ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ “ದಲ್ವೀರ್ ಭಂಡಾರಿ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ(ICJ) ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ” ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಅವರ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವೇ ಕಾರಣವಾಗಿದ್ದು, ಭಾರತವನ್ನು ಇದೀಗ ವಿಶ್ವ ಗುರುತಿಸುತ್ತಿದೆ ಎಂಬ ರೀತಿಯಲ್ಲಿ ಈ ಸಂದೇಶ ಹರಿದಾಡುತ್ತಿದೆ.
ಫೇಸ್‌ಬುಕ್, ವಾಟ್ಸಪ್ ಮತ್ತು ಟ್ವಿಟರ್‌ನಲ್ಲಿ ಈ ಸಂದೇಶ ಹರಿದಾಡುತ್ತಿದೆ. ಬಿಜೆಪಿ ಬಿಹಾರದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ನಾಗೇಂದ್ರ ನಾಥ್ ತ್ರಿಪಾಠಿ, “ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಅಂತರರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಕಠಿಣ ಪರಿಶ್ರಮವು ವಿಶ್ವದಾದ್ಯಂತದ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆದಿದೆ” ಎಂದು ಅವರು ಪ್ರತಿಪಾದಿಸಿದ್ದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಯುಪಿಯಲ್ಲಿ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬುದು ಸುಳ್ಳು
ತ್ರಿಪಾಠಿ ಅವರು ತಮ್ಮ ಫೇಸ್‌ಬುಕ್ ಫೇಜ್‌ನಿಂದಲೂ ಹೇಳಿಕೆಯನ್ನು ನೀಡಿದ್ದರು. ಇದನ್ನು ಬಿಹಾರ ಬಿಜೆಪಿ ಹಂಚಿಕೊಂಡಿತ್ತು.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಹೈಕೋರ್ಟ್ ಮೀಸಲಾತಿ ರದ್ದುಗೊಳಿಸಿದೆ ಎಂಬುದು ಸುಳ್ಳು
ಇದರ ಹೊರತಾಗಿ, ಬಿಜೆಪಿ ಪರವಾದ ಹಲವಾರು ಫೇಸ್‌ಬುಕ್ ಖಾತೆಗಳು ಈ ಸಂದೇಶವನ್ನು ಕಳೆದ ಒಂದು ದಿನದಿಂದ ಹಂಚಿಕೊಳ್ಳುತ್ತಿವೆ. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಜೊತೆಗೆ ವಾಟ್ಸಪ್‌ನಲ್ಲಿಯೂ ಈ ಸಂದೇಶ ವ್ಯಾಪಕವಾಗಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್
ನ್ಯಾಯಮೂರ್ತಿ ದಲ್ವೀರ್ ಸಿಂಗ್ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವ ಯಾವುದೆ ಸುದ್ದಿ ಲಭ್ಯವಿಲ್ಲ. ಈ ರೀತಿ ನಡೆದಿದ್ದರೆ, ವಿಶ್ವದ ಪ್ರಮುಖ ಸುದ್ದಿ ಮಾಧ್ಯಮಗಳು ಅದನ್ನು ವರದಿ ಮಾಡುತ್ತಿದ್ದವು. ಆದರೆ ವಾಸ್ತವದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯೆ ಇಲ್ಲ!.
ದಲ್ವೀರ್ ಸಿಂಗ್ ಬಗ್ಗೆ ಹುಡುಕಾಡಿದಾಗ 2017 ರ ಕೆಲವು ವರದಿಗಳು, ಅವರು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಮರು ಆಯ್ಕೆಯಾದರು ಎಂದು ಹೇಳಿದೆ.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಪೊಲೀಸರು ಮಸೀದಿ ಸ್ವಚ್ಛಗೊಳಿಸುತ್ತಿರುವುದು ನಿಜವೇ?
ನಂತರ ಅವರು ನವೆಂಬರ್ 22, 2017 ರಂದು ಚುನಾವಣೆ ನಡೆದು ಎರಡನೇ ಬಾರಿಗೆ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಅವರ ಪ್ರತಿಸ್ಪರ್ಧಿ ಇಂಗ್ಲೇಂಡಿನ ಕ್ರಿಸ್ಟೋಫರ್ ಗ್ರೀನ್‌ವುಡ್ ತನ್ನ ನಾಮಪತ್ರವನ್ನು ವಾಪಾಸು ಪಡೆದುಕೊಂಡಿದ್ದರು. ಹಾಗಾಗಿ ಅವರು ಮರು ಆಯ್ಕೆಯಾದರು.
ಅಂತರಾಷ್ಟ್ರೀಯ ನ್ಯಾಯಾಲಯದ ವೆಬ್‌ಸೈಟ್ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಹುದ್ದೆಯೇ ಇಲ್ಲ. ನ್ಯಾಯಾಲಯವು 15 ಸದಸ್ಯ ನ್ಯಾಯಾಧೀಶರನ್ನು ಹೊಂದಿದ್ದು, ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಲಾ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ‘ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆ ಮಾಡುತ್ತಿದ್ದಾರೆ’ ಎಂಬುವುದು ನಿಜವೇ?
ಅಷ್ಟೇ ಅಲ್ಲದೆ, ICJ ವೆಬ್‌ಸೈಟ್‌ನ ಪ್ರಕಾರ, 2021 ರ ಫೆಬ್ರವರಿ 8 ರಂದು ಅಮೆರಿಕದ ಜೋನ್ ಇ. ಡೊನೊಗ್ ಮತ್ತು ರಷ್ಯಾದ ಕಿರಿಲ್ ಗೆವೊರ್ಜಿಯನ್ ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಐಸಿಜೆಯಲ್ಲಿ ದಲ್ವೀರ್ ಭಂಡಾರಿ ಅವರ ಹುದ್ದೆ
ಏಪ್ರಿಲ್ 27, 2012 ರಂದು, ದಲ್ವೀರ್ ಭಂಡಾರಿ ಅವರು ICJ ನ 15 ಸದಸ್ಯರ ನ್ಯಾಯಾಧೀಶರಲ್ಲಿ ಒಬ್ಬರಾಗಿ ಆಯ್ಕೆಯಾದರು ಮತ್ತು ಮರುಆಯ್ಕೆಯಾಗಿ ಇಂದಿಗೂ ಮುಂದುವರಿದಿದ್ದಾರೆ.
ಒಟ್ಟಿನಲ್ಲಿ ಮೋದಿ ಸರ್ಕಾರಕ್ಕೂ, ನ್ಯಾಯಮೂರ್ತಿ ದಲ್ವಿರ್ ಭಂಡಾರಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಆಯ್ಕೆಯಾಗುವುದಕ್ಕೂ ಸಂಭಂಧವೇ ಇಲ್ಲ. ಅವರು ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನವೇ ಈ ಸಾಧನೆ ನಡೆದಿರುವುದು ದೃಢಪಟ್ಟಿದೆ.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಮಂಗಳೂರಿನಲ್ಲಿ ಮತ್ಸ್ಯಕನ್ಯೆ ಸಿಕ್ಕಿದೆ ಎಂಬುದು ನಿಜವಲ್ಲ


