Homeಮುಖಪುಟಕೇಂದ್ರದ ನಿಯಮ ಮೀರಿ ಲಸಿಕೆ ಪಡೆದ 23 ವರ್ಷದ ಬಿಜೆಪಿ ನಾಯಕನ ಸಂಬಂಧಿ?

ಕೇಂದ್ರದ ನಿಯಮ ಮೀರಿ ಲಸಿಕೆ ಪಡೆದ 23 ವರ್ಷದ ಬಿಜೆಪಿ ನಾಯಕನ ಸಂಬಂಧಿ?

ಬಿಜೆಪಿ ನಾಯಕರ ಕುಟುಂಬಗಳ ಜೀವವಷ್ಟೇ ಮುಖ್ಯವೇ? ಸಾಮಾನ್ಯ ಜನರು ಕೀಟಗಳೇ? ಅವರ ಜೀವನಕ್ಕೆ ಕಿಮ್ಮತ್ತಿಲ್ಲವೆ! ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.

- Advertisement -
- Advertisement -

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಯುವ ಸೋದರಳಿಯ ತನ್ಮಯ್ ಫಡ್ನವಿಸ್ ಕೂಡಾ ಲಸಿಕೆ ಪಡೆದ ಫೋಟೋ ವೈರಲ್ ಆಗಿದ್ದು, ಕಾಂಗ್ರೆಸ್‌ ಪಕ್ಷವು 23 ವರ್ಷದ ಯುವಕನಿಗೆ ಹೇಗೆ ಲಸಿಕೆ ಹಾಕಲಾಯಿತು ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.

ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಕಳೆದ ಕೆಲವು ದಿನಗಳಿಂದ ಲಸಿಕೆ ಕೊರತೆಯ ಬಗ್ಗೆ ಕೇಂದ್ರಕ್ಕೆ ದೂರು ನೀಡುತ್ತಲೇ ಇದೆ. ಕೇಂದ್ರದ ಇದುವರೆಗಿನ ನಿಯಮದಂತೆ ಲಸಿಕೆಯು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಮುಕ್ತವಾಗಿದೆ. ಅದಾಗ್ಯೂ ಲಸಿಕೆ ಪಡೆಯು ಅರ್ಹ ವಯಸ್ಸಿನ ಗುಂಪಿಗೆ ಸೇರದಿದ್ದರೂ ತನ್ಮಯ್ ಫಡ್ನವಿಸ್ ಹೇಗೆ ಲಸಿಕೆ ಪಡೆದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಕೋವಿಡ್ ಸಾವಿನ ಸಂಖ್ಯೆಗಳನ್ನು ಮುಚ್ಚಿಡುತ್ತಿರುವ ಯೋಗಿ ಸರ್ಕಾರ: ಒಂದು ಗ್ರೌಂಡ್ ರಿಪೋರ್ಟ್

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, “ಮೋದಿ ಸರ್ಕಾರವು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕೆಂಬ ಷರತ್ತು ವಿಧಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಫಡ್ನವೀಸ್ ಅವರ ಸೋದರಳಿಯನಿಗೆ ಹೇಗೆ ಲಸಿಕೆ ನೀಡಿದರು? ಬಿಜೆಪಿ ನಾಯಕರ ಕುಟುಂಬಗಳ ಜೀವವಷ್ಟೇ ಮುಖ್ಯವೇ? ಸಾಮಾನ್ಯ ಜನರು ಕೀಟಗಳೇ? ಅವರ ಜೀವನಕ್ಕೆ ಕಿಮ್ಮತ್ತಿಲ್ಲವೆ!” ಎಂದು ಖಾರವಾಗಿ ಪ್ರಶ್ನಿಸಿದೆ.

ಇದನ್ನೂ ಓದಿ: ಕೊರೋನಾ ಪಾಲಿಟಿಕ್ಸ್: ‘ಕೊರೋನಾ ಸಿಕ್ರೆ ಅದನ್ನ ಫಡ್ನವೀಸ್ ಬಾಯೊಳಗೆ ತುರುಕುತ್ತೇನೆ’ ಎಂದ ಸೇನಾ ಶಾಸಕ

 

ಮಹಾರಾಷ್ಟ್ರ ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಾಗ್ಪುರದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ತನ್ಮಯ್ ಫಡ್ನವಿಸ್‌‌ ಲಸಿಕೆ ತೆಗೆದುಕೊಳ್ಳುವ ಫೋಟೋದೊಂದಿಗೆ ಪ್ರಶ್ನೆಗಳನ್ನು ಕೇಳಿ ಪೋಸ್ಟ್‌ ಹಾಕಿದೆ. ಲಸಿಕೆ ತೆಗೆದುಕೊಳ್ಳುತ್ತಿರುವ ಫೋಟೊ ತನ್ಮಯ್‌ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು ಎಂದು ಕಾಂಗ್ರೆಸ್‌ನ ಮುಖಂಡರು ಹೇಳಿದ್ದರು. ಆದರೆ ಚಿತ್ರವು ವೈರಲ್ ಆಗುತ್ತಿದ್ದಂತೆ ಅವರು ಅದನ್ನು ಡಿಲಿಟ್ ಮಾಡಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ ತನ್ಮಯ್ ಅವರು ತಮ್ಮ ಮೊದಲ ಲಸಿಕೆ ಮುಂಬೈನಲ್ಲಿ ತೆಗೆದುಕೊಂಡಿದ್ದರು ಮತ್ತು ಎರಡನೆ ಡೋಸೇಜ್ ಅನ್ನು ನಾಗ್ಪುರದಲ್ಲಿ ಪಡೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: 2017ರಲ್ಲಿಯೇ ಆಕ್ಸಿಜನ್ ಕೊರತೆ ಬಗ್ಗೆ ದನಿಯೆತ್ತಿದ್ದೆ, ಆದರೆ ನನ್ನನ್ನು ಜೈಲಿಗೆ ಹಾಕಲಾಯಿತು: ಡಾ.ಕಫೀಲ್ ಖಾನ್

