Homeಕರ್ನಾಟಕರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

ರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

- Advertisement -
- Advertisement -

ಮೈಸೂರು ರಂಗಾಯಣ ಮತ್ತು ಬಹುರೂಪಿಯ ಗೌರವವನ್ನು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು ಹಾಳುಮಾಡಬಾರದು ಎಂದು ಆಗ್ರಹಿಸಿರುವ ಹಿರಿಯ ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು ಬಹಿರಂಗ ಪತ್ರ ಬರೆದಿದ್ದಾರೆ.

ರಂಗಾಯಣದ ನಿರ್ದೇಶಕರು ಬಹುರೂಪಿ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಕಲಾವಿದರು, ರಂಗಾಯಣ ನಿರ್ದೇಶಕರ ಇತ್ತೀಚಿನ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ನಿರ್ದೇಶಕರಿಗೆ ಬರೆದ ಪೂರ್ಣ ಪತ್ರ ಇಲ್ಲಿದೆ.

ರಂಗಾಯಣ: ಒಂದು ಸದಾಗ್ರಹ

ಈ ಬಾರಿಯ ‘ಬಹುರೂಪಿ ನಾಟಕೋತ್ಸವ’ ತನ್ನ ಬಣ್ಣವನ್ನು ಬದಲಾಯಿಸುತ್ತಿರುವುದಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಬಹುರೂಪಿಯ ಸಮಾರಂಭಕ್ಕೆ ರಂಗಾಯಣ ಆಯ್ಕೆಮಾಡಿರುವ ಇಬ್ಬರು ಅತಿಥಿಗಳ ಬಗ್ಗೆ ಮೈಸೂರಿನ ರಂಗಭೂಮಿ ಕಲಾವಿದರು, ಬರಹಗಾರರು ಮತ್ತು ಧೀಮಂತರು ಎತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಪ್ಪ ಈ ಮಾತುಗಳನ್ನು ಆಡಿದ್ದಾರೆ. ಹಾಗೆಯೇ ರಂಗಾಯಣದ ಕಿರಿಯ ಕಲಾವಿದರು ಆಡಿರುವ ಮಾತುಗಳು ಮತ್ತು ಹಂಚಿಕೊಂಡಿರುವ ಅಭಿಪ್ರಾಯಗಳ ಬಗ್ಗೆಯೂ ಈ ನಿರ್ದೇಶಕರು ಮಾತನಾಡಿದ್ದಾರೆ.
ಬಹುರೂಪಿಯ ಈ ಇಬ್ಬರು ಅತಿಥಿಗಳ ಬಗ್ಗೆ ಆಕ್ಷೇಪ ಹೊರಬಿದ್ದಾಗ ಕಾರ್ಯಪ್ಪನವರು ಇದನ್ನು ʼಎಡಚರʼ ಅಡ್ಡಗಾಲು, ಕಿರುಕುಳ ಎಂದು ಭಾವಿಸಿದರು. ಈ ಸಂದರ್ಭವನ್ನು ಬಳಸಿಕೊಂಡು ಎಡಚರು ಮತ್ತು ಬಲಚರು ಎಂದೆಲ್ಲ ಹೇಳಿ ಎಡಚರನ್ನು ಕಟುವಾಗಿ ಟೀಕಿಸಿದ್ದಾರೆ.

