ವ್ಯಕ್ತಿಯೊಬ್ಬರು ತಮ್ಮ ಫೋನ್ ಚಾರ್ಜಿಂಗ್‌ನಲ್ಲಿಟ್ಟು ನೀರು ಕುಡಿಯುತ್ತಾ ಫೋನ್ ಕರೆಯಲ್ಲಿ ಮಾತನಾಡುತ್ತಿರುವಾಗ ಅವರ ಕಿವಿಯ ಮೇಲೆ ಫೋನ್ ಸ್ಫೋಟಗೊಂಡಿದೆ ಎಂದು ಹೇಳುವ ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋ ವೈರಲ್ ಆಗಿದೆ. ಮರಾಠಿ ಭಾಷೆಯಲ್ಲಿರುವ ಹೇಳಿಕೆಯೊಂದಿಗೆ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
“ಇದು ಅಪಾಯಕಾರಿ! ನೀರು ಕುಡಿಯುವ ವೇಳೆ ಚಾರ್ಜ್‌ನಲ್ಲಿರುವ ನಿಮ್ಮ ಫೋನ್ ಅನ್ನು ಬಳಸುವಾಗ ಎಲ್ಲರೂ ಕಾಳಜಿ ವಹಿಸಿ. ಇದರಿಂದ ಮೆದುಳು ಕೂಡ ಆಘಾತಕ್ಕೊಳಗಾಗುವ ಸಾಧ್ಯತೆ ಇದೆ” ಎಂದು ಫೋಸ್ಟ್‌ನಲ್ಲಿ ಹೇಳಲಾಗಿದೆ.
ಪುಣೆ ಮೂಲದ ಫೇಸ್‌ಬುಕ್ ಪೇಜ್ ಫನ್ ಮರಾಠಿಯಲ್ಲಿಯೂ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಹಲವಾರು ಇತರ ಫೇಸ್‌ಬುಕ್ ಬಳಕೆದಾರರು ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಈ ಲೇಖನದಲ್ಲಿ ಪರಿಶೀಲಿಸೋಣ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಆಹಾರದ ಮೇಲೆ ಉಗುಳುವುದು ಹಲಾಲ್‌ನ ಭಾಗವೆಂದು ಮುಸ್ಲಿಮರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಕೂಡ ಪೋಸ್ಟ್ ಮಾಡಿದ್ದಾರೆ. ಬಳಿಕ ಅದನ್ನು ಅಳಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

ನಿಜಾಂಶ:
ಇದು ನೈಜ ಘಟನೆ ಎಂದು ವೈರಲ್ ಆಗುತ್ತಿರುವ ದೃಶ್ಯಾವಳಿಯ ಸಂಪೂರ್ಣ ವೀಡಿಯೊದ ಕ್ಲಿಪ್ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದೆ. ಇದು ಸ್ಕ್ರಿಪ್ಟೆಂಡ್ ವಿಡಿಯೋ ಎಂದು ಹೇಳಲಾಗಿದೆ.
ಸಂಪೂರ್ಣ ವಿಡಿಯೋವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಗುಟ್ಟಾ ಜ್ವಾಲಾ ಪೋಸ್ಟ್ ಮಾಡಿದ್ದಾರೆ. ಶೀರ್ಷಿಕೆಯು ‘ಎಚ್ಚರಿಕೆಯಿಂದಿರಿ’ ಎಂದು ಕಾಣಿಸುತ್ತದೆ ಮತ್ತು ‘ಇನ್ನಷ್ಟು ವೀಕ್ಷಿಸಿ’ ಕ್ಲಿಕ್ ಮಾಡಿದ ನಂತರ ಕೆಳಗೆ ಓದಿದಾಗ ವೈರಲ್ ಆಗುತ್ತಿರುವ ಹೇಳಿಕೆ ತಪ್ಪು ಎಂದು ಗೊತ್ತಾಗುತ್ತದೆ. – “ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ!” ಎಂದು ಬರೆಯಾಗಿದೆ.

‘ಸ್ಫೋಟ’ದ ಹೇಳಿಕೆಯನ್ನು ಉಪಶೀರ್ಷಿಕೆಯಾಗಿ ಮಾತ್ರ ಮಾಡಲಾಗಿದೆ ಎಂಬುದನ್ನು ಓದುಗರು ಗಮನಿಸಬೇಕು. ವೀಡಿಯೋದಲ್ಲಿ ನಿಜವಾದ ಸ್ಫೋಟ ನಡೆದಿಲ್ಲ.

ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ಕಟ್ ಮಾಡಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋವು ಇದು ಸ್ಕ್ರಿಪ್ಟೆಂಡ್ ವಿಡಿಯೋ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ, ವಿಡಿಯೋದ ರಚನೆಕಾರರು ಇದು ಚಿತ್ರೀಕರಿಸಲಾದ ವಿಡಿಯೋ ಎಂದು ತಿಳಿಸಲು ವೀಡಿಯೊಗಳಲ್ಲಿ ಸರಿಯಾದ ಮತ್ತು ಸ್ಪಷ್ಟವಾದ ಹೇಳಿಯನ್ನು ಸೇರಿಸುವಲ್ಲಿ ವಿಫಲರಾಗಿದ್ದಾರೆ.
ಚಾರ್ಜ್‌ನಲ್ಲಿಟ್ಟ ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ ಫೋನ್ ಸ್ಪೋಟಗೊಂಡಿರುವ ವರದಿಗಳಾಗಿವೆ. ಆದರೆ, ಚಾರ್ಜ್‌ನಲ್ಲಿಟ್ಟ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ನೀರು ಕುಡಿಯುವಾಗ ಸ್ಪೋಟಗೊಂಡಿರುವ ಬಗ್ಗೆ ಯಾವುದೇ ಘಟನೆಯು ವರದಿಯಾಗಿಲ್ಲ. ಆದರೂ, ಮೊಬೈಲ್ ಫೋನ್ ಜಾರ್ಜ್‌ನಲ್ಲಿದ್ದಾಗ ಫೋನ್‌ನಲ್ಲಿ ಮಾತನಾಡುವುದು ಅಪಾಯಕಾರಿ ಎಂಬುದು ನಮ್ಮ ಅರಿವಿನಲ್ಲಿರಬೇಕು.
ಕೃಪೆ: ಆಲ್ಟ್‌ನ್ಯೂಸ್


