Homeಕರ್ನಾಟಕಸಮಾನ ವೇತನ ಕಾನೂನು ಮಾಡಿ ಅಂದರೆ ಮೊಟ್ಟೆ, ಮಾಂಸ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ: ಬಾಲನ್‌

ಸಮಾನ ವೇತನ ಕಾನೂನು ಮಾಡಿ ಅಂದರೆ ಮೊಟ್ಟೆ, ಮಾಂಸ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ: ಬಾಲನ್‌

- Advertisement -
- Advertisement -

ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಮಾಡಿ ಅಂದರೆ ಮೊಟ್ಟೆ ತಿನ್ನಬೇಡಿ, ಮಾಂಸ ತಿನ್ನಬೇಡಿ, ದನ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ ಎಂದು ಹೈಕೋರ್ಟ್ ವಕೀಲರಾದ ಬಾಲನ್‌ ಹೇಳಿದರು.

ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ (ಎಂಎಎಸ್‌ಎ) ಅಡಿಯಲ್ಲಿ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ), ಕರ್ನಾಟಕ ಶ್ರಮಿಕ ಶಕ್ತಿ (ಕೆಎಸ್‌ಎಸ್‌), ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರ ಸಂಘ, ಬೆಂಗಳೂರು ರೇಸ್‌ ಕೋರ್ಸ್ ಕಾರ್ಮಿಕರ ಸಂಘ, ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಲೋಡಿಂಗ್‌ ಅಂಡ್‌ ಅನ್ ಲೋಡಿಂಗ್‌ ಕಾರ್ಮಿಕರ ಒಕ್ಕೂಟ, ವಲಸೆ ಕಾರ್ಮಿಕರ ಸೌಹಾರ್ದ ಕೇಂದ್ರ (ಎಂಡಬ್ಲೂಎಸ್‌ಎನ್‌), ಮಂಡ್ಯ ರೈಲ್ವೆ ಗೂಡ್ಸ್‌ ಶೆಡ್ ಕಾರ್ಮಿಕರ ಸಂಘ, ಕೆಎಸ್‌‌ಬಿಸಿಎಲ್‌ ಲೋಡಿಂಗ್ ಕಾರ್ಮಿಕರ ಸಂಘ, ಕೂಲಿ ನೇಕಾರ ಕಾರ್ಮಿಕರ ಬಳಗ ಒಂದುಗೂಡಿ ಬೆಂಗಳೂರಿನಲ್ಲಿ ಭಾನುವಾರ ನಡೆಸಿದ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ನೀವು ಕಾನೂನು ಮಾಡ್ರಯ್ಯ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಮಾಡಿ. ಕೆಲಸದಿಂದ ತೆಗೆಯಬಾರದೆಂದು ಕಾನೂನು ಮಾಡಿ. ಅದನ್ನು ಬಿಟ್ಟು ಮೊಟ್ಟೆ ತಿನ್ನಬಾರದೆಂದು, ಮಟನ್‌ ತಿನ್ನಬಾರದೆಂದು, ದನದ ಮಾಂಸ ತಿನ್ನಬಾರದೆಂದು, ನೀರು ಕುಡಿಯಬಾರದೆಂದು ಕಾನೂನು ಮಾಡುತ್ತಿದ್ದಾರೆ. ಎಂಥ ಕಾನೂನು ಮಾಡ್ತಾ ಇದ್ದಿರಯ್ಯ ಬೊಮ್ಮಾಯಿ? ನೀವು ಈ ರೀತಿ ಕೆಲಸ ಮಾಡಿದರೆ- ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಆಪ್‌ ನಹೀ ನಹೀ” ಎಂದು ಎಚ್ಚರಿಸಿದರು.