ಮೈಸೂರಿನ ರಂಗಪ್ರಿಯರಾಗಲಿ, ಕರ್ನಾಟಕದ ರಂಗಾಸಕ್ತರಾಗಲಿ, ರಂಗಾಯಣವನ್ನು ಒಂದು ಗಂಭೀರ ರಂಗಭೂಮಿಯ ಸಂಸ್ಥೆ ಎಂದು ಪರಿಭಾವಿಸಿ ದಶಕಗಳೇ ಕಳೆದಿವೆ. ರಂಗಾಯಣವನ್ನು ಕಟ್ಟಿಬೆಳಸಿದ ಈವರೆಗಿನ ರಂಗಕಲೆಯ ಅಧ್ಯಾಪಕರಾಗಲಿ, ರಂಗಾಯಣದ ನಿರ್ದೇಶಕರಾಗಲಿ, ರಂಗಾಸಕ್ತರಾಗಲಿ ಎಂದೂ ರಂಗಾಯಣವನ್ನು ಎಡಚ, ಬಲಚ ಸಂಸ್ಥೆ ಎಂದು ಭಾವಿಸಲೇ ಇಲ್ಲ. ಯಾರ ಒಲವು ಯಾವುದೇ ಇರಲಿ, ರಂಗಭೂಮಿ, ಅಥವಾ ಬಹುರೂಪಿ ಉತ್ಸವ ಎಂದಾಗ, ಇದೆಲ್ಲವನ್ನು ಮೀರಿದ ಒಂದು ಸಾಂಸ್ಕೃತಿಕ ಹಬ್ಬ, ಇಡೀ ರಾಷ್ಟ್ರದ ಭಿನ್ನ ಭಾಷೆಗಳ, ಸಂಸ್ಕೃತಿಗಳ ಮೇಳ, ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ಈ ಕಾರಣಕ್ಕಾಗಿಯೇ ʼಬಹುರೂಪಿʼ ಎಂದರೆ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ ನೋಡುತ್ತ, ಭಾಗವಹಿಸುತ್ತ ಈ ಹಬ್ಬಕ್ಕೆ ಆಸರೆಯಾಗಿ ನಿಂತಿದ್ದಾರೆ.
ಇದು ಒಬ್ಬರ ಸಾಧನೆಯಲ್ಲ; ರಂಗಾಯಣದ ನಿರ್ದೇಶಕರು, ರಂಗಕಲೆಯ ಅಧ್ಯಾಪಕರು, ಕಲಾವಿದರು, ಕಲಾರಸಿಕರು ಎಲ್ಲ ಸೇರಿದ ಸಾಮೂಹಿಕ ಪ್ರಯತ್ನದ ಫಲ. ಹಾಗೆಯೇ ಈ ಬಹುರೂಪಿ ಉತ್ಸವಕ್ಕೆ ಸರ್ಕಾರ, ಖಾಸಗೀ ಸಂಸ್ಥೆಗಳು ಮತ್ತು ಸಾರ್ವಜನಿಕರು ಆರ್ಥಿಕ ಬಲವನ್ನೂ ಒದಗಿಸುತ್ತ ಬಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲು ಅವಕಾಶವೇ ಇಲ್ಲದಂತೆ ಈ ಹಬ್ಬ ಎರಡು ದಶಕಗಳ ಕಾಲ ನಡೆದುಕೊಂಡು ಬಂದಿದೆ.

ಇದನ್ನೂ ಓದಿರಿ: ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಕಾರ್ಯಪ್ಪನವರು ತಾವೇ ಸರ್ಕಾರದಿಂದ ಹಣತಂದಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ತಾವೇ ಹೇಳಿಕೊಂಡಿರುವಂತೆ, ಕಾರ್ಯಪ್ಪನವರು ಆರ್‌‌ಎಸ್‌ಎಸ್‌ನಿಂದ ಬಂದವರು. ಆರ್‌‌ಎಸ್‌ಎಸ್‌ನ ಬಿಗಿಹಿಡಿತದಲ್ಲಿರುವ ಸರ್ಕಾರ ಕಾರ್ಯಪ್ಪನವರು ಕೇಳಿದಷ್ಟು ಹಣವನ್ನು ಕೊಟ್ಟಿರಬಹುದು. ಆದರೆ ಈ ಹಣ ಯಾವುದೇ ಪಕ್ಷದ ಅಥವಾ ಸಂಸ್ಥೆಯ ಹಣವಲ್ಲ. ಇದು ಜನರ ಹಣ. ನಾಡಿನ ಜನರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಹಣದ ಮೂಲಕ ಬೆಳೆಸುತ್ತ ಬಂದಿದ್ದಾರೆ. ಸರ್ಕಾರ ಈ ಹಣವನ್ನು ಕೊಡುವುದು ಅದರ ಕರ್ತವ್ಯಭಾಗ. ಇಲ್ಲಿ ಕಾರ್ಯಪ್ಪನವರ ಓಡಾಟ, ಶ್ರಮ ಇದ್ದರೆ ಅದಕ್ಕಾಗಿ ಅವರಿಗೆ ವಂದನೆ ಹೇಳೋಣ. ಆದರೆ ಹಣ ಸಾರ್ವಜನಿಕ ಹಣ ಎಂಬ ಎಚ್ಚರ ಮಾನ್ಯ ಕಾರ್ಯಪ್ಪನರಿಗೆ ಮತ್ತು ಆರ್‌‌ಎಸ್‌ಎಸ್‌ ಅಥವಾ ಬಿಜೆಪಿಗೆ ಇರಬೇಕಾಗುತ್ತದೆ.

