HomeದಿಟನಾಗರFact Check: ಬಿಪಿನ್ ರಾವತ್‌ರವರ ಹೆಲಿಕಾಪ್ಟರ್ ಪತನ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

Fact Check: ಬಿಪಿನ್ ರಾವತ್‌ರವರ ಹೆಲಿಕಾಪ್ಟರ್ ಪತನ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

- Advertisement -
- Advertisement -

ಡಿಸೆಂಬರ್ 08 ರಂದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ರವರಿದ್ದ IAFನ Mi-17 V5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರ್‌ನಲ್ಲಿ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಬಿಪಿನ್‌ ರಾವತ್, ಅವರ ಪತ್ನಿ ಸೇರಿ ಒಟ್ಟು 13 ಜನ ಮೃತಪಟ್ಟಿದ್ದಾರೆ. ಈ ಕುರಿತು ತನಿಖೆಗೆ ವಾಯುಸೇನೆ ಆದೇಶಿಸಿದೆ.

ಇಂತಹ ಸಂದರ್ಭದಲ್ಲಿ ದೇಶ-ವಿದೇಶದಾದ್ಯಂತ ಸಂತಾಪ ಸೂಚಿಸಲಾಗುತ್ತಿದೆ. ಅದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತ ಸಂಭವಿಸಿದ ಲೈವ್ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋಗಳು ಸಹ ಹರಿದಾಡುತ್ತಿವೆ.

ಟ್ವಿಟ್ಟರ್ ಬಳಕೆದಾರರಾದ Sir Don Bradman ಆಕಾಶದಲ್ಲಿ ಹೆಲಿಕಾಪ್ಟರ್ ಒಂದಕ್ಕೆ ಬೆಂಕಿ ಹೊತ್ತಿಕೊಂಡಿರುವ ವೀಡಿಯೊವನ್ನು ಪೋಸ್ಟ್ ಮಾಡಿ “ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಪತನಗೊಂಡಿದೆ” ಎಂದು ಬರೆದಿದ್ದಾರೆ. ಈ ವಿಡಿಯೋವನ್ನು ಸುಮಾರು 2 ಲಕ್ಷ ಜನರು ವೀಕ್ಷಿಸಿದ್ದಾರೆ. ಟ್ವಿಟರ್ ಬಳಕೆದಾರರು @MarwadiClub ಸಹ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿಯೂ ವಿಡಿಯೋ ಹರಿದಾಡಿದೆ.

ಫ್ಯಾಕ್ಟ್‌ಚೆಕ್

ಸೂಲೂರು ವಾಯುನೆಲೆಯಿಂದ ಟೇಕಾಫ್ ಆದ ಐಎಎಫ್ ಹೆಲಿಕಾಪ್ಟರ್ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳುತ್ತಿರುವಾಗ ಪತನಗೊಂಡು ನೆಲಕ್ಕೆ ಅಪ್ಪಳಿಸಿದ ನಂತರ ಬೆಂಕಿಗೆ ಆಹುತಿಯಾಗಿದೆ ಎಂದು ದಿ ಹಿಂದೂ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಮೇಲಿನ ವಿಡಿಯೋದಲ್ಲಿ ಹೆಲಿಕಾಪ್ಟರ್ ಆಕಾಶದಲ್ಲಿರುವಾಗಲೇ ಬೆಂಕಿ ಹೊತ್ತಿಕೊಂಡಿರುವುದರಿಂದ ಈ ಘಟನೆಗೆ ಸಂಬಂಧಿಸಿಲ್ಲ ಎಂದು ತಿಳಿಯಬಹುದು.

ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಮೂಲಕ ಹುಡುಕಿದಾಗ ಈ ವೀಡಿಯೊವು ಫೆಬ್ರವರಿ 2020 ರ ಹಿಂದಿನದು ಎಂದು ತಿಳಿದುಬಂದಿದೆ. ಇದನ್ನು ಅಥೆನ್ಸ್ ಮೂಲದ ಪತ್ರಕರ್ತ ಬಾಬಕ್ ತಘ್ವೇ ಪೋಸ್ಟ್ ಮಾಡಿದ್ದಾರೆ. ಅವರ ಟ್ವೀಟ್‌ನ ಪ್ರಕಾರ, ಸಿರಿಯಾದ ಅರಬ್ ಏರ್ ಫೋರ್ಸ್‌ನ Mi-17 ಅನ್ನು ಟರ್ಕಿಶ್ ಸೇನೆಯು ಸಿರಿಯಾದ ಅಲ್-ನೈರಾಬ್ ಬಳಿ ಹೊಡೆದುರುಳಿಸಿದೆ ಎಂದು ವಿವರಿಸಲಾಗಿದೆ.

ಹಾಗಾಗಿ ಈ ವಿಡಿಯೋ ಇತ್ತೀಚಿನದ್ದಲ್ಲ ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಮಾಧ್ಯಮ ಸಂಸ್ಥೆ ಎನ್‌ಡಿಟಿವಿ ಬಿಪಿನ್ ರಾವತ್‌ರವರಿದ್ದ ಹೆಲಿಕಾಪ್ಟರ್ ಪತನಕ್ಕೂ ಮುಂಚೆ ಹಾರುವುದರ ಸಣ್ಣ ಅಧಿಕೃತ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿವೆ. ಅದನ್ನು ಇಲ್ಲಿ ನೋಡಬಹುದು.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಶ್ರೀಮಂತೆ ಎಂಬುದು ಸುಳ್ಳು ಸುದ್ದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...