Homeಕರ್ನಾಟಕಒಳ ಮೀಸಲಾತಿ | ದಲಿತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕಿದು ಸುವರ್ಣಾವಕಾಶ: ಅಂಬಣ್ಣ...

ಒಳ ಮೀಸಲಾತಿ | ದಲಿತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕಿದು ಸುವರ್ಣಾವಕಾಶ: ಅಂಬಣ್ಣ ಅರೋಲಿಕರ್

- Advertisement -
- Advertisement -

ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದ್ದು, ರಾಜ್ಯದಲ್ಲಿ ಒಳ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಅಂಬಣ್ಣ ಅರೋಲಿಕರ್ ಅವರು ತೀರ್ಪನ್ನು ಸ್ವಾಗತಿಸಿದ್ದಾರೆ.

“ಸರ್ಕಾರಗಳು ಕಾಲಹರಣವನ್ನು ಮುಂದುವರಿಸದೆ, ಸಣ್ಣಪುಟ್ಟ ಲೋಪದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ದಮನಿತ ಸಮುದಾಯಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಇದು ಸುವರ್ಣಾವಕಾಶವಾಗಿದೆ” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾನುಗೌರಿ.ಕಾಮ್ ಜತೆಗೆ ಮಾತನಾಡಿದ ಅಂಬಣ್ಣ ಅರೋಲಿಕರ್, “ಸುಪ್ರೀಂ ಕೋರ್ಟಿನ ಒಳ ಮೀಸಲಾತಿ ಕುರಿತ ತೀರ್ಪು ಗೌರವಿಸಬೇಕಾದ ವಿಚಾರ. ಕಳೆದ ಮೂವತ್ತು ವರ್ಷಗಳಿಂದ ಈ ಬಗ್ಗೆ ಬೀದಿ ಹೋರಾಟ ಮಾಡಿದ್ದೇವೆ. 2020ರಲ್ಲಿ ಅರುಣ್ ಮಿಶ್ರಾ ಪೀಠದ ತೀರ್ಪು ಬಂದು, ಐದನೇ ಬೆಂಚ್‌ನಿಂದ ಏಳನೇ ಬೆಂಚಿಗೆ ಪ್ರಕರಣ ವರ್ಗಾವಣೆಯಾದ ನಂತರ ಏನಾಗುತ್ತದೋ ಎಂಬ ಬಗ್ಗೆ ಬಹಳ ಆತಂಕವಿತ್ತು. ಈಗ ಬಂದಿರುವ ತೀರ್ಪನ್ನು ನಾವು ಸ್ವಾಗತ್ತಿಸುತ್ತೇವೆ” ಎಂದು ಸಂತಸ ವ್ಯಕ್ತಪಡಿಸಿದರು.

“ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಲಹರಣ ಮಾಡದೆ, ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಗಳಿಗೆ ಕೊಟ್ಟಿರುವ ಪರಮಾಧಿಕಾರವನ್ನು ಬಳಸಿಕೊಳ್ಳುವ ಮೂಲಕ ಕೂಡಲೇ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಕೆಲಸವನ್ನು ಯುದ್ದೋಪಾದಿಯಲ್ಲಿ ಮಾಡಬೇಕು. ಕಳೆದ 75 ವರ್ಷಗಳಿಂದ ಅಸ್ಪೃಶ್ಯ ಸಮುದಾಯಗಳಿಗೆ ವಿದ್ಯೆ, ಉದ್ಯೋಗದಲ್ಲಿ ಸಾಕಷ್ಟು ನಷ್ಟವಾಗಿದೆ. ಹಾಗಾಗಿ, ಕಾಲಹರಣ ಮುಂದುವರಿಸದೆ ಸರ್ಕಾರಗಳು ಸಣ್ಣಪುಟ್ಟ ಲೋಪದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಇದು ಸುವರ್ಣಾವಕಾಶವಾಗಿದೆ; ಅದನ್ನು ಸರ್ಕಾರಗಳು ಕೂಡಲೇ ಮಾಡಬೇಕು” ಎಂದು ಅವರು ಒತ್ತಾಯಿಸಿದರು.

ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸಬೇಕು

“ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸಬೇಕು; ಗೌರವಿಸದೇ ಇದ್ದಲ್ಲಿ ಸಮುದಾಯದ ತೀರ್ಮಾನ ಮತ್ತು ನ್ಯಾಯಾಂಗದ ಛೀಮಾರಿಯನ್ನು ಯಾವುದೇ ಸರ್ಕಾರ ಎದುರಿಸಬೇಕಾಗುತ್ತದೆ. ಪ್ರತಿ ಸರ್ಕಾರ ಶೇ.100ರಷ್ಟು ಇದನ್ನು ಒಪ್ಪಲೇಬೇಕು, ಕಡೆಗಣಿಸಿದರೆ ಪ್ರತಿಫಲ ಎದುರಿಸಬೇಕು. ಸರ್ಕಾರಗಳು ಬೇಷರತ್ತಾಗಿ ಒಳ ಮೀಸಲಾತಿ ಜಾರಿ ಮಾಡಬೇಕು. ಯಾವುದೇ ಕಾರಣಕ್ಕೂ ನ್ಯಾಯದ ವಿಳಂಬ ಆಗಬಾರದು. ಒಂದು ಗುಂಪಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ನಾವು ಮಾಡೇ ಮಾಡುತ್ತೇವೆ” ಎಂದರು.

“ಒಳ ಮೀಸಲಾತಿ ಹೋರಾಟ ದಕ್ಷಿಣ ಭಾರತದಲ್ಲಿ ನಡೆದಿದೆ. ಆ ಮೂಲಕ ಇಡೀ ದೇಶಕ್ಕೆ ದೊಡ್ಡ ಮಟ್ಟದ ಸಂದೇಶ ಸಿಕ್ಕಿದೆ. ದಕ್ಷಿಣ ಭಾರತ ಹೊರತುಪಡಿಸಿ ಬೇರೆಕಡೆ ಬೀದಿ ಹೋರಾಟ ಇರಲಿಲ್ಲ.. ತಮಿಳುನಾಡು ಸರ್ಕಾರ ಇದರಲ್ಲಿ ನೇರವಾಗಿ ಭಾಗಿ ಆಗಿತ್ತು. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳು ಪಾಲುದಾರಿಕೆ ಮತ್ತು ಸಕ್ರಿಯ ಭಾಗವಹಿಸುವುಕೆಯೇ ಈ ತೀರ್ಪು ಬುರುವುದಕ್ಕೆ ಕಾರಣವಾಗಿದೆ” ಎಂದು ವಿವರಿಸಿದರು.

“ಜನಸಂಖ್ಯೆ ಆಧಾರವಾಗಿ ಮೀಸಲಾತಿ ಹಂಚಬೇಕು ಎನ್ನುವುದೇ ನಮ್ಮ ಬೇಡಿಕೆ. ಆಯಾ ರಾಜ್ಯಗಳು ಈ ಬಗ್ಗೆ ಅಧ್ಯಯನ ಮಾಡಿ ಮೀಸಲಾತಿ ಹಂಚಿಕೆ ಮಾಡುವ ಕೆಲಸ ಆಗಬೇಕು. ಯಾವುದೇ ರಾಜ್ಯದಲ್ಲಿ ಮೀಸಲಾತಿಯ ಶೇ.50 ರ ಮಿತಿಯನ್ನು ಮೀರುವ ಸಾಧ್ಯತೆ ಸದ್ಯಕ್ಕಂತೂ ಇಲ್ಲ. ಅಸ್ತಿತ್ವದಲ್ಲಿರುವ ಮೀಸಲಾತಿಯಲ್ಲೇ ನಮ್ಮ ಪಾಲನ್ನು ಸಮಾನವಾಗಿ ಹಂಚಿದರೆ ಸಾಕು. ಈಗಾಗಲೇ ಕಳೆದ 75 ವರ್ಷಗಳಿಂದ ನಮ್ಮ ಸಮುದಾಯಕ್ಕೆ ವಿದ್ಯೆ-ಉದ್ಯೋಗದಲ್ಲಿ ಸಾಕಷ್ಟು ನಷ್ಟವಾಗಿದೆ; ಆರ್ಥಿಕ ನಷ್ಟವಾಗಿದೆ. ಕನಿಷ್ಠ ಐದಾರು ತಿಂಗಳಲ್ಲೇ ಈ ಪ್ರಕರಣ ಇತ್ಯರ್ಥಗೊಳಿಸುವುದು ಸೂಕ್ತ. ಅದು ಈ ತೀರ್ಪಿಗೆ ಗೌರವ ತರುತ್ತದೆ. ಇದುವರೆಗೆ ಮಾಡಿರುವ ಕಾಲಹರಣ ಮಾಡಬಾರದು ಎನ್ನುವುದೇ ನಮ್ಮ ಆಗ್ರಹ” ಎಂದು ಹೇಳಿದರು.