ರಂಗಾಯಣದ ಕಿರಿಯ ಕಲಾವಿದರ ಬಗ್ಗೆ ಕಾರ್ಯಪ್ಪನವರು ಆಡಿರುವ ಮಾತುಗಳು ಈಗ ಗಾಳಿಯಲ್ಲಿ ಹರಿದಾಡುತ್ತಿವೆ. ಆ ಮಾತುಗಳನ್ನು ಇಲ್ಲಿ ಬಳಸದೆ, ಅದರ ಧ್ವನಿ ಮತ್ತು ಅರ್ಥವನ್ನಷ್ಟೆ ಬಳಸಿಕೊಂಡು ಹೇಳುವುದಾದರೆ: ರಂಗಾಯಣವಾಗಲಿ, ಅದು ಪ್ರಸ್ತುತ ಪಡಿಸುವ ವಿಭಿನ್ನ ಬಗೆಯ ನಾಟಕಗಳಾಗಲಿ ಕೇವಲ ರಂಜನೆಗಾಗಿ ಇರುವ ಸಾಧನಗಳಲ್ಲ. ಯಾವುದೇ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಚಿಂತನೆಯನ್ನು ಬೆಳೆಸುತ್ತ, ವೈಚಾರಿಕ ಎಚ್ಚರವನ್ನು ಜಾಗೃತವಾಗಿಡುತ್ತ, ಜನತಂತ್ರ ವ್ಯವಸ್ಥೆಯ ಜೀವನಾಡಿಯಾಗಿ ಕ್ರಿಯಾಶೀಲವಾಗಿರುತ್ತವೆ. ಕಲಾವಿದರು ಮುಕ್ತವಾಗಿ ಮಾತನಾಡುವ, ಪ್ರಬುದ್ಧವಾಗಿ ಚಿಂತಿಸುವ ಅವಕಾಶವೂ ಇಲ್ಲಿರುತ್ತದೆ. ಇಂಥ ಅವಕಾಶ ಬಳಕೆಯಾಗುತ್ತಿದ್ದರೆ ನಾವೆಲ್ಲ ಸಂತೋಷಪಡಬೇಕು. ಜನತೆಯ ಹಣ ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿದೆ ಎಂದುಕೊಳ್ಳಬೇಕು. ಅದು ಬಿಟ್ಟು, ʼಸರ್ಕಾರದ ಹಣವನ್ನು ತಿಂದು, ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆʼ ಇತ್ಯಾದಿ ನಮೂನೆಯ ಮಾತನಾಡುವುದು ರಂಗಾಯಣದಂಥ ಸ್ವಾಯತ್ತ ಸಂಸ್ಥೆಯ, ಜನ ಸಂಸ್ಥೆಯ ಘನತೆಯನ್ನು ಕೆಳಗಿಳಿಸಿದಂತಾಗುತ್ತದೆ. ರಂಗಾಯಣದ ನಿರ್ದೇಶಕ ಸ್ಥಾನದಲ್ಲಿರುವವರು ಇಂಥ ಕೆಲಸಕ್ಕೆ ಮುಂದಾಗಬಾರದು.

