Homeದಿಟನಾಗರಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆ ಎಂಬುದು ಸುಳ್ಳು

ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆ ಎಂಬುದು ಸುಳ್ಳು

- Advertisement -
- Advertisement -

ಗುಜರಾತ್‌ನಲ್ಲಿ ಹೈಕೋರ್ಟ್ ಸಂಪೂರ್ಣ ಮೀಸಲಾತಿ ರದ್ದುಗೊಳಿಸಿದೆ ಎಂಬ ಒಂದು ಪೋಸ್ಟ್‌ ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ವೈರಲ್ ಪೋಸ್ಟ್‌ನಲ್ಲಿ, “ಗುಜರಾತ್‌ ಹೈಕೋರ್ಟ್‌ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಮೀಸಲಾತಿ ರದ್ದುಗೊಳಿಸಿದ ದೇಶದ ಮೊದಲ ರಾಜ್ಯ ಗುಜರಾತ್‌ ಆಗಿದೆ. ಅಲ್ಲಿ, ಸರ್ಕಾರಿ ಉದ್ಯೋಗವಾಗಲಿ ಅಥವಾ ಖಾಸಗಿ ಉದ್ಯೋಗವಾಗಿ ಇನ್ನು ಮುಂದೆ ಮೀಸಲಾತಿ ಇರುವುದಿಲ್ಲ” ಎಂದು ಹೇಳಿಕೊಳ್ಳಲಾಗಿದೆ. 

ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಮುಂದಿನ 25 ವರ್ಷಗಳಲ್ಲಿ, ಮೀಸಲಾತಿಯು ಶಿಕ್ಷಣ, ಉದ್ಯೋಗಗಳು, ಪ್ರಯಾಣ, ಹೋಟೆಲ್ ಬುಕಿಂಗ್ ಇತ್ಯಾದಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೆ, ವೈರಲ್ ಪೋಸ್ಟ್ ಜೊತೆಗೆ ಟೈಮ್ಸ್ ಆಫ್ ಇಂಡಿಯಾ ಲೇಖನದ ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗಿದೆ. ಈ ಸಂದೇಶವು 2020ರಲ್ಲೂ ವೈರಲ್ ಆಗಿತ್ತು. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. 

ಈ ವೈರಲ್ ಪೋಸ್ಟ್‌ನ ಕೀವರ್ಡ್‌ಗಳನ್ನು ಬಳಿಸಿಕೊಂಡು ಗೂಗಲ್‌ನಲ್ಲಿ ಹುಡುಕಿದಾಗ, ಇದಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಕಂಡುಬಂದಿಲ್ಲ. ಗುಜರಾತ್ ಹೈಕೋರ್ಟ್ ರಾಜ್ಯದಲ್ಲಿ ಮೀಸಲಾತಿಯನ್ನು ರದ್ದುಪಡಿಸಲು ನಿರ್ಧರಿಸಿದ್ದರೆ, ಅದು ರಾಷ್ಟ್ರೀಯ ವಿಷಯವಾಗುತ್ತಿತ್ತು ಮತ್ತು ಎಲ್ಲಾ ಮಾಧ್ಯಮ ಸಂಸ್ಥೆಗಳು ಅದನ್ನು ವರದಿ ಮಾಡುತ್ತಿದ್ದವು. ಆದರೆ ಈ ವೈರಲ್ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ಅಧಿಕೃತ ವರದಿಯು ನಮಗೆ ದೊರೆತಿಲ್ಲ.

ಹೆಚ್ಚಿನ ತನಿಖೆಗಾಗಿ, ಗುಜರಾತ್ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದಾಗಲೂ, ವೈರಲ್ ಕ್ಲೈಮ್ ಅನ್ನು ಮೌಲ್ಯೀಕರಿಸುವ ಯಾವುದೇ ಪುರಾವೆಗಳು ಅಲ್ಲಿ ದೊರೆತಿಲ್ಲ. ಆದರೆ, ಗುಜರಾತ್ ಹೈಕೋರ್ಟ್ ವೆಬ್‌ಸೈಟ್‌ನ ನೇಮಕಾತಿ ವಿಭಾಗದ ಪ್ರಸ್ತುತ ಆರಂಭಿಕ ವಿಭಾಗದಲ್ಲಿ ಇಂಗ್ಲಿಷ್ ಸ್ಟೆನೋಗ್ರಾಫರ್ ಗ್ರೇಡ್ II ರ 09 ಖಾಲಿ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ್ದ ಜಾಹೀರಾತು ದೊರೆತಿದೆ. ಹೈಕೋರ್ಟ್‌ನ ಈ ನೇಮಕಾತಿ ಜಾಹೀರಾತಿನಲ್ಲಿ 09 ಹುದ್ದೆಗಳನ್ನು ವಿವಿಧ ಮೀಸಲಾತಿ ವರ್ಗಗಳ ಪ್ರಕಾರ ವಿಂಗಡಿಸಲ್ಪಟ್ಟಿದೆ. ಇದರಿಂದ ಅಲ್ಲಿನ ನ್ಯಾಯಾಲಯವು ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸುತ್ತಿರುವುದು ಸ್ಪಷ್ಟವಾಗಿದೆ.