ಒಳಮೀಳಾತಿಯ ಚೆಂಡು ರಾಜ್ಯಗಳ ಕೋರ್ಟಿಗೆ ಬಂದು ಬಿದ್ದಿದೆ: ಶಿವಸುಂದರ್

“ಸುಪ್ರೀಂಕೋರ್ಟಿನ ಏಳು ಸದಸ್ಯರ ಸಾಂವಿಧಾನಿಕ ಪೀಠ 6-1 ಬಹುಮತದಲ್ಲಿ ಪರಿಶಿಷ್ಟರ ಮೀಸಲಾತಿಯ ಒಳಗೆ ಅತ್ಯಂತ ಹಿಂದುಳಿದವರನ್ನು ಗುರುತಿಸುವ ಹಾಗೂ ಪರಿಶಿಷ್ಟ ಮೀಸಲಾತಿಯೊಳಗೆ ಒಳ ಮೀಸಲಾತಿಯನ್ನು ಕಲ್ಪಿಸುವ ರಾಜ್ಯ ಗಳ ಅಧಿಕಾರವನ್ನು ಎತ್ತಿಹಿಡಿದಿದೆ. ಆದರೆ, ಹಾಗೆ ಮಾಡುವ ಮುನ್ನ ರಾಜ್ಯ ಸರ್ಕಾರವು ಅಂಥ ಮೀಸಲಾತಿಯು ಯಾವ ಸಮುದಾಯಗಳಿಗೆ ಅಗತ್ಯವಿದೆ ಎಂಬುದರ ಬಗ್ಗೆ ಅಧ್ಯಯನವನ್ನು ಮಾಡಬೇಕು. ಆ ಅಧ್ಯಯನವನ್ನು ಆಧರಿಸಿ ಒಳಮೀಸಲಾತಿ ಕಲ್ಪಿಸಬೇಕು. ಹಾಗೂ ಆ ಒಳಮೀಸಲಾತಿಯು ಪರಿಶಿಷ್ಟ ಮೀಸಲಾತಿಯ ಶೇ. 100 ಅನ್ನು ಒಳಗೊಳ್ಳಬಾರದು ಎಂದು ತೀರ್ಪಿತ್ತಿದೆ” ಎಂದು ಚಿಂತಕರಾದ ಶೀವಸುಂದರ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, “ಜಸ್ಟೀಸ್ ಬೇಲಾ ತ್ರಿವೇದಿ ಯವರು ಮಾತ್ರ ಒಳಮೀಸಲಾತಿಯ ತಾತ್ವಿಕನೆಲೆಯನ್ನು, ದೊಡ್ಡ ಪೀಠಕ್ಕೆ ಇಂಥಾ ಪ್ರಕರಣಗಳನ್ನು ವರ್ಗಾಯಿಸುವುದನ್ನು ವಿರೋಧಿಸಿ ಭಿನ್ನಮತದ ತೀರ್ಪಿತ್ತಿದ್ದಾರೆ” ಎಂದು ಹೇಳಿದ್ದಾರೆ.