ಇದಲ್ಲದೆ, ಕಾರ್ಯಪ್ಪನವರು ‘ಸಂವಾದ’ (SAMVADA) ಎಂಬ ಯೂಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ, ಬಿ.ವಿ.ಕಾರಂತರನಂತರ ರಂಗಾಯಣಕ್ಕೆ ನಿರ್ದೇಶಕರಾಗಿ ಬಂದವರಲ್ಲಿ ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲ ‘ಮಾವೋವಾದಿಗಳ ಸಿದ್ಧಾಂತಗಳನ್ನು ಸ್ವೀಕರಿಸುವವರು’ ಎಂದು ಇಲ್ಲಸಲ್ಲದ ಮಾತಾಡಿದ್ದಾರೆ. ಆ ಸಿದ್ಧಾಂತವನ್ನು, ತನಗಿಂತ ಮುಂಚೆ ರಂಗಾಯಣದಲ್ಲಿದ್ದು ಆ ಸಂಸ್ಥೆಗೆ ಜವಾಬ್ದಾರರಾಗಿದ್ದವರ ತಲೆಗೆ ಮೇಲಿಂದಮೇಲೆ ಕಟ್ಟಿದ್ದಾರೆ. ಆದರೆ, ಆ ಸಂಬಂಧ ಅವರು ಆಡಿರುವುದೆಲ್ಲ ಶುದ್ಧ ಅಬದ್ಧವಾದ ಮಾತು. ವಿಶ್ವವಿದ್ಯಾಲಯಗಳೂ ಸೇರಿದಂತೆ ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆ ಮತ್ತು ಕಲಾಸಂಸ್ಥೆಯ ಮುಖ್ಯಸ್ಥರು ಕಾರ್ಯಪ್ಪನವರ ತರಹ ಅಬದ್ಧಗಳನ್ನು, ಕೀಳು ಮಾತುಗಳನ್ನು ಎಂದೂ ಆಡಿದ್ದಿಲ್ಲವೆಂದೇ ಹೇಳಬೇಕು.

ಈವರೆಗೆ ರಂಗಾಯಣ ನಡೆದುಬಂದ ದಾರಿಯನ್ನು ನೋಡಿದರೆ, ನಿರ್ದೇಶಕ ಸ್ಥಾನದಲ್ಲಿದ್ದು ಕೆಲಸ ಮಾಡಿರುವ ಗಣ್ಯರು, ಮತ್ತು ಅಲ್ಲಿ ಅದರ ಆರಂಭದ ದಿನಗಳಿಂದ ಕೆಲಸಮಾಡಿ ಅದರ ಆರೋಗ್ಯಪೂರ್ಣ ಕಾಯಕಕ್ಕೆ ಬುನಾದಿಹಾಕಿದ ರಂಗಕಲೆಯ ಅಧ್ಯಾಪಕರು, ವಿಭಿನ್ನ ಚಿಂತನೆಯ, ತಾತ್ವಿಕ ನಿಲುವಿನ, ದೃಷ್ಟಿ ಧೋರಣೆಯ ಗಂಭೀರ ವ್ಯಕ್ತಿಗಳು. ಇವರು ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ಬದಿಗಿಟ್ಟು ರಂಗಭೂಮಿಯ ಘನತೆಗೆ ಕುಂದುಬರದಂತೆ ನೋಡಿಕೊಂಡಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ರಂಗಾಯಣವನ್ನು ಬೆಳಸಿ, ಉಳಿಸಿ ಹೋಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ಮತ್ತು ಕನ್ನಡಿಗರ ಮನಸ್ಸಿನಲ್ಲಿ ರಂಗಾಯಣ ಮತ್ತು ಬಹುರೂಪಿಗಳು ಉಳಿದಿದ್ದರೆ ಅದಕ್ಕೆ ಕಾರಣ ಈ ಎಲ್ಲ ಗಣ್ಯರು. ಅವರನ್ನು ಯಾರೂ ʼಎಡಚರುʼ ʼಬಲಚರುʼ ಎಂದು ಗುರುತಿಸಲಿಲ್ಲ. ಅವರು ರಂಗಭೂಮಿಯವರು. ಅಲ್ಲಿಯೇ ಚಿಂತಿಸಿ, ದುಡಿದು, ರಂಗಭೂಮಿಯನ್ನು ಬೆಳಸಿದವರು; ಕರ್ನಾಟಕವನ್ನು ಮುನ್ನಡೆಸಿದವರು.
ಕಾರ್ಯಪ್ಪನವರು ಮತ್ತು ಅವರಂಥವರು ರಂಗಾಯಣವನ್ನು ಮತ್ತು ಬಹುರೂಪಿಯನ್ನು ಹಗುರವಾಗಿ ನೋಡಬಾರದು; ಅವುಗಳ ಗೌರವವನ್ನು ಹಾಳುಮಾಡಬಾರದು ಎಂಬ ಸದಾಗ್ರಹ ನಮ್ಮದು.

