ನಗ್ನ ಮಹಿಳೆಯೊಬ್ಬರು ತನಗೆ ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಮಾಡಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ಟೋಬರ್ 31 ರಂದು ತನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಎಂದು ಶಾಸಕರು ದೂರಿದ್ದಾರೆ.
“ಮೊದಲಿಗೆ ಸಾಮಾನ್ಯ ಕರೆಯ ಮೂಲಕ ಕರೆ ಪ್ರಾರಂಭವಾಯಿತು. ನಂತರ ಮಹಿಳೆಯು ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡಲು ಶುರುಮಾಡಿದ್ದಾರೆ. ವಿಡಿಯೊದಲ್ಲಿ ಮಹಿಳೆ ತನ್ನ ಖಾಸಗಿ ಅಂಗಗಳನ್ನು ತೋರಿಸಲು ಪ್ರಾರಂಭಿಸಿದ್ದು, ಇದರ ನಂತರ ಶಾಸಕರು ತಕ್ಷಣವೇ ಕರೆಯನ್ನು ಕೊನೆಗೊಳಿಸಿದ್ದಾರೆ” ಎಂದು ದೂರಿನಲ್ಲಿ ಹೇಳಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅದರ ನಂತರ ಅದೇ ನಂಬರ್‌ನಿಂದ ಹಲವು ಪೋರ್ನ್ ವಿಡಿಯೋಗಳು ಶಾಸಕರಿಗೆ ಬಂದಿವೆ ಎಂದು ಚಿತ್ರದುರ್ಗ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಮನಗರ: ದಲಿತ ಬಾಲಕಿಗೆ ಲೈಂಗಿಕ ಕಿರುಕುಳ; ಪೋಕ್ಸೋ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಪೇದೆ ಅರೆಸ್ಟ್
‘ಸೆಕ್ಸ್‌ಟಾರ್ಶನ್’
ಇಂತಹ ಅಪರಾಧಗಳನ್ನು ‘ಸೆಕ್ಸ್‌ಟಾರ್ಶನ್’ ಎಂದು ಕರೆಯಲಾಗುತ್ತದೆ. ಸೆಕ್ಸ್‌ಟಾರ್ಶನ್ ಅಪರಾಧದಲ್ಲಿ ಬಲಿಪಶುವನ್ನು ಖಾಸಗಿ ಮತ್ತು ಎಡಿಟ್ ಮಾಡಲಾಗಿರುವ ಫಿಲ್ಮ್‌ಗಳು ಅಥವಾ ಚಿತ್ರಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ.
ಅಪರಿಚಿತರು ಅಥವಾ ಹೊಸದಾಗಿ ಪರಿಚಯವಾದವರು ಬಲಿಪಶುವಿಗೆ ವೀಡಿಯೊ ಕರೆ ಮಾಡುತ್ತಾರೆ. ಕರೆ ಸ್ವೀಕರಿಸುತ್ತಿದ್ದಂತೆ ತಕ್ಷಣ ತಮ್ಮ ಉಡುಪುಗಳನ್ನು ತೆಗೆದುಹಾಕುತ್ತಾರೆ. ನಂತರ ಈ ಕರೆಯ ಸ್ಕ್ರೀನ್ ರೆಕಾರ್ಡ್ ಅನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ. ಇದೇ ರೀತಿಯ ‘ಸೆಕ್ಸ್‌ಟಾರ್ಶನ್’ನ ಸಾಮಾನ್ಯ ವಿಧಾನಗಳನ್ನು ಅನೇಕ ರಾಜ್ಯಗಳ ಪೊಲೀಸರು ಗಮನಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದ ಶಿವಮೂರ್ತಿ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯದ ದೂರು | ಕ್ರಮ ಕೈಗೊಳ್ಳದ ಜಿಲ್ಲಾಡಳಿತ
ಇಂತಹ ಪ್ರಕರಣದಲ್ಲಿ ಬಹುತೇಕ ಸಂತ್ರಸ್ತರು ಭಯ, ಮುಜುಗರ ಹಾಗೂ ಸ್ನೇಹಿತರು ಅಥವಾ ಕುಟುಂಬದವರಿಂದ ಅವಮಾನವಾಗುತ್ತದೆ ಎಂಬ ಭಾವನೆಯಿಂದ ದೂರು ದಾಖಲಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.


