Homeಮುಖಪುಟ2020ರಲ್ಲಿ ದಿನವೊಂದಕ್ಕೆ ಸರಾಸರಿ 31 ಅಪ್ರಾಪ್ತ ಮಕ್ಕಳು ಆತ್ಮಹತ್ಯೆ: ಒಕ್ಕೂಟ ಸರ್ಕಾರ

2020ರಲ್ಲಿ ದಿನವೊಂದಕ್ಕೆ ಸರಾಸರಿ 31 ಅಪ್ರಾಪ್ತ ಮಕ್ಕಳು ಆತ್ಮಹತ್ಯೆ: ಒಕ್ಕೂಟ ಸರ್ಕಾರ

ಪ್ರಸಕ್ತ ವರ್ಷದಲ್ಲಿ ಅಪ್ರಾಪ್ತ ವಯಸ್ಕರ ಆತ್ಮಹತ್ಯೆಯ ಅಂಕಿ ಅಂಶವನ್ನು ಸರ್ಕಾರ ಒದಗಿಸಿಲ್ಲ

- Advertisement -
- Advertisement -

ಒಕ್ಕೂಟ ಸರ್ಕಾರವು ಮಂಗಳವಾರ ಸಂಸತ್ತಿಗೆ ಒದಗಿಸಿದ ಮಾಹಿತಿಯ ಪ್ರಕಾರ, 2020 ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 11,396 ಮಕ್ಕಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಸರ್ಕಾರ ನೀಡಿದ ಈ ಅಂಕಿ ಅಂಶದ ಪ್ರಕಾರ, ದೇಶದಲ್ಲಿ ಸರಾಸರಿ ದಿನವೊಂದಕ್ಕೆ 31 ಮಕ್ಕಳು ತಮ್ಮ ಪ್ರಾಣವನ್ನು ಕಳೆದ ವರ್ಷ ಕಳೆದುಕೊಂಡಿದ್ದಾರೆ.

“ಕಳೆದ ಮೂರು ವರ್ಷಗಳ ಲಭ್ಯವಿರುವ ಮಾಹಿತಿಯ ಪ್ರಕಾರ, 2018 ರಲ್ಲಿ 9431, 2019 ರಲ್ಲಿ 9613 ಮತ್ತು 2020 ರಲ್ಲಿ 11396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ತೀವ್ರ ಬೆಲೆ ಏರಿಕೆಯಾದರೂ ಅನುದಾನ ಹೆಚ್ಚಳವಿಲ್ಲ: ಅರೆಹೊಟ್ಟೆಯಲ್ಲಿ ಶಾಲಾ ಮಕ್ಕಳು

ಪ್ರಸಕ್ತ ವರ್ಷದಲ್ಲಿ ಅಪ್ರಾಪ್ತ ವಯಸ್ಕರ ಆತ್ಮಹತ್ಯೆಯ ಅಂಕಿ ಅಂಶವನ್ನು ಸರ್ಕಾರ ಒದಗಿಸಿಲ್ಲ.

ಕೊರೊನಾ ಮತ್ತು ಬೇರೆ ಸಮಯದಲ್ಲಿ ಮಾನಸಿಕ ಆರೋಗ್ಯ ಹಾಗೂ ಭಾವನಾತ್ಮಕ ಯೋಗಕ್ಷೇಮಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳಿಗೆ ಮಾನಸಿಕ ಬೆಂಬಲವನ್ನು ಒದಗಿಸಲು ಶಿಕ್ಷಣ ಸಚಿವಾಲಯವು ‘ಮನೋದರ್ಪಣ’ ಎಂಬ ಪೂರ್ವಭಾವಿ ಉಪಕ್ರಮವನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.

ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಟಿ.ಆರ್. ಪರಿವೇಂದರ್ ಅವರು, ಕಳೆದ ಮೂರು ವರ್ಷಗಳಲ್ಲಿ ಮಕ್ಕಳ ಆತ್ಮಹತ್ಯೆ ಪ್ರಕರಣಗಳಲ್ಲಿ ಏನಾದರೂ ಏರಿಕೆಯಾಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ:‘ದೊಡ್ಡ ತಪ್ಪಾಗಿದೆ’ – ಅಫ್ಘಾನ್‌ನ 7 ಮಕ್ಕಳು ಸೇರಿದಂತೆ 10 ನಾಗರಿಕರನ್ನು ಕೊಂದ ಬಗ್ಗೆ ತಪ್ಪೊಪ್ಪಿಕೊಂಡ ಅಮೆರಿಕಾ

ಶಿಕ್ಷಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ ‘ಮನೋದರ್ಪಣ’ ವೆಬ್‌ಪುಟವನ್ನು ರಚಿಸಲಾಗಿದೆ ಎಂದು ಸಚಿವ ಅಜಯ್‌ ಮಿಶ್ರಾ ಮಾಹಿತಿ ನೀಡಿದ್ದಾರೆ. ಇದರಲ್ಲಿ ಸಲಹೆ, ಪ್ರಾಯೋಗಿಕ ಸಲಹೆಗಳು, ಪೋಸ್ಟರ್‌ಗಳು, ವೀಡಿಯೊಗಳು, ಮನೋಸಾಮಾಜಿಕ ಬೆಂಬಲ, FAQ ಗಳು ಮತ್ತು ಆನ್‌ಲೈನ್ ಪ್ರಶ್ನೆ ವ್ಯವಸ್ಥೆ, ಮಾಡಬೇಕಾದ ಮತ್ತು ಮಾಡಬಾರದಂತಹ ವಿಚಾರಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 2020 ರ ಏಪ್ರಿಲ್‌ನಲ್ಲಿ ‘ಶಾಲಾ ಮಕ್ಕಳಿಗಾಗಿ NCERT ಕೌನ್ಸೆಲಿಂಗ್ ಸೇವೆಗಳನ್ನು’ ಪ್ರಾರಂಭಿಸಿದ್ದು, ಇದು ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಕಾಳಜಿಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ದೇಶದ ವಿವಿಧ ಪ್ರದೇಶಗಳಲ್ಲಿ ಸುಮಾರು 270 ಸಲಹೆಗಾರರಿಂದ ಈ ಸೇವೆಯನ್ನು ಉಚಿತವಾಗಿ ಒದಗಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

(ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ – 104)

ಇದನ್ನೂ ಓದಿ:ಸಾಮಾನ್ಯ ಲಸಿಕೆ ಪಡೆಯದ 30 ಲಕ್ಷ ಮಕ್ಕಳು ಭಾರತದಲ್ಲಿದ್ದಾರೆಂದ ವಿಶ್ವಸಂಸ್ಥೆ; ನಿರಾಕರಿಸಿದ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...