ಇಂತೀ:
ಪಂಡಿತ ರಾಜೀವ ತಾರಾನಾಥ್, ಸರೋದ್ ವಾದಕ
ಪ. ಮಲ್ಲೇಶ್, ಸಮಾಜವಾದಿ ಕಾರ್ಯಕರ್ತ
ಎಂ. ಸಿ. ಕೃಷ್ಣಪ್ರಸಾದ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ಎಸ್. ರಾಮು, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ.
ಸಂತೋಷಕುಮಾರ್ ಕುಸನೂರು, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ನೂರ್ ಅಹಮದ್ ಶೇಖ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ಮೈಮ್ ರಮೇಶ್, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ರಘುನಂದನ, ಕವಿ, ರಂಗನಿರ್ದೇಶಕ, ಮಾಜಿ ಅಭಿನಯ ಪ್ರಶಿಕ್ಷಕ, ರಂಗಾಯಣ, ಮೈಸೂರು
ಬಸವಲಿಂಗಯ್ಯ, ರಂಗನಿರ್ದೇಶಕ, ಮತ್ತು ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಮೈಸೂರು
ಭಾಗೀರಥಿಬಾಯಿ ಕದಂ, ಬಹುಭಾಷಾ ನಟಿ, ರಂಗನಿರ್ದೇಶಕಿ, ಮತ್ತು ಮಾಜಿ ನಿರ್ದೇಶಕಿ, ರಂಗಾಯಣ, ಮೈಸೂರು
ವೆಂಕಟರಮಣ ಐತಾಳ, ರಂಗನಿರ್ದೇಶಕ, ನೀನಾಸಮ್ ರಂಗಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ,
ಇಕ್ಬಾಲ್ ಅಹ್ಮದ್ , ರಂಗ ನಿರ್ದೇಶಕ ಹಾಗೂ ನಟ, ಮತ್ತು ಚಿತ್ರಕಾರ
ಎಸ್. ಸುರೇಂದ್ರನಾಥ್, ಕತೆಗಾರ, ನಾಟಕಕಾರ, ರಂಗನಿರ್ದೇಶಕ
ಐ. ಕೆ. ಬೊಳುವಾರು, ರಂಗನಿರ್ದೇಶಕ, ನಿರತನಿರಂತ, ಪುತ್ತೂರು
ಪ್ರಕಾಶ್ ಗರುಡ, ರಂಗನಿರ್ದೇಶಕ, ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಧಾರವಾಡ
ರಜನಿ ಗರುಡ, ರಂಗನಿರ್ದೇಶಕಿ, ಗೊಂಬೆಮನೆ, ಧಾರವಾಡ
ವಸಂತ ಬನ್ನಾಡಿ, ರಂಗನಿರ್ದೇಶಕ, ಬರಹಗಾರ
