ತೈವಾನ್‌ಗೆ ಅಮೆರಿಕ ಸಂಸತ್ತಿನ ಸ್ಪೀಕರ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿಯ ಹಿನ್ನಲೆಯಲ್ಲಿ ಚೀನಾ-ತೈವಾನ್ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ. ಈ ಮಧ್ಯೆ ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥ ಔ ಯಾಂಗ್ ಲಿ ಹಸಿಂಗ್ ಅವರು ಶನಿವಾರ ಬೆಳಿಗ್ಗೆ ದಕ್ಷಿಣ ತೈವಾನ್‌ನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು CNA ವರದಿ ಮಾಡಿದೆ. ಅಧಿಕಾರಿಗಳು ಅವರ ಸಾವಿನ ಕಾರಣವನ್ನು ಹುಡುಕುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಔ ಯಾಂಗ್ ಅವರು ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆಗಾಗಿ ಈ ವರ್ಷದ ಆರಂಭದಲ್ಲಿ ಮಿಲಿಟರಿ ಒಡೆತನದ ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥರಾಗಿ ತಮ್ಮ ಹುದ್ದೆಯನ್ನು ವಹಿಸಿಕೊಂಡಿದ್ದರು. ಪ್ರಸ್ತುತ ಅವರು ವ್ಯಾಪಾರದ ಉದ್ದೇಶಗಳಿಗಾಗಿ ಪ್ರವಾಸದಲ್ಲಿದ್ದರು ಎಂದು ಸಿಎನ್‌ಎ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ನಂತರ ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆಯ ನಡುವೆ ಅವರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಲಡಾಖ್: ಪಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿರುವ ಚೀನಾ!
ಚೀನಾ ಮತ್ತು ತೈವಾನ್ ನಡುವೆ ಉದ್ವಿಗ್ನತೆ
ತೈವಾನ್‌ಗೆ ನ್ಯಾನ್ಸಿ ಪೆಲೋಸಿಯನ್ನು ಚೀನಾ ವಿರೋಧಿಸಿದ್ದು, “ತನ್ನ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದೆ. ಆಗಸ್ಟ್ 2 ರಂದು ನ್ಯಾನ್ಸಿ ತೈವಾನ್‌ಗೆ ಭೇಟಿ ನೀಡಿದ್ದು, ಅಮೆರಿಕದ ಚುನಾಯಿತ ಪ್ರತಿನಿಧಿಯೊಬ್ಬರು ಕಳೆದ 25 ವರ್ಷಗಳಲ್ಲೆ ಇದು ಮೊದಲ ಬಾರಿಯಾಗಿದೆ.
ಪೆಲೋಸಿ ತೈವಾನ್‌ಗೆ ಆಗಮಿಸುವ ಮುಂಚೆಯೇ, ಚೀನಾ ‘ಯುದ್ಧಕ್ಕೆ ಸಿದ್ಧರಾಗಲು’ ತನ್ನ ಮಿಲಿಟರಿಗೆ ಎಚ್ಚರಿಕೆ ನೀಡಿತ್ತು. ಅವರ ಭೇಟಿಯ ದಿನದಂದು, ಚೀನಾದ ಯುದ್ಧನೌಕೆಗಳು ತೈವಾನ್ ತೀರದ ಕಡೆಗೆ ಚಲಿಸಲು ಪ್ರಾರಂಭಿಸಿದವು. ಚೀನಾದ ವಿಮಾನವಾಹಕ ನೌಕೆ ಶಾಂಡೊಂಗ್ (CV-17) ಸನ್ಯಾ ಮತ್ತು ಲಿಯಾನಿಂಗ್-001 ನೌಕಾನೆಲೆಯನ್ನು ತೊರೆದಿದ್ದವು.
27 ಚೀನಾದ ಫೈಟರ್ ಜೆಟ್‌ಗಳು ತೈವಾನ್ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ ಎಂದು ಪೆಲೋಸಿ ಭೇಟಿಯ ಒಂದು ದಿನದ ನಂತರ ತೈವಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ. ವಾಯು ರಕ್ಷಣಾ ವಲಯ ಪ್ರವೇಶಿದ ಫೈಟರ್ ಜೆಟ್‌ಗಳಲ್ಲಿ ಚೀನಾದ ನೌಕಾಪಡೆಯ ಆರು ಜೆ-11 ಯುದ್ಧವಿಮಾನಗಳು, ಐದು ಜೆ-16 ಫೈಟರ್ ಜೆಟ್‌ಗಳು ಮತ್ತು 16 ಎಸ್‌ಯು-30 ಫೈಟರ್ ಜೆಟ್‌ಗಳನ್ನು ಒಳಗೊಂಡಿತ್ತು ಎಂದು ಅದು ಹೇಳಿದೆ.
ಇದನ್ನೂ ಓದಿ: ಚೀನಾವೂ ಭಾರತಕ್ಕೆ ಸೇರಿತ್ತು; ಪಠ್ಯಕ್ಕೆ ನುಸುಳಿದೆ ‘ಆರ್‌ಎಸ್‌ಎಸ್ ಅಖಂಡ ಭಾರತ!’
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತನ್ನ ‘ಅತಿದೊಡ್ಡ’ ಮಿಲಿಟರಿ ಅಭ್ಯಾಸವನ್ನು ಪ್ರಾರಂಭಿಸಿದ ನಂತರ ತೈವಾನ್ ಜಲಸಂಧಿಯಲ್ಲಿ ‘ನಿಖರವಾದ ಕ್ಷಿಪಣಿ ದಾಳಿ’ ನಡೆಸಿ ಸಮರಾಭ್ಯಾಸ ನಡೆಸಿದೆ ಎಂದು ಚೀನಾ ಹೇಳಿದೆ.