“ನಮ್ಮ ಕೆಲಸದ ಹಕ್ಕುಗಳು ಇರುವ ಕಾನೂನನ್ನು, ನಮ್ಮ ಸಂಬಳದ ಹಕ್ಕಿನ ಕಾನೂನುಗಳನ್ನು, ನಮ್ಮ ಸಾಮಾಜಿಕ ಹಕ್ಕುಗಳಾದ ಪಿಎಫ್‌, ಗ್ರಾಚ್ಯುಟಿ, ರಜೆ ಇತ್ಯಾದಿಗಳನ್ನು ನೀಡಿದ ಕಾನೂನುಗಳನ್ನು ಕಿತ್ತುಕೊಂಡಿದ್ದಾರೆ. ನೌಕರರಾಗಬೇಕಿದ್ದವರನ್ನು ಕೂಲಿಗಳನ್ನಾಗಿ ಮಾಡಿದ್ದಾರೆ. ಒಂದೇ ಕೆಲಸ, ಒಂದೇ ಪೊರಕೆ. ಆದರೆ ಗುತ್ತಿಗೆಯವರಿಗೆ ಹಾಗೂ ಕಾಯಂ ನೌಕರರಿಗೆ ಬೇರೆ ಬೇರೆ ಸಂಬಳ ನೀಡುತ್ತಿದ್ದಾರೆ” ಎಂದು ವಿವರಿಸಿದರು.

ಕ್ಯಾಂಟೀನ್‌ ನಮ್ಮ ಹಕ್ಕು. ಮಧ್ಯಾಹ್ನ ಊಟ ಕೊಡಬೇಕು. ಒಂದು ಕಾಲದಲ್ಲಿ ಇದೆಲ್ಲ ಇತ್ತು. 1996ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ರೈಲ್ವೆ, ಬಿಬಿಎಂಪಿ, ಆಸ್ಪತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಗುತ್ತಿಗೆ ಪದ್ಧತಿ ಇರಬಾರದೆಂದು ಹೇಳಿತ್ತು. ಆದರೆ 2001ನೇ ಇಸವಿಯಲ್ಲಿ ವಾಜಪೇಯಿ ಆ ಕಾನೂನನ್ನು ಕಿತ್ತು ಹಾಕಿ, ನಿಮ್ಮ ಬಾಯಿಗೆ ಮಣ್ಣು ಹಾಕಿದರು. 2002ರಲ್ಲಿ ಸುಪ್ರೀಂ ಕೋರ್ಟ್, ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಗುತ್ತಿಗೆ ಪದ್ಧತಿಯ ಪರವಾಗಿ ತೀರ್ಪು ನೀಡಿತು. ನಾನು ಸುಪ್ರಿಂ ಕೋರ್ಟ್‌‌ಗೆ ದಿಕ್ಕಾರ ಹೇಳುತ್ತೇನೆ. ನಿಮ್ಮ ಬಾಯಿಗೆ ಸುಪ್ರಿಂಕೋರ್ಟ್ ಮಣ್ಣು ಹಾಕಿದೆ. ನೀವು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಬಿಜೆಪಿ ಮತ್ತು ಸುಪ್ರೀಂ ಕೋರ್ಟ್ ಕಾರಣ ಎಂದು ಆರೋಪಿಸಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷರಾದ ಆರ್‌‌.ಮಾನಸಯ್ಯ, “ದೆಹಲಿ ಗಡಿಯಲ್ಲಿ ರೈತರು ಪಟ್ಟು ಹಿಡಿದು ಕುಳಿತು ಮೋದಿ ಸರ್ಕಾರವನ್ನು ಸೋಲಿಸಿದಂತೆ ಎಲ್ಲಾ ಕಾರ್ಮಿಕರ ಸಂಟನೆಗಳನ್ನು ಒಂದು ವೇದಿಕೆಯಲ್ಲಿ ತಂದು ಅದೇ ಮಾದರಿ ಹೋರಾಟಕ್ಕೆ ಕಾರ್ಮಿಕರು ಹೋಗಬೇಕಾಗಿದೆ. ಕಾರ್ಮಿಕರ ನಡುವೆ ಐಡೆಂಟಿಟಿ ಪೊಲಿಟಿಕ್ಸ್‌ ಬಿತ್ತುತ್ತಿದ್ದಾರೆ. ನೀವು ಪೌರ ಕಾರ್ಮಿಕರು, ಹಾಗಾಗಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಕ್ಕರೆ ಕಾರ್ಮಿಕರು ಉಕ್ಕಿನ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸರ್ಕಾರಿ ನೌಕರರು ಸ್ಟೀಲ್ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಾರಿಗೆ ಕಾರ್ಮಿಕರು, ಅಂಗನವಾಡಿ ಕಾರ್ಮಿಕರ ಜೊತೆ ಹೋಗಬಾರದು ಅಂತಾರೆ. ಈ ರೀತಿಯಲ್ಲಿ ನಮ್ಮ ನಡುವೆ ಅಸ್ಮಿತೆಯ ರಾಜಕಾರಣವನ್ನು ಹರಡುವ ಮೂಲಕ ಕಾರ್ಮಿಕರನ್ನು ತುಂಡರಿಸಿದ್ದಾರೆ. ಕಾರ್ಮಿಕರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆ” ಎಂದು ತಿಳಿಸಿದರು.

