್ರಿಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. ಎಲ್ಲವೂ ದೆಹಲಿಯಲ್ಲೇ ತೀರ್ಮಾನವಾಗಬೇಕು ಎನ್ನುವವರು. ಸ್ಥಳೀಯ ಆಡಳಿತದಲ್ಲಿ ಮೀಸಲಾತಿ ತಂದವರು ನಾವು” ಎಂದು ಹೇಳಿದ್ದಾರೆ.


