Homeಮುಖಪುಟಮುಸ್ಲಿಂ ವೇ‍ಷ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು!

ಮುಸ್ಲಿಂ ವೇ‍ಷ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು!

- Advertisement -
- Advertisement -

ಬೆಂಗಳೂರಿನಂತಹ ಮಹಾನಗರದಲ್ಲಿ ಕೋಟ್ಯಾಂತರ ಜನ ವಿವಿಧ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮೂರು ಹೊತ್ತಿನ ತಮ್ಮ ಹೊಟ್ಟೆ ತುಂಬಿಕೊಳ್ಳಲು ಶ್ರಮ ಹಾಕಿ ದುಡಿಯುತ್ತಿದ್ದಾರೆ. ಇನ್ನು ವಿ‍ಶೇಷ ಚೇತನರೂ ಕೂಡ ಯಾವುದಾದರೊಂದು ಗೂಡಂಗಡಿಯನ್ನು ಹಾಕಿಕೊಂಡು, ಸಣ್ಣ ಪುಟ್ಟ ವ್ಯಾಪಾರ ಮಾಡಿಯೋ ಮತ್ತಾವುದೋ ರೀತಿಯಲ್ಲಿ ದುಡಿದು ತಮ್ಮ ಬದುಕು ಸಾಗಿಸುತ್ತಿದ್ದಾರೆ.

ಇನ್ನು ಕೆಲವು ವಯೋವೃದ್ದರು ದುಡಿಯಲು ಸಾದ್ಯವಾಗದೆ, ತಮ್ಮ ಮನೆಗಳಲ್ಲೂ ಸರಿಯಾದ ಹಾರೈಕೆ ಸಿಗದವರು ದೇವಸ್ಥಾನದ ಹತ್ತಿರವೊ, ಸಿಗ್ನಲ್ ಗಳಲ್ಲಿಯೋ ಬಿಕ್ಷಾಟನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನಾವು ಇದನ್ನೆಲ್ಲಾ ಯಾಕೆ ಹೇಳ್ತಿದ್ದೀವಿ ಅನ್ಕೊಂಡ್ರಾ? ಅದಕ್ಕೆ ಕಾರಣ ಇದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೋ ಸಾಕಷ್ಟು ಹರಿದಾಡುತ್ತಿದೆ. ಅದೇನೆಂದರೆ ವ್ಯಕ್ತಿಯೊಬ್ಬ ಮುಸ್ಲಿಂ ವೇಷ ಧರಿಸಿ ಭಿಕ್ಷಾಟನೆ ಮಾಡುತ್ತಿದ್ದಾರೆ.. ಈ ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿಯು ತಾನೊಬ್ಬ ಮುಸ್ಲಿಂ ಅಂಗವಿಕಲ ವ್ಯಕ್ತಿ, ಒಂದು ಕೈ ಒಂದು ಕಾಲು ಇಲ್ಲ ಎಂದು ಹೇಳಿಕೊಂಡು ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ. ಕೆಲವರು ಆತನಿಂದ ಮುಸ್ಲಿಂ ಸಮುದಾಯದ ಮೇಲೆ ತುಚ್ಛವಾಗಿ ಮಾತನಾಡಿರುತ್ತಾರೆ. ಆ ಅಂಗವಿಕಲ ವ್ಯಕ್ತಿಯ ಬಗ್ಗೆ ಅನುಮಾನಗೊಂಡ ಕೆಲವು ಸಾರ್ವಜನಿಕರು ಆತನನ್ನು ಪ್ರಶ್ನೆ ಮಾಡಲು ಮುಂದಾಗುತ್ತಾರೆ.. ಆಗ ಆತ ಅಂಗವಿಕಲನೇ ಅಲ್ಲಾ ಎಂದು ಗೊತ್ತಾಗುತ್ತದೆ.. ಆತನಿಗೆ ಕೈಯಿದ್ದರೂ ಇಲ್ಲದ ರೀತಿ ನಟಿಸುತ್ತಿರುವುದನ್ನು ತರಾಟೆಗೆ ತೆಗೆದುಕೊಂಡು ವಿಡಿಯೋ ಮಾಡಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆ ವಿಡಿಯೋ ವೈರಲ್ ಆದ ನಂತರ ಮತ್ತೊಬ್ಬ ಮುಸ್ಲಿಂ ವ್ಯಕ್ತಿಯು ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ನಿನ್ನ ಹೆಸರೇನು ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಆತ ಸರಿಯಾಗಿ ಪ್ರತಿಕ್ರಿಯಿಸದ ಕಾರಣ ಜೋರು ದ್ವನಿಯಲ್ಲಿ ಕೇಳಿದಾಗ,  ಅಂಗವಿಕಲನಂತೆ ನಟಿಸುತ್ತಿದ್ದ ವ್ಯಕ್ತಿಯು ತಾನು ರಾಜಸ್ಥಾನ ದಿಂದ ಬಂದಿದ್ದು ನನ್ನ ಹೆಸರು ಬಿರ್ಸು, ನಾನು ಮುಸ್ಲಿಂ ಅಲ್ಲಾ ಎಂದು ಒಪ್ಪಿಕೊಂಡಿದ್ದಾನೆ. ಆತನನ್ನು ಪ್ರಶ್ನಿಸುವ ಆ ವಿಡಿಯೋ ಸಹ ಎಲ್ಲಡೆ ವೈರಲ್ ಆಗತ್ತಿದೆ.

ಹೀಗೆ ಮುಸ್ಲಿಂ ಟೋಪಿ ಹಾಕಿಕೊಂಡು ಅಂಗವಿಕಲ ಎಂಬ ವೇಷ ಧರಿಸಿ ಭಿಕ್ಷೆ ಬೇಡುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ ಎಲ್ಲರೂ ಭಾವೈಕ್ಯತೆಯಿಂದ ಸಹೋದರರಂತೆ ಜೀವಿಸುತ್ತಿದ್ದೇವೆ. ನೀವು ಯಾಕೆ ಈ ರೀತಿ ಮುಸ್ಲಿಂ ವೇಷ ಧರಿಸಿ ಅವರ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುತ್ತಿದ್ದೀರಿ ಇದು ಸರಿಯಲ್ಲಾ ಎಂದು  ಕೆಲವು ವ್ಯಕ್ತಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಸ್ಲಿಂ ಸಮುದಾಯದ ಬಗ್ಗೆ ಈಗಾಗಲೇ ಸಾಕಷ್ಟು ತಪ್ಪು ಅಭಿಪ್ರಾಯಗಳು ಬರುವಂತಹ ಕಾರ್ಯಕ್ರಮಗಳನ್ನು ಕೆಲ ಬಲಪಂಥೀಯ ಟಿವಿ ಚಾನೆಲ್ ಗಳು ಕೊರೋನಾ ಸಮಯದಲ್ಲಿ ಮಾಡಿದ್ದವು. ಈಗ ಈ ರೀತಿಯ ಘಟನೆಗಳು ಮುಸ್ಲಿಂ ಸಮುದಾಯದಲ್ಲಿ ಮತ್ತಷ್ಟು ಬೇಸರಕ್ಕೆ ಕಾರಣವಾಗಿದೆ.


ಇದನ್ನು ಓದಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಸಂಸತ್‌ನಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದು ನಿಜವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...