“ಈಗ ಮತ್ತೆ ಒಳಮೀಳಾತಿಯ ಚೆಂಡು ರಾಜ್ಯಗಳ ಕೋರ್ಟಿಗೆ ಬಂದು ಬಿದ್ದಿದೆ. ಈಗ ರಾಜ್ಯಗಳು ಪರಿಶಿಷ್ಟ ವರ್ಗಗಳಲ್ಲಿ ಇರುವ ಜಾತಿಗಳ ಪ್ರಾತಿನಿಧ್ಯ, ಹಿಂದುಳಿದಿರುವಿಕೆಯ ಬಗ್ಗೆ ಅಧ್ಯಯನ ಕೈಗೊಳ್ಳಬೇಕು. ಈಗಾಗಲೇ ಇದರ ಸುತ್ತ ನಡೆದಿರುವ ಮೇಲ್ಜಾತಿಗಳ ಒಡೆದಾಳುವ ರಾಜಕಾರಣದ ಅನುಭವ ಇರುವ ಪರಿಶಿಷ್ಟ ಸಮುದಾಯಗಳು ಭ್ರಾತೃತ್ವ ಭಾವನೆಯಿಂದ ಅತ್ಯಂತ ವಂಚಿತರಿಗೆ ಮೊದಲ ಆದ್ಯತೆ ಎಂಬ ತತ್ವದ ಮೇರೆಗೆ ಮುಂದಾಗಬೇಕಿದೆ. ಹಾಗೆಯೇ ಒಳಮೀಸಲಾತಿಯು ಶೇ. 100 ರಷ್ಟು ಇರಬಾರದೆಂಬ ನಿರ್ಣಯಾದ ಹಿಂದಿರುವ ಅಪಾಯಕಾರಿ ‘ಮೆರಿಟೋಕ್ರಸಿ’ಯ ತಾತ್ವಿಕ ನೆಲೆಯನ್ನು ಮರುಪರಿಶೀಲನೆಗೊಡ್ಡಬೇಕು ಎಂದು ನನಗನಿಸುತ್ತದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋಲಾರದ ಹಿರಿಯ ದಲಿತ ಹೋರಾಟಗಾರರಾದ ಹ.ಮಾ. ರಾಮಚಂದ್ರ ನಾನುಗೌರಿ.ಕಾಮ್ ಜತೆಗೆ ಮಾತನಾಡಿ, “ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇವೆ.. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಮೀಸಲಾತಿ ಅಳವಡಿಸಿಕೊಳ್ಳುವುದು ಸೂಕ್ತ. ಏಕೆಂದರೆ, ಒಳ ಮೀಸಲಾತಿ ಕೇಳುತ್ತಿರುವ ದಲಿತ ಸಮುದಾಯದ ಎಲ್ಲ ಜಾತಿಗಳಿಗೆ ಪಾಲು ಮತ್ತು ಪ್ರಾತಿನಿಧ್ಯ ಸಿಗಬೇಕು. ಮೊದಲಿಗೆ, ಸುಪ್ರೀಂ ಕೋರ್ಟು ಈ ರೀತಿಯ ತೀರ್ಪು ನೀಡಿರುವುದನ್ನು ಸ್ವಾಗತಿಸಬೇಕು, ಅದರಲ್ಲೂ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದ್ದಾರೆ. ಜಾತಿ ಗಣತಿ ಕೂಡ ಆಗಬೇಕಿದೆ, ಅದಕ್ಕೆ ಎಲ್ಲ ಕಡೆಯಿಂದ ಒತ್ತಡ ಬರುತ್ತಿದೆ. ಅರ್ಹ ಜಾತಿಗಳನ್ನು ಗುರುತಿಸಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಆಶಯ” ಎಂದರು.

ಇದನ್ನೂ ಓದಿ; ಪರಿಶಿಷ್ಟ ಜಾತಿ, ಪಂಗಡಗಳಲ್ಲೇ ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ: ಸುಪ್ರೀಂ ಕೋರ್ಟ್ ಸಮ್ಮತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಬಿಕ್ಕಟ್ಟು| ’10 ಅಂಶಗಳ ಪ್ರಸ್ತಾವನೆಯ ಮೂರು ಷರತ್ತುಗಳನ್ನು ಉಲ್ಲಂಘಿಸಲಾಗಿದೆ’: ‘ಕದನ ವಿರಾಮ’ದ ಮರುದಿನ ಇರಾನ್ ಹೇಳಿಕೆ

ಮಂಗಳವಾರ ಒಪ್ಪಿಕೊಂಡ ಕದನ ವಿರಾಮದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ ಗಾಲಿಬಾಫ್ ಬುಧವಾರ ಆರೋಪಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ  X ನಲ್ಲಿ ಈಬರೆದಿರುವ ಗಾಲಿಬಾಫ್, ಅಮೆರಿಕದ ಬಗ್ಗೆ...

ಬಂಗಾಳ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆರ್‌ಜಿ-ಕರ್ ಸಂತ್ರಸ್ತೆ ತಾಯಿ

ಕರ್ತವ್ಯದಲ್ಲಿರುವಾಗಲೇ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಆರ್‌ಜಿಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಅವರು ಪಾಣಿಹತಿಯ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ...

‘ಮುಸ್ಲಿಮರನ್ನು ಮರುಳು ಮಾಡುವುದು ಸುಲಭ’: ಹುಮಾಯೂನ್ ಕಬೀರ್ ವಿಡಿಯೋ ವಿವಾದ: ತನಿಖೆಗೆ ಟಿಎಂಸಿ ಒತ್ತಾಯ

ಪಶ್ಚಿಮ ಬಂಗಾಳದಲ್ಲಿ ಗುರುವಾರ ರಾಜಕೀಯ ವಿವಾದ ಭುಗಿಲೆದ್ದಿದ್ದು, ಹುಮಾಯೂನ್ ಕಬೀರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ...

