ಅಕ್ರಮ ಯಹೂದಿ ವಸಾಹತುಗಾರರ ಹಿಂಸಾಚಾರಕ್ಕೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಅನೇಕ ಪ್ಯಾಲೆಸ್ತೀನಿಯನ್ ಗ್ರಾಮಗಳು ಶುಕ್ರವಾರ ಗುರಿಯಾಗಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಪಶ್ಚಿಮ ದಂಡೆಯ ಹೊರಠಾಣೆ ಬಳಿ ಯಹೂದಿ ವಸಾಹತುಗಾರನನ್ನು ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ನಬುಲಸ್ ನಗರದ ಪಕ್ಕದಲ್ಲಿರುವ ಪ್ಯಾಲೇಸ್ಟಿನಿಯನ್ ಗ್ರಾಮಗಳಿಗೆ ಪ್ರವೇಶಿಸಿದ ಯಹೂದಿ ವಸಾಹತುಗಾರರು ಮನೆಗಳು, ಕಾರುಗಳು ಇತ್ಯಾದಿಗಳನ್ನು ನಾಶಪಡಿಸಿ, ಜನರಿಗೆ ಥಳಿಸಿದರು ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ಯಾಲೆಸ್ತೀನಿಗಳನ್ನು ಅಕ್ರಮ ಸ್ಥಳಾಂತರ ಮಾಡುವ ಇಸ್ರೇಲ್‌ನ ನಡೆ ಹಿಂಸಾಚಾರ ಹೆಚ್ಚಿಸುತ್ತದೆ: ಯುರೋಪಿಯನ್ ಯುನಿಯನ್
ಘಟನೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಇವುಗಳಲ್ಲಿ ನಿವಾಸಿಗಳು ಮತ್ತು ಶಸ್ತ್ರಸಜ್ಜಿತ ಇಸ್ರೇಲಿ ವಸಾಹತುಗಾರರ ನಡುವಿನ ದಾಳಿಗಳು ಮತ್ತು ಘರ್ಷಣೆಯ ಸಮಯದಲ್ಲಿ ಹಲ್ಲೆಗೊಳಗಾಗಿರುವ ಬಲಿಪಶುಗಳನ್ನು ಕಾಣಬಹುದಾಗಿದೆ. ದಾಳಿಕೋರರು ತಮ್ಮ ವಿರುದ್ಧ ಬಂದೂಕುಗಳನ್ನು ಬಳಸಿ, ನಿವಾಸಿಯನ್ನು ಅಪಹರಿಸಲು ಪ್ರಯತ್ನಿಸಿದರು ಎಂದು ಪ್ಯಾಲೆಸ್ತೀನಿಯನ್ನರು ಆರೋಪಿಸಿದ್ದಾರೆ.
ಗುರುವಾರದಂದು, ಪ್ಯಾಲೆಸ್ತೀನಿಯನ್ ಬಂದೂಕುದಾರಿಗಳು ಯಹೂದಿ ವಸಾಹತುಗಾರನ ಕಾರಿನ ಮೇಲೆ ಗುಂಡು ಹಾರಿಸಿ ಕೊಂದುಹಾಕಿ ಅವರ ಸಹಚರರನ್ನು ಗಾಯಗೊಳಿಸಿದ್ದರು ಎಂದು ವರದಿಯಾಗಿತ್ತು.
ಈ ಕೊಲೆಯಿಂದಾಗಿ ಪ್ಯಾಲೆಸ್ತೀನಿಯನ್ ನಿವಾಸಿಗಳು ಮತ್ತು ಇಸ್ರೇಲಿ ವಸಾಹತುಗಾರರ ನಡುವಿನ ಹಿಂಸಾಚಾರ ಮತ್ತು ಸಂಘರ್ಷವನ್ನು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಗುರುವಾರದ ಬಂದೂಕುಧಾರಿಗಳನ್ನು ಪತ್ತೆ ಮಾಡುವುದಾಗಿ ಇಸ್ರೇಲ್ ಆಡಳಿತ ಹೇಳಿದ್ದು, ಘಟನೆ ನಡೆದ ಪ್ರದೇಶದಲ್ಲಿ ಭಾರೀ ಪಡೆಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನನ್ನು ಮತ್ತೆ ಬೆಂಬಲಿಸಿದ ಭಾರತ
ರಾತ್ರಿಯ ದಾಳಿಯಲ್ಲಿ ಸೇನೆಯು ಕನಿಷ್ಠ ಮೂವರನ್ನು ಬಂಧಿಸಿದೆ ಎಂದು ಪ್ಯಾಲೆಸ್ತೀನಿಯನ್ ಸುದ್ದಿ ಸಂಸ್ಥೆ ವಫಾ ವರದಿ ಮಾಡಿದೆ.
ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ ಇತ್ತೀಚೆಗೆ ಹಿಂಸಾಚಾರ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಇತ್ತಿಚೆಗೆ ಇಲ್ಲಿ ಪ್ಯಾಲೆಸ್ತೀನಿಯನ್ ಬಣಗಳು ಈ ಪ್ರದೇಶದಲ್ಲಿ ಇಸ್ರೇಲಿಗಳನ್ನು ಕೊಂದಿದ್ದವು ಮತ್ತು ಇಸ್ರೇಲಿ ಸೈನಿಕರು ಪ್ರತಿದಾಳಿ ನಡೆಸಿದ್ದರು.
ಇದಕ್ಕಿಂತಲೂ ಮುಂದೆ ಅಕ್ರಮ ಇಸ್ರೇಲಿ ವಸಾಹತುಗಳ ವಿರುದ್ಧ ಪ್ರತಿಭಟನೆಯ ಭಾಗವಾಗಿದ್ದ ಪ್ಯಾಲೆಸ್ತೀನ್ ವ್ಯಕ್ತಿಯನ್ನು ಇಸ್ರೇಲ್ ಸೇನೆ ಕೊಂದಿತ್ತು. ಜೊತೆಗೆ ಮಿಲಿಟರಿ ಚೆಕ್‌ಪಾಯಿಂಟ್‌ನಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪ್ರಾಪ್ತ ವಯಸ್ಕ ಬಾಲಕನೊಬ್ಬ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಇಸ್ರೇಲ್‌ಗೆ ಹೊಸ ಪ್ರಧಾನಿ; ಪ್ಯಾಲೆಸ್ಟೇನಿಯನ್ನರು ಬೆಂಕಿಯಿಂದ ಬಾಣೆಲೆಗೆ?


