ಸರ್ಕಾರದ ಹೊಸ ದಿವಾಳಿತನದ ಕಾನೂನನು ಕ್ರಮಗಳು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿದೆ ಎಂದು ಮಾಜಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.
ಫೆಬ್ರವರಿ 2018 ರಲ್ಲಿ ಆರ್‌ಬಿಐ ಹೊರಡಿಸಿದ ಸುತ್ತೋಲೆಯ ಸುತ್ತ ಈ ಬಿರುಕು ಕೇಂದ್ರೀಕೃತವಾಗಿತ್ತು. ಸಾಲದ ಮರುಪಾವತಿ ವಿಳಂಬವಾದಾಗ ಬ್ಯಾಂಕುಗಳು ಸಾಲಗಾರರನ್ನು ತಕ್ಷಣವೇ ಡೀಫಾಲ್ಟರ್ ಎಂದು ವರ್ಗೀಕರಿಸಲು ಒತ್ತಾಯಿಸಿತ್ತು. ಡೀಫಾಲ್ಟ್ ಕಂಪನಿಯ ಸಂಸ್ಥಾಪಕರು ದಿವಾಳಿತನ ಹರಾಜಿನ ಸಮಯದಲ್ಲಿ ತಮ್ಮ ಸಂಸ್ಥೆಗಳನ್ನು ಮರಳಿ ಖರೀದಿಸಲು ಪ್ರಯತ್ನಿಸುವುದನ್ನು ತಡೆಯಲಾಗಿತ್ತು.
ಸೆಪ್ಟೆಂಬರ್ 2016 ರ ನಡುವೆ ಆರ್‌ಬಿಐ ಮುಖ್ಯಸ್ಥರಾಗಿದ್ದು, 2018 ರ ಡಿಸೆಂಬರ್‌ನಲ್ಲಿ ಅನಿರೀಕ್ಷಿತ ರಾಜೀನಾಮೆ ನೀಡಿದ್ದ ಉರ್ಜಿತ್ ಪಟೇಲ್ ಶುಕ್ರವಾರ ಬಿಡುಗಡೆಯಾದ ಅವರ ಪುಸ್ತಕದಲ್ಲಿ “ಶಾಸನದ ಬಗ್ಗೆ ಸರ್ಕಾರವು ಉತ್ಸಾಹವನ್ನು ಕಳೆದುಕೊಂಡಂತೆ ಕಾಣುತ್ತದೆ” ಎಂದು ಹೇಳಿದ್ದಾರೆ.
ಬಹುಶಃ ಸರ್ಕಾರ, “ಭವಿಷ್ಯದ ಡೀಫಾಲ್ಟರ್ಗಳೇ ಹುಷಾರಾಗಿರಿ, ನಿಮ್ಮ ವ್ಯವಹಾರವನ್ನು ನೀವು ಕಳೆದುಕೊಳ್ಳಬಹುದು” ಎಂಬ ಅಭಿಪ್ರಾಯಪಟ್ಟಂತಿದೆ ಎಂದು ಪಟೇಲ್ ಹೇಳಿದರು.
ಅವರ ಅಭಿಪ್ರಾಯಗಳು ಆರ್‌ಬಿಐ ಮತ್ತು ಸರ್ಕಾರದ ನಡುವಿನ ಜಗಳಕ್ಕೆ ಮೊದಲ ನೋಟವನ್ನು ನೀಡುತ್ತವೆ.
ಓದಿ:
ಆರ್‌ಬಿಐನಿಂದ ಹಣ ಕದಿಯುವುದರಿಂದ ಆರ್ಥಿಕ ಕುಸಿತ ತಡೆಯಲಾಗುವುದಿಲ್ಲ: ರಾಹುಲ್ ಗಾಂಧಿ ಟೀಕೆ


