Homeಮುಖಪುಟತಮಿಳು ನಾಡಗೀತೆಯು ಪ್ರಾರ್ಥನೆಯಾಗಿದ್ದು, ಅದನ್ನು ಹಾಡುವಾಗ ಎದ್ದುನಿಲ್ಲಬೇಕಾಗಿಲ್ಲ: ಮದ್ರಾಸ್ ಹೈಕೋರ್ಟ್

ತಮಿಳು ನಾಡಗೀತೆಯು ಪ್ರಾರ್ಥನೆಯಾಗಿದ್ದು, ಅದನ್ನು ಹಾಡುವಾಗ ಎದ್ದುನಿಲ್ಲಬೇಕಾಗಿಲ್ಲ: ಮದ್ರಾಸ್ ಹೈಕೋರ್ಟ್

- Advertisement -
- Advertisement -

ತಮಿಳುನಾಡಿನ ನಾಡಗೀತೆಯಾದ ‘ತಮಿಳು ತಾಯ್‌ ವಾಳ್ತ್‌‌’ ಕೇವಲ ಪ್ರಾರ್ಥನಾ ಗೀತೆಯಾಗಿದ್ದು, ಅದು ರಾಷ್ಟ್ರಗೀತೆಯಲ್ಲ, ಆದ್ದರಿಂದ ಅದನ್ನು ಹಾಡುವಾಗ ಪ್ರತಿಯೊಬ್ಬರೂ ಎದ್ದು ನಿಲ್ಲಬೇಕಾದ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಪೀಠವು ತೀರ್ಪು ನೀಡಿದೆ. 2018 ರಲ್ಲಿ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಪೊಲೀಸರು ‘ನಾಮ್ ತಮಿಳರ್ ಕಚ್ಚಿ’ (NTK) ಪದಾಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವಾಗ ಮದ್ರಾಸ್‌ ನ್ಯಾಯಮೂರ್ತಿ ಜಿ. ಆರ್. ಸ್ವಾಮಿನಾಥನ್ ಅವರು ಈ ತೀರ್ಪು ನೀಡಿದ್ದಾರೆ.

2018 ರ ಜನವರಿ 24 ರಂದು ಕಂಚಿ ಕಾಮಕೋಟಿ ಪೀಠದ ಮಠಾಧೀಶ ವಿಜಯೇಂದ್ರ ಸರಸ್ವತಿಯವರ ಉಪಸ್ಥಿತಿಯಲ್ಲಿ ಚೆನ್ನೈನ ಸಂಗೀತ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ತಮಿಳು-ಸಂಸ್ಕೃತ ನಿಘಂಟನ್ನು ಬಿಡುಗಡೆ ಮಾಡಿದ್ದರು. ಈ ವೇಳೆ ನಾಡಗೀತೆ ‘ತಮಿಳು ತಾಯ್ ವಾಳ್ತ್‌‌’ ನುಡಿಸುವಾಗ, ವಿಜಯೇಂದ್ರ ಸರಸ್ವತಿಯವರು ಕುಳಿತಿದ್ದರು. ಇದರ ವಿರುದ್ದ ಆಕ್ರೋಶ ವ್ಯಕ್ತವಾಗಿ ಸಾಕಷ್ಟು ಚರ್ಚೆಯು ನಡೆದಿತ್ತು.

ಇದರ ವಿರುದ್ದ ಪ್ರಸ್ತುತ NTK ಯ ನಾಯನಾಗಿರುವ, ಈ ಹಿಂದೆ ‘ತಮಿಳರ್ ದೇಸಿಯ ಮುನ್ನನಿ’ ಯ ಭಾಗವಾಗಿದ್ದ ಕಾನ್ ಇಲಂಗೋ ಮತ್ತು ಅವರ ಸಂಗಡಿಗರು ರಾಮೇಶ್ವರಂನಲ್ಲಿರುವ ಕಂಚಿ ಮಠದ ಶಾಖೆಯನ್ನು ಪ್ರವೇಶಿಸಿ, ಶಂಕರಾಚಾರ್ಯರ ವಿರುದ್ದ ಘೋಷಣೆಗಳನ್ನು ಕೂಗಿದ್ದರು.

ಇದನ್ನೂ ಓದಿ:ನಾಡ ಧ್ವಜ, ನಾಡಗೀತೆಗೆ ಅವಮಾನ ಮಾಡಿದವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಥಾನ: ತೀವ್ರ ತರಾಟೆ

ಈ ವೇಳೆ ಅವರು ಪಾದರಕ್ಷೆ ಧರಿಸಿ ಮಠದ ಆವರಣ ಪ್ರವೇಶಿಸಿದ್ದಾರೆ, ಜೊತೆಗೆ ಅವರು ಮಠವನ್ನು ಪ್ರವೇಶಿಸಿದ್ದರ ವಿರುದ್ದ ವ್ಯವಸ್ಥಾಪಕರು ಪ್ರತಿಭಟಿಸಿದಾಗ ಅವರಿಗೆ ಬೆದರಿಕೆ ಕೂಡಾ ಹಾಕಿದ್ದರು ಎಂದು ಆರೋಪಿಸಲಾಗಿದೆ. ಇದರಿಂದಾಗಿ, ಅವರ ವಿರುದ್ಧ ಗಲಭೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಎಫ್‌ಐಆರ್‌ ಅನ್ನು ಪ್ರಶ್ನಿಸಿ ಇಳಂಗೋ ಅವರು ಅರ್ಜಿ ದಾಖಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಅನುಮತಿಸಿದ ಮದ್ರಾಸ್ ಹೈಕೋರ್ಟ್, ತಮಿಳು ತಾಯ್ ವಾಳ್ತ್‌‌ ರಾಷ್ಟ್ರಗೀತೆ ಅಲ್ಲವಾದ್ದರಿಂದ ಅದನ್ನು ಹಾಡಿದಾಗ ಅಲ್ಲಿರುವವರು ಎದ್ದು ನಿಲ್ಲುವ ಯಾವುದೇ ಶಾಸನಬದ್ಧ ಅಥವಾ ಕಾರ್ಯಕಾರಿ ಆದೇಶವಿಲ್ಲ ಎಂದು ಸೂಚಿಸಿದ್ದಾರೆ.