 

 

ಕಾಂಗ್ರೆಸ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ರಾಮ್ ಕದಮ್, “ತನ್ಮಯ್ ಫಡ್ನವೀಸ್ ಅವರು ದೇವೇಂದ್ರ ಫಡ್ನವಿಸ್ ಅವರ ದೂರದ ಸಂಬಂಧಿ ಎಂಬುದನ್ನು ಸರ್ಕಾರ ಮರೆಯಬಾರದು. ಸಂಬಂಧಿಕರಿಗೆ ಲಸಿಕೆ ನೀಡುವುದಾದರೆ ದೇವೇಂದ್ರ ಫಡ್ನವೀಸ್ ಅವರು ಮೊದಲು ತಮ್ಮ ಹೆಂಡತಿಗೆ ಲಸಿಕೆ ಹಾಕುತ್ತಿದ್ದರು. ಅವರು ಇನ್ನೂ ಲಸಿಕೆ ಹಾಕಿಲ್ಲ. ಇದು ದೇವೇಂದ್ರ ಫಡ್ನವಿಸ್ ನಿಯಮಗಳನ್ನು ಅನುಸರಿಸುತ್ತದೆ ಎಂದು ಸ್ಪಷ್ಟಪಡಿಸುತ್ತದೆ” ಎಂದು ಹೇಳಿದ್ದಾರೆ.

“ಆದರೆ ಮತ್ತೊಂದೆಡೆ ಥಾಣೆ ಕಾರ್ಪೋರೇಷನ್‌ ಮೇಯರ್ ಮತ್ತು ಎಲ್ಲಾ ಕಾರ್ಪೋರೇಟರ್‌ಗಳು ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಸ್ವತಃ ಲಸಿಕೆ ಪಡೆದ್ದರೆ. ಇದಕ್ಕೆ ಯಾರು ಉತ್ತರಿಸುತ್ತಾರೆ? ರೆಮ್‌ಡೆಸಿವಿರ್ ಲಭ್ಯವಿಲ್ಲದ ಕಾರಣ ಜನರು ಸಾಯುತ್ತಿದ್ದಾರೆ ಆದರೆ ಎನ್‌ಸಿಪಿ ನಾಯಕಲ್ಲಿ ದೊಡ್ಡ ಮೊತ್ತದ ರೆಮ್‌ಡೆಸಿವಿರ್‌ ಹೊಂದಿದ್ದಾರೆ, ಹೇಗೆ?” ಎಂದು ಅವರು ಮರಳಿ ಕಾಂಗ್ರೆಸ್‌ಗೆ ಪ್ರಶ್ನಿಸಿದ್ದಾರೆ.

ಅಲ್ಲದೆ ಈ ಬಗ್ಗೆ ದೇವೇಂದ್ರ ಫಡ್ನವಿಸ್ ಕೂಡಾ ಸ್ಪಷ್ಟೀಕರಣ ನೀಡಿದ್ದು, “ತನ್ಮಯ್ ಫಡ್ನವಿಸ್ ನನ್ನ ದೂರದ ಸಂಬಂಧಿ. ಅವನು ಯಾವ ಆಧಾರದಲ್ಲಿ ತನ್ನ ಡೋಸ್ ಪಡೆದನೆಂದು ನನಗೆ ತಿಳಿದಿಲ್ಲ. ಮಾರ್ಗಸೂಚಿಗಳ ಪ್ರಕಾರ ತೆಗೆದುಕೊಂಡಿದ್ದರೆ, ಅದಕ್ಕೆ ಯಾವುದೇ ಆಕ್ಷೇಪಣೆ ಇರಬಾರದು. ಆದರೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತೆಗೆದುಕೊಂಡಿದ್ದರೆ, ಅದು ಸಂಪೂರ್ಣವಾಗಿ ಅನುಚಿತವಾಗಿದೆ. ಲಸಿಕೆಯೆ ಪಡೆಯಲು ಅರ್ಹತೆ ಹೊಂದಿಲ್ಲದ ಕಾರಣಕ್ಕೆ ನನ್ನ ಹೆಂಡತಿ ಮತ್ತು ಮಗಳು ಸಹ ವ್ಯಾಕ್ಸಿನೇಷನ್ ಪಡೆದಿಲ್ಲ. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಬೇಕು ಎಂಬ ದೃಡವಾದ ಅಭಿಪ್ರಾಯ ನನ್ನದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ ಮತ್ತು ಪ್ರಕಾಶಕರಿಗೆ ಏಳು ತಿಂಗಳ ಜೈಲು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...