Homeಅಂತರಾಷ್ಟ್ರೀಯಭಾರತೀಯ ರೈತರ ಪರ ಧ್ವನಿಯೆತ್ತಿದ ಅಮೆರಿಕ ಸಂಸದರ ಗುಂಪು

ಭಾರತೀಯ ರೈತರ ಪರ ಧ್ವನಿಯೆತ್ತಿದ ಅಮೆರಿಕ ಸಂಸದರ ಗುಂಪು

ರೈತರ ಶಾಂತಿಯುತ ಪ್ರತಿಭಟನೆಯನ್ನು ಅನುಮತಿಸಿ, ಇಂಟರ್ನೆಟ್ ಮರುಸ್ಥಾಪಿಸಿ ಎಂದು ಅಮೆರಿಕಾ ಕಾಂಗ್ರೆಸ್‌ನ ಭಾರತ ಸಮಿತಿ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

- Advertisement -
- Advertisement -

ಅಮೆರಿಕ ಸಂಸತ್ತಿನ ಇಂಡಿಯಾ ಕಾಕಸ್‌ನ ಸಹ-ಅಧ್ಯಕ್ಷ, ಸಂಸದ ಬ್ರಾಡ್ ಶೆರ್ಮನ್ ಅವರು ಭಾರತೀಯ ರೈತರ ಪ್ರತಿಭಟನೆ ಕುರಿತಂತೆ ಚರ್ಚೆ ಮಾಡಲು ಒಂದು ಸಭೆ ಕರೆದಿದ್ದಾರೆ. ಅವರು ರಿಪಬ್ಲಿಕನ್ ಪಕ್ಷದ ಸಹ-ಅಧ್ಯಕ್ಷ, ಸಂಸದ ಸ್ಟೀವ್ ಚಬೊಟ್ ಮತ್ತು ಉಪಾಧ್ಯಕ್ಷ, ಸಂಸದ ರೋ ಖನ್ನಾ ಅವರೊಂದಿಗೆ ರೈತರ ಪ್ರತಿಭಟನೆಗಳ ಕುರಿತು ಅಮೆರಿಕದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರೊಂದಿಗೆ ಮಾತನಾಡಲು ಈ ಸಭೆ ಕರೆದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದು ’ಭಾರತದ ಹೌಸ್ ಆಫ್ ಕಾಂಗ್ರೆಸ್ ಸಮಿತಿ’ ನಡೆಸಲಿರುವ ಮಹತ್ಚದ ಸಭೆಯಾಗಿದೆ. ಇಂಡಿಯಾ ಕಾಕಸ್‌ನ ಸಹ-ಅಧ್ಯಕ್ಷರಾಗಿರುವ ಸಂಸದ ಬ್ರಾಡ್ ಶೆರ್ಮನ್ ಭಾರತ ಸರ್ಕಾರಕ್ಕೆ ಈ ಪ್ರಶ್ನೆಗಳನ್ನು ಕಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ಯಶಸ್ವಿಯಾಗಿ ಜರುಗಿದ ಸಂಚಾರ ಸ್ಥಗಿತ ಹೋರಾಟ: ಹೆದ್ದಾರಿ ಬಂದ್ ಚಿತ್ರಗಳು

“ಪ್ರಜಾಪ್ರಭುತ್ವದ ಬೇರುಗಳನ್ನು ಕಾಪಾಡಿಕೊಳ್ಳಲಾಗಿದೆಯೇ? ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ನೀಡಲಾಗಿದೆಯೇ? ಪ್ರತಿಭಟನಾಕಾರರಿಗೆ ಇಂಟರ್ನೆಟ್ ಲಭ್ಯವಿದೆಯೇ ಮತ್ತು ಪ್ರತಿಭಟನಾಕಾರರು ಪತ್ರಕರ್ತರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು” ಎಂದು ಬ್ರಾಡ್ ಶೆರ್ಮನ್ ಹೇಳಿದ್ದಾರೆ.  ಭಾರತದ ಎಲ್ಲ ಮಿತ್ರ ದೇಶಗಳೂ, ರೈತರು ಮತ್ತು ಸರ್ಕಾರದ ನಡುವೆ ಒಂದು ಸರ್ವಸಮ್ಮತ ಒಪ್ಪಂದ ಏರ್ಪಡಬಹುದು ಎಂದು ಆಶಾಭಾವನೆ ಹೊಂದಿವೆ ಎಂದು ಶೆರ್ಮನ್ ಹೇಳಿದ್ದಾರೆ.

ಇದನ್ನೂ ಓದಿ: ಸ್ವಾರ್ಥ, ಹೇಡಿತನದಲ್ಲಿ ಚಿತ್ರನಟರನ್ನು ಮೀರಿಸಿದ ಕ್ರಿಕೆಟಿಗರು: ನಟ ಚೇತನ್ ಆಕ್ರೋಶ

ಮೂರು ಕೇಂದ್ರ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸಿ ಲಕ್ಷಾಂತರ ರೈತರು, ಮೂರು ದೆಹಲಿ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರಗಳಲ್ಲಿ 73 ದಿನಗಳಿಂದ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಮತ್ತು ರೈತ ಸಂಘಗಳ ನಡುವೆ 11 ಸುತ್ತಿನ ಮಾತುಕತೆಗಳು ಫಲಪ್ರದವಾಗಿಲ್ಲ.

ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿರುವ ರೈತ ಸಂಘಗಳ ಪ್ರಾತಿನಿಧಿಕ ಸಂಸ್ಥೆಯಾದ ಸಂಯುಕ್ತ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆ ಮೇರೆಗೆ ಈಗ ದೇಶಾದ್ಯಂತ ರಸ್ತೆ ತಡೆ ನಡೆದಿದೆ.

ಭಾರತದ ಪ್ರಜಾಪ್ರಭುತ್ವದ ನೀತಿಗಳು ಮತ್ತು ರಾಜಕೀಯದ ಹಿನ್ನೆಲೆಯಲ್ಲಿ ಯಾವುದೇ ಪ್ರತಿಭಟನೆಗಳನ್ನು ನೋಡಬೇಕು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಸಂಬಂಧಪಟ್ಟ ರೈತ ಗುಂಪುಗಳು ನಡೆಸುತ್ತಿರುವ ಪ್ರಯತ್ನಗಳನ್ನು ಗಮನಿಸಬೇಕು ಎಂದು ವಿದೇಶಾಂಗ ಸಚಿವಾಲಯ ಮೊನ್ನೆ ಹೇಳಿತ್ತು. ಆದರೆ ದೆಹಲಿ ಗಡಿಗಳಲ್ಲಿನ ರೈತ ಪ್ರತಿಭಟನೆ ಬೆಂಬಲಿಸಿ ಪಾಪ್ ಗಾಯಕಿ ರಿಹಾನ್ನಾ, ಪರಿಸರವಾದಿ ಗ್ರೆಟಾ ಥನ್‌ಬರ್ಗ್ ಸೇರಿದಂತೆ ಹಲವರು ಟ್ವೀಟ್ ಮಾಡಿದ ನಂತರ ಅಮೆರಿಕಾ ಆಡಳಿತ ಪ್ರತಿಕ್ರಿಯೆ ನೀಡಲು ಆರಂಭಿಸಿದೆ.

ಇದನ್ನೂ ಓದಿ: ಸ್ವಾರ್ಥ, ಹೇಡಿತನದಲ್ಲಿ ಚಿತ್ರನಟರನ್ನು ಮೀರಿಸಿದ ಕ್ರಿಕೆಟಿಗರು: ನಟ ಚೇತನ್ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...