Homeಅಂತರಾಷ್ಟ್ರೀಯಬಲಪಂಥೀಯ ಪ್ರತಿಸ್ಪರ್ಧಿಯನ್ನು ಸೋಲಿಸಿ ‘ಚಿಲಿ’ ಅಧ್ಯಕ್ಷನಾಗಲಿರುವ ಎಡಪಂಥೀಯ ವಿದ್ಯಾರ್ಥಿ ನಾಯಕ!

ಬಲಪಂಥೀಯ ಪ್ರತಿಸ್ಪರ್ಧಿಯನ್ನು ಸೋಲಿಸಿ ‘ಚಿಲಿ’ ಅಧ್ಯಕ್ಷನಾಗಲಿರುವ ಎಡಪಂಥೀಯ ವಿದ್ಯಾರ್ಥಿ ನಾಯಕ!

35 ವರ್ಷದ ಗೇಬ್ರಿಯಲ್‌‌ ಬೋರಿಕ್‌ ಅವರು ದೇಶದ ಇದುವರೆಗಿನ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ

- Advertisement -
- Advertisement -

ಎಡಪಂಥೀಯ ಮಾಜಿ ವಿದ್ಯಾರ್ಥಿ ನಾಯಕ ಗೇಬ್ರಿಯಲ್ ಬೋರಿಕ್ ಅವರು ಚಿಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ವಿಜಯವನ್ನು ಸಾಧಿಸಿದ್ದು, ದೇಶದ ಇದುವರೆಗಿನ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಅವರ ವಿರುದ್ದ ಬಲಪಂಥೀಯ ಅಭ್ಯರ್ಥಿ ಜೋಸ್ ಆಂಟೋನಿಯೊ ಕಾಸ್ಟ್ ಸ್ಪರ್ಧಿಸಿದ್ದರು.

ಸುಮಾರು 97% ಮತ ಎಣಿಕೆ ನಡೆದಿದ್ದು, ಗೇಬ್ರಿಯಲ್‌‌‌‌ ಬೋರಿಕ್‌ 55.8% ರಷ್ಟು ಮತಗಳನ್ನು ಪಡೆದು, ತಮ್ಮ ಎದುರಾಳಿಗಿಮತ 12% ಮತಗಳ ಮುನ್ನಡೆ ಸಾಧಿಸಿದ್ದಾರೆ. ಅವರ ಎದುರಾಳಿ ಜೋಸ್‌ ಆಂಟೋನಿಯೊ ತಮ್ಮ ಸೋಲನ್ನು ಒಪ್ಪಿಕೊಂಡು ಗೇಬ್ರಿಯಲ್‌‌ ಬೋರಿಕ್ ಅವರನ್ನು ಅಭಿನಂಧಿಸಿದ್ದಾರೆ.

ಇದನ್ನೂ ಓದಿ:ಚಿಲಿಯಿಂದ ನಾವು ಭಾರತೀಯರು ಕಲಿಯಬೇಕಾಗಿರುವುದು ಏನು?

“ನಾವು ನಮ್ಮ ಹಕ್ಕುಗಳನ್ನು ಗ್ರಾಹಕ ಸರಕುಗಳು ಅಥವಾ ವ್ಯಾಪಾರದಂತೆ ಪರಿಗಣಿಸಬಾರದು, ಅದನ್ನು ಹಕ್ಕುಗಳಾಗಿಯೆ ಗೌರವಿಸಬೇಕು ಎಂದು ಬೇಡಿಕೆಯಿಡುತ್ತಾ ಸಾರ್ವಜನಿಕ ಜೀವನದಲ್ಲಿ ಹೊರಹೊಮ್ಮಿದ ತಲೆಮಾರಾಗಿದ್ದೇವೆ. ಚಿಲಿಯ ಅಸಮಾನತೆಗೆ ಬಡವರು ಬೆಲೆತೆರುವುದನ್ನು ಇನ್ನು ಮುಂದೆನಾವು ಅನುಮತಿಸುವುದಿಲ್ಲ” ಎಂದು ಗೇಬ್ರಿಯಲ್‌ ಬೋರಿಕ್‌ ಸ್ಯಾಂಟಿಯಾಗೊ ಬೌಲೆವಾರ್ಡ್‌ನಲ್ಲಿ ತುಂಬಿದ ಅಪಾರ ಜನಸಮೂಹದ ಮುಂದೆ ಹೇಳಿದ್ದಾರೆ.

