ಭಾರತದ ಸಗಟು ಹಣದುಬ್ಬರವು ನವೆಂಬರ್‌ನಲ್ಲಿ ಶೇ. 14.23ಕ್ಕೆ ಏರಿದೆ. ತೈಲ, ಕಚ್ಚಾ ಲೋಹಗಳು ಮತ್ತು ಆಹಾರ ಉತ್ಪನ್ನಗಳ ಬೆಲೆಗಳ ಹೆಚ್ಚಳದಿಂದಾಗಿ ಸಗಟು ಹಣದುಬ್ಬರವು 12 ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿ ದಾಖಲಾಗಿದೆ ಎಂದು ಸರ್ಕಾರಿ ಅಂಕಿಅಂಶಗಳು ತೋರಿಸಿವೆ. ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ದರವು ಶೇ. 12.54ರಷ್ಟಿತ್ತು.
ಸಗಟು ಮಾರುಕಟ್ಟೆಗಳಲ್ಲಿನ ಬೆಲೆ ಏರಿಕೆ ಸೂಚ್ಯಂಕವು ಸತತ ಎಂಟನೇ ತಿಂಗಳಿನಲ್ಲಿ ಎರಡಂಕಿಯಲ್ಲೇ ಉಳಿದಿದೆ. ಹಣದುಬ್ಬರಕ್ಕೆ ಕಾರಣವಾದ ಇತರ ಉತ್ಪನ್ನಗಳಲ್ಲಿ ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು ಸೇರಿವೆ.
ಆಹಾರ ಸೂಚ್ಯಂಕವು ಅಕ್ಟೋಬರ್‌ನಲ್ಲಿ ಶೇ. 3.06ರಲ್ಲಿತ್ತು. ನವೆಂಬರ್‌ನಲ್ಲಿ ಶೇ. 6.70ಕ್ಕೆ ತೀವ್ರವಾಗಿ ಏರಿಕೆ ಕಂಡಿದೆ. ಇಂಧನ ಮತ್ತು ಶಕ್ತಿಯ ಸಗಟು ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ.37.18 ರಷ್ಟಿತ್ತು. ನವೆಂಬರ್‌ನಲ್ಲಿ ಶೇ.39.81ಕ್ಕೆ ಏರಿದೆ.
ಕಚ್ಚಾ ಪೆಟ್ರೋಲಿಯಂ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ. 80.57 ಇತ್ತು. ನವೆಂಬರ್‌ನಲ್ಲಿ ಶೇ. 91.74 ರಷ್ಟಿದೆ. ನವೆಂಬರ್‌ನಲ್ಲಿನ ಚಿಲ್ಲರೆ ಹಣದುಬ್ಬರದ ಅಂಕಿಅಂಶಗಳನ್ನು ಕೇಂದ್ರ ಸರ್ಕಾರವು ಸೋಮವಾರ ಬಿಡುಗಡೆ ಮಾಡಿತ್ತು. ಅಕ್ಟೋಬರ್‌ನಲ್ಲಿ ಶೇ.4.48ರಷ್ಟಿದ್ದ ಚಿಲ್ಲರೆ ಹಣದುಬ್ಬರ ನವೆಂಬರ್‌ನಲ್ಲಿ ಶೇ. 4.91ಕ್ಕೆ ಏರಿದೆ ಎಂದು ಅಂಕಿ-ಅಂಶಗಳು ಹೇಳಿವೆ.
ಆಹಾರ, ಪಾನೀಯಗಳು, ಬಟ್ಟೆ, ಪಾದರಕ್ಷೆಗಳು, ವಸತಿ ಬೆಲೆಗಳಲ್ಲಿನ ಚಿಲ್ಲರೆ ಹಣದುಬ್ಬರವು ತಿಂಗಳ ಅವಧಿಯಲ್ಲಿ ಹೆಚ್ಚಾಯಿತು. ತರಕಾರಿ ಬೆಲೆಯು ತೀವ್ರವಾಗಿ ಏರಿತು. ಆಹಾರ ಮತ್ತು ಪಾನೀಯಗಳಲ್ಲಿನ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ. 1.8ರಷ್ಟಿದ್ದದ್ದು ಈಗ ಶೇ.2.6ರಷ್ಟಾಗಿದೆ.
ಏನಿದು ಹಣದುಬ್ಬರ?
ಖರೇ ಹೇಳಬೇಕಂದರ ಇನಫ್ಲೇಷನ್ ಅಂದರೆ ಬರೇ ಉಬ್ಬರ ಅಥವಾ ಗಾಳಿ ಹಾಕಿಯೋ, ಮತ್ಯಾವುದೋ ರೀತಿಯಿಂದ ಉಬ್ಬಿಸೋದು. ಅಂದರ ಏನು?
ಸರಳ ಹೇಳಬೇಕಂದರ ಅದು ನಮ್ಮ ರೊಕ್ಕಕ್ಕ ಬೆಲೆ ಕಮ್ಮಿ ಆಗೇದ, ನಮ್ಮ ರೂಪಾಯಿಗೆ ಮೊದಲಿನಷ್ಟು ಸಾಮಾನು ಬರ್ತಾ ಇಲ್ಲ. ಈಗ ಕಮ್ಮಿ ಆಗೇದ ಅಂತ ಅರ್ಥ. ನಮ್ಮ ಮನ್ಯಾಗ ಅಜ್ಜಿಗಳು ಹೇಳತಿರತಾರಲ್ಲ, “ನಮ್ಮ ಕಾಲ ಸೋವಿ ಕಾಲ, ಆವಾಗ ಒಂದು ಚೀಲ ಜೋಳ ಕೊಟ್ಟರ ಒಂದು ತೊಲಿ ಬಂಗಾರ ಬರ್ತಿತ್ತು” ಅಂತ, ಅವರು ತಮಗ ಅರಿವಿರಲಾರದಂಗ ಹಣದ ಉಬ್ಬರದ ಬಗ್ಗೆ ಮಾತಾಡತಿರತಾರ. ಅಂದರ ಅವತ್ತಿಗೆ ರೂಪಾಯಿಗೆ ಕಿಮ್ಮತ್ತು ಇತ್ತು. ಈಗ ಇಲ್ಲ ಅಂತ.
ಇದನ್ನೂ ಓದಿರಿ: ಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್