ಬಿ. ಸುರೇಶ, ರಂಗಕರ್ಮಿ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ
ಶಂಕರಯ್ಯ ಆರ್ ಘಂಟಿ, ರಂಗ ನಿರ್ದೇಶಕ, ಸಂಘಟಕ, ಕಲಬುರಗಿ
ಅಚ್ಯುತಕುಮಾರ್ ಎಚ್ ಕೆ, ನಟ
ಎಚ್ ಎಸ್ ರಾಘವೇಂದ್ರರಾವ್, ವಿಮರ್ಶಕ, ಅನುವಾದಕ
ಎನ್. ಮನು ಚಕ್ರವರ್ತಿ, ಸಾಹಿತ್ಯ ಮತ್ತು ಚಲನಚಿತ್ರ ವಿಮರ್ಶಕ
ಓ. ಎಲ್. ನಾಗಭೂಷಣಸ್ವಾಮಿ, ಅನುವಾದಕ, ವಿಮರ್ಶಕ
ಜಿ. ಪಿ. ಬಸವರಾಜು, ಕವಿ
ಜಿ. ರಾಜಶೇಖರ್, ಬರಹಗಾರ
ರಾಜೇಂದ್ರ ಚೆನ್ನಿ, ಲೇಖಕ
ಬೊಳುವಾರು ಮಹಮದ್ ಕುಂಞಿ, ಬರಹಗಾರ, ಹಾಗೂ ಗೌರವಾಧ್ಯಕ್ಷ, ಸಮುದಾಯ, ಕರ್ನಾಟಕ.
ಕೇಶವ ಶರ್ಮ, ಬರಹಗಾರ
ಡಿ. ಎಸ್. ನಾಗಭೂಷಣ, ಲೇಖಕ, ಮತ್ತು ಸಂಪಾದಕ, ಹೊಸ ಮನುಷ್ಯ
ಬಿ.ಟಿ.ಜಾಹ್ನವಿ, ಕತೆಗಾರ್ತಿ
ಅಮರೇಶ ನುಗಡೋಣಿ, ಕತೆಗಾರ
ಪಿ.ಮಹಮ್ಮದ್‌, ವ್ಯಂಗ್ಯಚಿತ್ರಕಾರ
ಆರ್‌.ವಿಜಯರಾಘವನ್‌, ಬರಹಗಾರ
ಟಿ. ಎಸ್. ವೇಣುಗೋಪಾಲ್, ಅರ್ಥಿಕ ಚಿಂತಕ-ಲೇಖಕ, ಪುಸ್ತಕ ಪ್ರಕಾಶಕ
ಡಾ.ವಿ.ಲಕ್ಷ್ಮೀನಾರಾಯಣ, ಸಾಮಾಜಿಕ ಕಾರ್ಯಕರ್ತ
ಇ.ರತಿರಾವ್‌, ಸಾಮಾಜಿಕ ಕಾರ್ಯಕರ್ತೆ
ನಾ. ದಿವಾಕರ, ಬರಹಗಾರ, ಸಾಮಾಜಿಕ ಕಾರ್ಯಕರ್ತ
ಪ್ರೊ. ಪಂಡಿತಾರಾಧ್ಯ, ಬರಹಗಾರ, ನಿವೃತ್ತ ಪ್ರಾಧ್ಯಾಪಕ
ರವಿಕುಮಾರ್ ಕಾಶಿ, ಸಮಕಾಲೀನ ಕಲಾವಿದ
ವಿ. ಎನ್. ಲಕ್ಷ್ಮೀನಾರಾಯಣ, ಬರಹಗಾರ, ನಿವೃತ್ತ ಪ್ರಾಧ್ಯಾಪಕ
ಶೈಲಜ, ಸಂಗೀತಜ್ಞೆ, ಲೇಖಕಿ, ಪುಸ್ತಕ ಪ್ರಕಾಶಕಿ
ಸಚ್ಚಿದಾನಂದ ಕೆ. ಜೆ., ವರ್ಣಚಿತ್ರ ಕಲಾವಿದ
ಸವಿತಾ ನಾಗಭೂಷಣ, ಕವಯಿತ್ರಿ
ಪ್ರಶಾಂತ್ ಪಂಡಿತ್, ಚಲನಚಿತ್ರ ಸಂಕಲನಕಾರ


ಇದನ್ನೂ ಓದಿರಿ: ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...