ಕಾರ್ಮಿಕರಿಗೆ ಕನಿಷ್ಠ 25,000 ರೂ. ಮಾಸಿಕ ವೇತನ ಕಡ್ಡಾಯ ಮಾಡಲೇಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲೇಬೇಕು. ಇಲ್ಲವಾದರೆ ನಮ್ಮ ಕೈಯಲ್ಲಿರುವ ಪೊರಕೆ, ಗುದ್ದಲಿ, ಸುತ್ತಿಗೆಗಳು ಮಾತನಾಡುತ್ತವೆ. ಕಾರ್ಮಿಕರೆಂದರೆ ಕನಿಷ್ಠರಲ್ಲ. ಈ ದೇಶದ ಕಟ್ಟಾಳುಗಳು ಎಂದು ಬಣ್ಣಿಸಿದರು.

ದೇಶ ಕಟ್ಟೋರು ಕಾರ್ಮಿಕರೇ ಹೊರತು ಎಸ್‌ಎಸ್‌ಎಸ್‌, ಬಜರಂಗದಳ, ವಿಎಚ್‌ಪಿಗಳಲ್ಲ, ಇನ್ಯಾವುದೇ ಸ್ವಾಮೀಜಿಗಳಲ್ಲ. ಘಂಟೆ ಭಾರಿಸಿದರೆ ದೇಶ ನಡೆಯುವುದಿಲ್ಲ, ಮಂತ್ರ ಹೇಳಿದರೆ ದೇಶ ನಡೆಯುವುದಿಲ್ಲ. ಹೀಗಾಗಿ ಮಂತ್ರ ಹೇಳುವ ತುಟಿಗಳಿಗಿಂತ ಮಣ್ಣು ಅಗೆಯುವ ಕೈಗಳನ್ನು ಪ್ರೀತಿಸಿ ಎಂದು ಮಾರ್ಮಿಕವಾಗಿ ನುಡಿದರು.

ಕೇಂದ್ರೀಯ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಕಾರ್ಮಿಕರು ಬೃಹತ್‌ ಮೆರವಣಿಗೆ ನಡೆಸಿದರು. ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನೂರ್‌ ಶ್ರೀಧರ್‌, “ರೈತ ಮತ್ತು ಕಾರ್ಮಿಕ ಎಂಬ ಎರಡು ಹೆಜ್ಜೇನು ಗೂಡಿಗೆ ಇವರು ಕಲ್ಲು ಹೊಡೆದಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಇವರ ವಿನಾಶಕ್ಕೆ ಇದು ನಾಂದಿಯಾಗಲಿದೆ. ಎದ್ದೇಳುವ ಹೆಜ್ಜೇನುಗಳು ಸುಮ್ಮನೆ ಬಿಡುವುದಿಲ್ಲ. ಹೀಗಾಗಲೇ ರೈತ ಜೇನುಗೂಡಿಗೆ ಕಲ್ಲು ಹೊಡೆದು ಕಚ್ಚಿಸಿಕೊಂಡು, ಮೈಯೆಲ್ಲ ಕೆರೆದುಕೊಂಡು ಒಂದು ವರ್ಷದ ಬಳಿಕ ಮೂರು ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. ರೈತರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ನಾಟಕವನ್ನಾದರೂ ಆಡುವ ಪರಿಸ್ಥಿತಿಗೆ ಬಂದಿದ್ದಾರೆ” ಎಂದರು.


ಇದನ್ನೂ ಓದಿರಿ: ಹನುಮ ಜಯಂತಿ: ಕೆ.ಆರ್‌.ಪೇಟೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ; 27 ಮಂದಿ ಸವರ್ಣೀಯರ ಮೇಲೆ ಎಫ್‌ಐಆರ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...