Homeದಿಟನಾಗರಫ್ಯಾಕ್ಟ್‌ಚೆಕ್: ಮಹಾಭಾರತದ ಬಗ್ಗೆ ರಾಹುಲ್‌ ಗಾಂಧಿ ತಪ್ಪುತಪ್ಪಾಗಿ ಹೇಳಿದ್ದಾರೆ ಎನ್ನಲಾಗಿರುವ ಈ ಟ್ವೀಟ್ ಎಡಿಟ್‌ ಮಾಡಿರುವಂತದ್ದು!

ಫ್ಯಾಕ್ಟ್‌ಚೆಕ್: ಮಹಾಭಾರತದ ಬಗ್ಗೆ ರಾಹುಲ್‌ ಗಾಂಧಿ ತಪ್ಪುತಪ್ಪಾಗಿ ಹೇಳಿದ್ದಾರೆ ಎನ್ನಲಾಗಿರುವ ಈ ಟ್ವೀಟ್ ಎಡಿಟ್‌ ಮಾಡಿರುವಂತದ್ದು!

- Advertisement -
- Advertisement -

ಕಾಂಗ್ರೆಸ್‌‌‌‌ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿರುವ ಟ್ವೀಟ್‌ ಒಂದರ ಸ್ಕ್ರೀನ್‌ಶಾರ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಹಿಂದೂಗಳ ಪವಿತ್ರ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣದ ಬಗ್ಗೆ ಅವರು ತಪ್ಪು ತಪ್ಪಾಗಿ ಬರೆದಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಹೀಗಾಗಿ ಅವರಿಗೆ ಗ್ರಂಥಗಳ ಬಗ್ಗೆ ಜ್ಞಾನದ ಕೊರೆತೆಯಿದೆ ಎಂದು ಸಾಮಾಜಿಕ ಜಾಲತಾಣಗಳದ ಪೋಸ್ಟ್‌ ಪ್ರತಿಪಾದಿಸುತ್ತಿದೆ.

ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಚಿತ್ರದಲ್ಲಿ ಅವರು, ಅರ್ಜುನನಿಗೆ ಕೃಷ್ಣನ ಬದಲಾಗಿ ಭಗವಾನ್ ರಾಮ ಮಾರ್ಗದರ್ಶಿ ಎಂದು ಹೇಳಿದ್ದಾರೆ ಮತ್ತು ಪಾಂಡವರಾದ ಯುಧೀಷ್ಠಿರ, ಲಕ್ಷ್ಮಣ, ಅರ್ಜುನ್, ಗಣೇಶ ಮತ್ತು ಶತ್ರುಘ್ನ ಸಿನ್ಹಾ ಒಟ್ಟು ಸೇರಿ ರಾವಣನನ್ನು ಕೊಂಡಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೆ, ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಈ ಟ್ವೀಟ್‌‌ ಕಾಂಗ್ರೆಸ್ ಪಕ್ಷವನ್ನು ಪಾಂಡವರಿಗೆ ಮತ್ತು ಬಿಜೆಪಿ ನಾಯಕರನ್ನು ಕೌರವರಿಗೆ ಹೋಲಿಸಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಆಹಾರದ ಮೇಲೆ ಉಗುಳುವುದು ಹಲಾಲ್‌ನ ಭಾಗವೆಂದು ಮುಸ್ಲಿಮರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಆರೋಪಿತ ಟ್ವೀಟ್ ಅನ್ನು ಎಚ್ಚರಿಕೆಯಿಂದ ಗಮನಿಸಿದಾಗ, 19 ಮಾರ್ಚ್ 2018 ರಂದು ಟ್ವೀಟ್ ಮಾಡಲಾಗಿದೆ ಎಂದು ನಾವು ಕಾಣಬಹುದಾಗಿದೆ. ಟ್ವಿಟರ್ ಅಡ್ವಾನ್ಸ್‌‌ ಸರ್ಚ್ ಬಳಸಿಕೊಂಡು ರಾಹುಲ್ ಗಾಂಧಿ ಅಂತಹ ಯಾವುದೇ ಟ್ವೀಟ್ ಅನ್ನು  2018 ರ ಮಾರ್ಚ್ 19 ರಂದು ಮಾಡಿದ್ದಾರೆಯೇ ಎಂದು ಪರಿಶೀಲಿಸಿದಾಗ ನಮಗೆ ಅವರ ಅಧಿಕೃತ ಖಾತೆಯಲ್ಲಿ ಯಾವುದೇ ಟ್ವೀಟ್‌ ಸಿಕ್ಕಿಲ್ಲ. ಒಂದು ವೇಳೆ ರಾಹುಲ್ ಗಾಂಧಿ ಇಂತಹ ಟ್ವೀಟ್ ಮಾಡಿದ್ದರೆ, ಹಲವಾರು ಸುದ್ದಿ ವೆಬ್‌ಸೈಟ್‌ಗಳು ಈ ಮಾಹಿತಿಯನ್ನು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿರುತ್ತಿದ್ದವು. ಆದರೆ ಈ ಮಾಹಿತಿಯ ಬಗ್ಗೆ ವರದಿ ಮಾಡಿರುವ ಒಂದೇ ಒಂದು ಸುದ್ದಿಯನ್ನು ನಮಗೆ ಕಂಡುಕೊಳ್ಳಲಾಗಿಲ್ಲ.