ಲೆಬನಾನ್ ಮೇಲೆ ‘ಅಗತ್ಯವಿರುವಲ್ಲೆಲ್ಲಾ’ ದಾಳಿ ಮುಂದುವರಿಸುವುದಾಗಿ ಘೋಷಿಸಿದ ನೆತನ್ಯಾಹು; ಹಿಜ್ಬೊಲ್ಲಾದ ಉನ್ನತ ಅಧಿಕಾರಿ ಹತ್ಯೆ 

ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡಿದ ಮರುದಿನ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮೇಲೆ "ಅಗತ್ಯವಿರುವಲ್ಲೆಲ್ಲಾ" ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಇಸ್ರೇಲಿ ಸೇನೆಯು ಗುರುವಾರ ದಕ್ಷಿಣ ಲೆಬನಾನ್‌ನಲ್ಲಿ ಮತ್ತಷ್ಟು...

ಬಾರಾಮತಿ ಉಪ ಚುನಾವಣಾ ಕಣದಿಂದ ಹಿಂದೆ ಸರಿದ ಕಾಂಗ್ರೆಸ್ ; ಸುನೇತ್ರಾ ಪವಾರ್ ಗೆಲುವು ಖಚಿತ

ಬಾರಾಮತಿ ಕ್ಷೇತ್ರದ ಉಪಚುನಾವಣಾ ಕಣದಿಂದ ಕಾಂಗ್ರೆಸ್ ಪಕ್ಷ ಹಿಂದೆ ಸರಿದ ಕಾರಣ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಗೆಲುವು ಖಚಿತವಾಗಿದೆ. ಬಾರಾಮತಿ ವಿಮಾನ ದುರಂತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್...

ಗಿಗ್ ಕಾರ್ಮಿಕರ ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರ

ದಾಖಲೆರಹಿತ ವಲಸಿಗರ ಒಳನುಸುಳುವಿಕೆ ಆರೋಪದ ರಾಜಕೀಯ ವಿವಾದದ ನಡುವೆ, ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಾದ್ಯಂತ (ಎಂಎಂಆರ್‌) ಲಕ್ಷಾಂತರ ಗಿಗ್ ಮತ್ತು ವಿತರಣಾ ಕಾರ್ಮಿಕರಿಗೆ ಕಠಿಣ, ಕಡ್ಡಾಯ ಪರಿಶೀಲನಾ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ...

ಪಶ್ಚಿಮ ಬಂಗಾಳ| ಎಸ್‌ಐಆರ್‌ ತೀರ್ಪಿನ ನಂತರ ಒಂದೇ ಗ್ರಾಮದ 3,700 ಹೆಸರುಗಳು ಡಿಲೀಟ್!

ಪಶ್ಚಿಮ ಬಂಗಾಳದ ಮಾಲ್ಡಾದ ಹಳ್ಳಿಯೊಂದರ ಸುಮಾರು 4,000 ಮತದಾರರ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಮೊದಲ ಹಂತದ ಮತದಾರರ ಪಟ್ಟಿ ಈಗಾಗಲೇ ಸ್ಥಗಿತಗೊಂಡಿದ್ದು, ಇದರಿಂದಾಗಿ ಅವರು ರಾಜ್ಯಾದ್ಯಂತ ಲಕ್ಷಾಂತರ ಜನರಂತೆ ಏಪ್ರಿಲ್ 23 ರಂದು...

ದಲಿತ ಯುವಕನ ಕಸ್ಟಡಿ ಸಾವು ಆರೋಪ : ರಾಜ್ಯ ಸರ್ಕಾರ, ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಕರ್ನಾಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ (ಏ.8) ರಾಜ್ಯ ಸರ್ಕಾರ, ಪೊಲೀಸರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ...

ಇಬ್ಬರು ಮಕ್ಕಳ ಸಾವಿನ ಬಳಿಕ ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು ಪ್ರಯೋಗಿಸಿದ ಪೊಲೀಸರು

ಏಪ್ರಿಲ್ 7 ರಂದು ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ನಂತರ ಕಣಿವೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದ ಕಾರಣ ಬುಧವಾರ (ಏಪ್ರಿಲ್ 8) ಮಣಿಪುರದಾದ್ಯಂತ ಉದ್ವಿಗ್ನತೆ ಉಂಟಾಗಿತ್ತು....

ಮತಕ್ಕಾಗಿ ನಗದು ಪ್ರಕರಣ: ಪಾಲಕ್ಕಾಡ್‌ನಲ್ಲಿ ಎನ್‌ಡಿಎ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಮತದಾನದ ಒಂದು ದಿನಕ್ಕೆ ಮುಂಚಿತವಾಗಿ ಮತದಾರರಿಗೆ ಲಂಚ ನೀಡಿದ ಆರೋಪದ ಮೇಲೆ ಪಾಲಕ್ಕಾಡ್ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿನಿಧಿಗಳ ವಿರುದ್ಧ ಬುಧವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 8 ರಂದು ಬೆಳಿಗ್ಗೆ 10...