1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆಯ ಸೆಕ್ಷನ್ 3 ರ ಪ್ರಕಾರ ರಾಷ್ಟ್ರಗೀತೆ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಅಂತಹ ಹಾಡುಗಾರಿಕೆಯಲ್ಲಿ ತೊಡಗಿರುವ ಸಭೆಗೆ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ನೀಡಬಹುದಾಗಿದೆ” ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಪಟ್ಟುಬಿಡದೇ ಸಾಹಿತ್ಯ ಸಮ್ಮೇಳನ ಆರಂಭಿಸಿದ ಚಿಕ್ಕಮಗಳೂರು ಕಸಾಪ.. ಸಂಘಪರಿವಾರಕ್ಕೆ ಮುಖಭಂಗ

“ಸಂವಿಧಾನದ ಅನುಚ್ಛೇದ 51A(a) ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಆದೇಶಿಸುತ್ತದೆ. ರಾಷ್ಟ್ರಗೀತೆಯನ್ನು ಹಾಡುವಾಗ ಗೌರವಯುತವಾಗಿ ಎದ್ದುನಿಂತು ಹಾಡುವವರೊಂದಿಗೆ ಸೇರಿ ಹಾಡದಿದ್ದರೆ ಅದು ರಾಷ್ಟ್ರಗೀತೆಗೆ ಅಗೌರವವಾಗಿದೆ ಎಂದು ಹೇಳಲಾಗುವುದಿಲ್ಲ ಸುಪ್ರೀಂ ಕೋರ್ಟ್ ಹೇಳಿದೆ”.

“ಆದರೆ ತಮಿಳಿನ ತಾಯ್ ವಾಳ್ತ್‌‌ಗೆ ಅತ್ಯುನ್ನತ ಗೌರವ ನೀಡಬೇಕು. ತಮಿಳು ತಾಯ್ ವಾಳ್ತ್‌‌ ಹಾಡಿದಾಗ ಪ್ರೇಕ್ಷಕರು ಸಾಂಪ್ರದಾಯಿಕವಾಗಿ ಎದ್ದು ನಿಲ್ಲುತ್ತಾರೆ ಎಂಬುದು ನಿಜ. ಆದರೆ ಗೌರವವನ್ನು ತೋರಿಸಬಹುದಾದ ಏಕೈಕ ವಿಧಾನ ಎದ್ದು ನಿಲ್ಲುವುದೆ ಆಗಿದೆಯೆ ಎಂಬುದು ಪ್ರಶ್ನೆ. ನಾವು ಬಹುತ್ವ ಮತ್ತು ವೈವಿಧ್ಯತೆಯನ್ನು ಆಚರಿಸಿದಾಗ, ಗೌರವವನ್ನು ತೋರಿಸಲು ಒಂದೇ ಒಂದು ಮಾರ್ಗವಿದೆ ಎಂದು ಒತ್ತಾಯಿಸುವುದು ಬೂಟಾಟಿಕೆಯಿಂದ ಕೂಡಿದೆ” ಎಂದು ಅವರು ಹೇಳಿದ್ದಾರೆ.

“ಸನ್ಯಾಸಿಯು ಮುಖ್ಯವಾಗಿ ಧರ್ಮನಿಷ್ಠೆಯ ಜೀವನವನ್ನು ನಡೆಸುತ್ತಾನೆ. ಪ್ರಾರ್ಥನೆಯಲ್ಲಿದ್ದಾಗ, ಅವನು ಧ್ಯಾನ ಭಂಗಿಯಲ್ಲಿ ಏಕರೂಪವಾಗಿ ಕಂಡುಬರುತ್ತಾನೆ. ತಮಿಳು ನಾಡಗೀತೆಯು ಪ್ರಾರ್ಥನಾ ಗೀತೆಯಾಗಿರುವುದರಿಂದ, ಸನ್ಯಾಸಿಯು ಧ್ಯಾನದ ಸ್ಥಿತಿಯಲ್ಲಿ ಕುಳಿತುಕೊಂಡಿದ್ದಾನೆ. ತತ್ಕ್ಷಣದ ಸಂದರ್ಭದಲ್ಲಿ, ಮಠಾಧೀಶರು ಧ್ಯಾನ ಭಂಗಿಯಲ್ಲಿ ಕಣ್ಣು ಮುಚ್ಚಿ ಕುಳಿತಿರುವುದು ಕಂಡುಬರುತ್ತದೆ. ಇದು ತಮಿಳು ತಾಯಿಯ ಬಗ್ಗೆ ಅವರ ಗೌರವವನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿರುವಾಗ ಎದ್ದು ನಿಲ್ಲದಿರುವುದು ಅಪರಾಧವಲ್ಲ: ಹೈಕೋರ್ಟ್‌

ತಮಿಳು ನಾಡಗೀತೆಯನ್ನು ಇಲ್ಲಿ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....