ಇದನ್ನೂ ಓದಿ:ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಟ್ಯ್ರಾಪ್‌‌ ಮಾಡುತ್ತಿದ್ದಾರೆ ಎಂದು ತಪ್ಪಾಗಿ ವಿಡಿಯೊ ಶೇರ್‌ ಮಾಡಲಾಗುತ್ತಿದೆ

ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿದ ಸಾಮಾನ್ಯ ಟ್ವೀಟ್ ಅನ್ನು ಸ್ಕ್ರೀನ್‌ಶಾಟ್‌ನಲ್ಲಿರುವ ಟ್ವೀಟ್‌ನೊಂದಿಗೆ ಹೋಲಿಸಿದಾಗ, ಈ ಎರಡೂ ಟ್ವೀಟ್‌ಗಳಲ್ಲಿ ನಮಗೆ ಹಲವು ವ್ಯತ್ಯಾಸಗಳನ್ನು ಗಮನಿಸಬಹುದು. ಪೋಸ್ಟ್‌ನಲ್ಲಿ ಹಂಚಿಕೊಂಡ ಟ್ವೀಟ್‌ಗೆ ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಂತೆ ಯಾವುದೇ ನೀಲಿ ಟಿಕ್ ಮಾರ್ಕ್ ಇಲ್ಲ. ಅಲ್ಲದೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಆರೋಪಿತ ಟ್ವೀಟ್ ಅನ್ನು ಟ್ವೀಟ್ ಮಾಡಿದ ಡಿವೈಸ್‌‌‌ನ ಹೆಸರು ಕಾಣುವುದಿಲ್ಲ. ಸಾಮಾನ್ಯವಾಗಿ ಯಾವುದೇ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದಾಗ ಅವರು ಟ್ವೀಟ್‌ ಮಾಡಿರುವ ಡಿವೈಸ್‌‌ ಅನ್ನು ಟ್ವೀಟ್ ಪ್ರದರ್ಶಿಸುತ್ತದೆ.

ಇದನ್ನೂ ಓದಿ:ಫ್ಯಾಕ್ಟ್‌‌ಚೆಕ್‌: ಮೋದಿ ಪ್ರಭಾವದಿಂದ ದಲ್ವೀರ್ ಭಂಡಾರಿ ಅಂತಾರಾಷ್ಟ್ರೀಯ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದು ನಿಜವೇ?

2018 ರ ಕಾಂಗ್ರೆಸ್ ಪ್ಲೀನರಿ ಮತ್ತು ಕರ್ನಾಟಕ ಚುನಾವಣಾ ಸಭೆಗಳಲ್ಲಿ, ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಪಾಂಡವರಿಗೆ ಮತ್ತು ಬಿಜೆಪಿ ನಾಯಕರನ್ನು ಮಹಾಭಾರತದ ಕೌರವರಿಗೆ ಹೋಲಿಸಿದ್ದರು. ಆದರೆ ಟ್ವೀಟ್ ಸ್ಕ್ರೀನ್‌ಶಾಟ್‌ನಲ್ಲಿ ಆರೋಪಿಸಿದ ರೀತಿಯಲ್ಲಿ ರಾಹುಲ್ ಗಾಂಧಿ ಎಂದಿಗೂ ಹೇಳಿಕೆ ನೀಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾಭಾರತದ ಕುರಿತು ರಾಹುಲ್ ಗಾಂಧಿಯವರ ಉದ್ದೇಶಿತ ಟ್ವೀಟ್‌ನ ಚಿತ್ರವು ಎಡಿಟ್‌ ಮಾಡಿರುವುದಾಗಿದೆ.

ಪ್ರತಿಪಾದನೆ: ರಾಹುಲ್ ಗಾಂಧಿ ಮಹಾಭಾರತದ ಪಾತ್ರಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.
ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಟ್ವೀಟ್ ಎಡಿಟ್‌ ಮಾಡಿರುವ ಚಿತ್ರವಾಗಿದೆ. ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಂತಹ ಯಾವುದೇ ಟ್ವೀಟ್ ಮಾಡಿಲ್ಲ. ರಾಹುಲ್ ಗಾಂಧಿ ಅವರು 2018 ರಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಪಾಂಡವರಿಗೆ ಮತ್ತು ಬಿಜೆಪಿ ನಾಯಕರನ್ನು ಕೌರವರಿಗೆ ಹೋಲಿಸಿದ್ದಾರೆ. ಆದರೆ ಅವರು ಎಂದಿಗೂ ಟ್ವೀಟ್‌ನಲ್ಲಿ ಆರೋಪಿಸಿದಂತಹ ಹೇಳಿಕೆಗಳನ್ನು ಮಾಡಲಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇದನ್ನು ಓದಿ:Fact Check: ಕಸಬ್‌ನ ಮರಣದಂಡನೆಯನ್ನು ರದ್ದುಗೊಳಿಸಲು ಕೋರಿ ಅಖಿಲೇಶ್ ಯಾದವ್ ಅರ್ಜಿಗೆ ಸಹಿ ಹಾಕಿರಲಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಬೆದರಿಕೆ, ಚಿತ್ರಹಿಂಸೆ ಕಾರಣ?

0
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಅವರನ್ನು ಬೆದರಿಸಿ ಚಿತ್ರಹಿಂಸೆ ನೀಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ವಿರೋಧ...