ದೇಶದ ಇತರ ಮುಖ್ಯ ಭಾಗಗಳು ಮೊಘಲರಿಂದ ಆಳುತ್ತಿದ್ದಾಗ ಗೋವಾ ಪೋರ್ಚುಗಲ್ ಆಳ್ವಿಕೆಗೆ ಒಳಪಟ್ಟಿತು. ಆದರೆ ಶತಮಾನಗಳ ನಂತರವೂ ಗೋವಾ ತನ್ನ ಭಾರತೀಯತೆಯನ್ನು ಮರೆತಿಲ್ಲ, ಭಾರತ ತನ್ನ ಗೋವವನ್ನು ಮರೆತಿಲ್ಲ ಪ್ರಧಾನಿ ನರೇಂದ್ರ ಮೋದಿ ಗೋವಾದಲ್ಲಿ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಗೋವಾದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳು ಚಟುವಟಿಕೆಗಳನ್ನು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಗೋವಾ ವಿಮೋಚನೆ ದಿನದ ಅಂಗವಾಗಿ ಗೋವಾದಲ್ಲಿ ಹಲವು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿ ಪ್ರಧಾನಿ ಮೋದಿಯವರು ಮಾತನಾಡಿದ್ದಾರೆ.
ಫ್ಯಾಕ್ಟ್‌ಚೆಕ್:
ಗೋವಾವನ್ನು ಪೋರ್ಚುಗೀಸರು ಕ್ರಿ.ಶ 1510 ರಲ್ಲಿ ವಶಪಡಿಸಿಕೊಂಡರು. ಗೋವಾ ಯುದ್ದದಲ್ಲಿ ಅಫೊನ್ಸೊ ಡಿ ಅಲ್ಬುಕರ್ಕ್ ಎಂಬ ಪೋರ್ಚುಗಲ್ ದಂಡನಾಯಕ ಬಿಜಾಪುರ ಸುಲ್ತಾನ ಇಸ್ಮಾಯಿಲ್ ಆದಿಲ್ ಶಾರನ್ನು ಸೋಲಿಸಿ ಗೋವಾದಲ್ಲಿ ತಮ್ಮ ಆಳ್ವಿಕೆ ಆರಂಭಿಸಿದರು. ಈ ಕುರಿತ ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಇಲ್ಲಿ ಮತ್ತು ಇಲ್ಲಿ ಓದಿರಿ.

1526ರಲ್ಲಿ ಅಂದರೆ ಗೋವಾದಲ್ಲಿ ಪೋರ್ಚುಗೀಸರ ಆಡಳಿತ ಅರಂಭವಾಗಿ 16 ವರ್ಷಗಳ ಬಳಿಕ ಬಾಬರ್ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಇಲ್ಲಿ ಓದಿರಿ.

ಹಾಗಾಗಿ ದೇಶದ ಇತರ ಭಾಗಗಳು ಮೊಘಲರಿಂದ ಆಳುತ್ತಿದ್ದಾಗ ಗೋವಾ ಪೋರ್ಚುಗಲ್ ಆಳ್ವಿಕೆಗೆ ಒಳಪಟ್ಟಿತು ಎಂಬ ಮೋದಿ ಹೇಳಿಕೆ ಸುಳ್ಳಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮೋದಿ ಪ್ರಭಾವದಿಂದ ದಲ್ವೀರ್ ಭಂಡಾರಿ ಅಂತಾರಾಷ್ಟ್ರೀಯ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದು ನಿಜವೇ?