ಗೇಬ್ರಿಯಲ್‌ ಬೋರಿಕ್

ಆಗಸ್ಟೋ ಪಿನೋಚೆಟ್ ಸರ್ವಾಧಿಕಾರದ ಅವಧಿಯಲ್ಲಿ ಹೇರಲಾದ ಮುಕ್ತ ಮಾರುಕಟ್ಟೆ ಆರ್ಥಿಕ ಮಾದರಿಯನ್ನು ಉಲ್ಲೇಖಿಸಿದ ಅವರು, ಬಡತನ ಮತ್ತು ಅಸಮಾನತೆಯ ಮೇಲೆ ದಾಳಿ ಮಾಡಿದ್ದಾರೆ. ಯುವ ನೇತೃತ್ವದ ಸರ್ಕಾರವನ್ನು ರಚಿಸುವುದಾಗಿ ಗೇಬ್ರಿಯಲ್‌ ಬೋರಿಕ್ ಪ್ರತಿಜ್ಞೆ ಮಾಡಿದ್ದಾರೆ.

ಗೇಬ್ರಿಯಲ್‌‌ ಬೋರಿಕ್‌ ಅವರ ವಿಜಯವನ್ನು ಅವರ ಬೆಂಬಲಿಗರು ಭಾನುವಾರ ರಾತ್ರಿಯಿಂದಲೇ ಆಚರಿಸುತ್ತಿದ್ದಾರೆ. “ಇದೊಂದು ಐತಿಹಾಸಿಕ ದಿನ. ನಾವು ಫ್ಯಾಸಿಸಂ ಮತ್ತು ಬಲಪಂಥೀಯರನ್ನು ಮಾತ್ರವಲ್ಲದೆ ಭಯವನ್ನೂ ಸೋಲಿಸಿದ್ದೇವೆ” ಎಂದು ಶಿಕ್ಷಕರಾಗಿರುವ ಬೋರಿಸ್ ಸೊಟೊ ಹೇಳಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ.

ಇದನ್ನೂ ಓದಿ:ಚಿಲಿ: ಭುಗಿಲೆದ್ದ ಪ್ರತಿಭಟನೆ; ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ 2 ಚರ್ಚುಗಳಿಗೆ ಬೆಂಕಿ!

ಇದೀಗ ಚಿಲಿಯ ಅಧ್ಯಕ್ಷರಾಗಲಿರುವ ಗೇಬ್ರಿಯಲ್‌ ಬೋರಿಕ್, ವಿದ್ಯಾರ್ಥಿ ಚಳವಳಿಯ ನಾಯಕರಾಗಿದ್ದು, 2011 ರ ವಿದ್ಯಾರ್ಥಿ ಚಳುವಳಿಯಲ್ಲಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಕ್ಕಿಂಲೂ ಮೊದಲು ಅವರು ದೇಶದ ಸಂಸದರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದ ಯುವ ನಾಯಕರಾಗಿದ್ದಾರೆ.

ಗೇಬ್ರಿಯಲ್‌ ಬೋರಿಕ್

35 ವರ್ಷದ ಅವರು ಮಾರ್ಚ್ 11 ರಂದು ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಹೊರಹೊಮ್ಮಲಿದ್ದಾರೆ. ಅಧ್ಯಕ್ಷರಾಗಿ ಅವರ ಅವಧಿಯು 2026 ರವರೆಗೆ ಇರುತ್ತದೆ.

2019 ರಲ್ಲಿ ಚಿಲಿಯಲ್ಲಿ ನಡೆದ ಭಾರಿ ಪ್ರತಿಭಟನೆಯಿಂದಾಗಿ ಅಲ್ಲಿನ ಸಂವಿಧಾನವನ್ನು ಪುನಃ ಬರೆಯಲಾಗುತ್ತಿದೆ.

ಇದನ್ನೂ ಓದಿ:ಪಾವ್ಲೊ ಫ್ರೆಯರೆಗೆ ನೂರು; ಮಾನವೀಕರಣ ಮತ್ತು ಪ್ರಜಾತಾಂತ್ರಿಕ ಶಿಕ್ಷಣಕ್ಕೆ ಮರುಚಿಂತನೆ ಅಗತ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...