Image Credit: High Court of Gujarat

ವೈರಲ್ ಆಗುತ್ತಿರುವ ಪೋಸ್ಟ್‌ನ ವಿವರಣೆಯಲ್ಲಿ ಟೈಮ್ಸ್ ಆಫ್ ಇಂಡಿಯಾದ ಲಿಂಕ್ ಅನ್ನು ಸಹ ಹೊಂದಿದೆ. ಆ ಲೇಖನವು 11 ಸೆಪ್ಟೆಂಬರ್ 2015 ರದ್ದಾಗಿದೆ. ಸುಮಾರು 6 ವರ್ಷಗಳಷ್ಟು ಹಳೆಯದಾದ ಈ ಲೇಖನವು ಗುಜರಾತ್ ಹೈಕೋರ್ಟ್‌ನ ಆದೇಶವನ್ನು ವರದಿ ಮಾಡಿದೆ. ಅದರಲ್ಲಿ, ಅಭ್ಯರ್ಥಿಯ ಅರ್ಹತೆಯ ಗರಿಷ್ಟ ವಯಸ್ಸು ಸಾಮಾನ್ಯ ವರ್ಗದ ಕಟ್-ಆಫ್‌ಗಿನ್ನ ಹೆಚ್ಚಿದ್ದಾಗ ಅವರನ್ನು ಅರ್ಹ ಮೀಸಲು ವರ್ಗದ ಅಭ್ಯರ್ಥಿಗಳು (MRC) ಎಂದು ಪರಿಗಣಿಸಬೇಕು. ಅವರು ಸಾಮಾನ್ಯ ವರ್ಗದ ಕಟ್-ಆಫ್‌ಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೂ, ಅವರನ್ನು ಸಾಮಾನ್ಯ ವರ್ಗದಲ್ಲಿ ಇರಿಸಲಾಗುವುದಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಈ ಲೇಖನದಲ್ಲಿಯೂ ಗುಜರಾತ್ ಹೈಕೋರ್ಟ್ ರಾಜ್ಯದಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂದು ಸುಳಿವು ನೀಡುವ ಯಾವ ಅಂಶವೂ ಕಂಡುಬಂದಿಲ್ಲ.

ಲೇಖನದ ಮುಖ್ಯಾಂಶವು, “ಕೋಟಾ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆಯನ್ನು ಪಡೆದ್ದಾಗ, ಅವರನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಹೀಗಾಗಿ, ಗುಜರಾತ್‌ ಹೈಕೋರ್ಟ್‌ ಗುಜರಾತ್‌ನಲ್ಲಿ ಮೀಸಲಾತಿಯನ್ನು ರದ್ದುಪಡಿಸಿದೆ ಎಂದು ತಪ್ಪಾಗಿ ಹೇಳಿಕೊಂಡು ವೈರಲ್‌ ಆಗುತ್ತಿರುವ ಪೋಸ್ಟ್‌ ಸುಳ್ಳಾಗಿದ್ದು, ಜನರನ್ನು ದಾರಿ ತಪ್ಪಿಸುವುದರ ಜೊತೆಗೆ, ಮೀಸಲಾತಿಯ ವಿರುದ್ದ ಪ್ರಚೋದನೆಯನ್ನು ನೀಡುತ್ತಿದೆ. 

ಮೀಸಲಾತಿ ಕುರಿತು ಒಂದಿಷ್ಟು

ಮೀಸಲಾತಿ ಎಂಬುದು ಬಡತನ ನಿವಾರಣ ಕಾರ್ಯಕ್ರಮವಲ್ಲ. ಸಮಾನತೆ ಹಾಗೂ ಪರಿವರ್ತನೆ ತರುವ ಕಾರ್ಯಕ್ರಮವೂ ಅಲ್ಲ. ಬದಲಿಗೆ ಇರುವ ವ್ಯವಸ್ಥೆಯಲ್ಲೇ ಪ್ರಾತಿನಿಧ್ಯವನ್ನು ಖಾತರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವ ಕಾರ್ಯಕ್ರಮವಾಗಿದೆ. ಅದು ಸಾಮಾಜಿಕ ಸಮಾನತೆಯ ತಳಹದಿಯಲ್ಲಿರಬೇಕೆ ಹೊರತು ಆರ್ಥಿಕ ತಳಹದಿಯಲ್ಲಿ ಅಲ್ಲ ಎಂಬ ಚರ್ಚೆ ಹಿಂದಿನಿಂದಲೂ ಇದೆ.

ಇದನ್ನೂ ಓದಿ: EWS ಎಂಬ ಕಣ್ಕಟ್ಟಿನ ಮೀಸಲಾತಿ; ಸುಪ್ರೀಂಕೋರ್ಟ್‌ನಲ್ಲಾದರೂ ನ್ಯಾಯ ದೊರಕುವುದೇ?


ಇದನ್ನೂ ಓದಿ: Fact Check: ಬಿಪಿನ್ ರಾವತ್‌ರವರ ಹೆಲಿಕಾಪ್ಟರ್ ಪತನ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮತದಾರರ ಪಟ್ಟಿಯಿಂದ 5.41 ಲಕ್ಷ ಮತದಾರರನ್ನು ಕೈ ಬಿಟ್ಟ ಚುನಾವಣಾ ಆಯೋಗ; ವರದಿ

0
ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತೆಲಂಗಾಣದ ಹೈದರಾಬಾದ್ ಜಿಲ್ಲೆಯ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023ರ ಜನವರಿಯಿಂದೀಚೆಗೆ...