Homeಚಳವಳಿಅಗಲಿದ ಮಲೆನಾಡಿನ ಮೌನಿ ಹೋರಾಟಗಾರ ಹೂವಪ್ಪ....

ಅಗಲಿದ ಮಲೆನಾಡಿನ ಮೌನಿ ಹೋರಾಟಗಾರ ಹೂವಪ್ಪ….

- Advertisement -
- Advertisement -

ಪ್ರಭುತ್ವದ ಮುಳ್ಳು-ಕಂಟೆಗಳಿಗೆ ಎದುರಾಗಿ ಸೆಣೆಸಿದ ಹೂವಿನಂತಹ ಹೃದಯದ ಹೂವಪ್ಪ ವಕೀಲರು ನಿನ್ನೆ ನಿಧನ ಹೊಂದಿದ್ದಾರೆ. ಕೊರೋನಾದಿಂದ ಚೇತರಿಸಿಕೊಂಡ ಅವರು ನಂತರ ಹೃದಯ ಸಂಬಂಧಿ ಕಾಯಿಲೆಗೆ ಪ್ರಾಣ ಬಿಟ್ಟಿದ್ದಾರೆ.

‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ತುಂಗಾ ಉಳಿಸಿ ಚಳುವಳಿ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಬಾಬಾ ಬುಡನ್‌ಗಿರಿ ಹೋರಾಟದಲ್ಲಿ ಹೂವಪ್ಪ ತುಂಬ ಕ್ರಿಯಾಶೀಲರಾಗಿದ್ದರು. ಹೋರಾಟಗಾರರ ಮೇಲೆ ಪ್ರಭುತ್ವ ಹಾಕುತ್ತಿದ್ದ ನಕಲಿ ಕೇಸುಗಳ ವಿರುದ್ಧ ಒಬ್ಬ ವಕೀಲರಾಗಿ ಅವರು ತುಂಬ ಕೆಲಸ ಮಾಡಿದ್ದಾರೆ’ ಎನ್ನುತ್ತಾರೆ ಅವರನ್ನು ಬಹು ವರ್ಷಗಳಿಂದ ಬಲ್ಲ ಹೋರಾಟದ ಒಡನಾಡಿ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್..

ಅತ್ಯಂತ ಸಂಭಾವಿತರಾಗಿದ್ದ ಹೂವಪ್ಪ ಯಾರಿಗೂ ಎಂದಿಗೂ ಕೇಡು ಬಗೆಯಲಿಲ್ಲ. ಸದಾ ನಗುಮೊಗದಲ್ಲೇ ವಿರೋಧಿಗಳನ್ನು ಮಾತನಾಡಿಸುತ್ತಿದ್ದ ಮನುಷ್ಯ. ಆದರೂ ಕೊರೋನಾ ಅವರನ್ನು ನುಂಗಿಕೊಂಡು ಬಿಟ್ಟಿದೆ. ಅದಕ್ಕೆ ಇನ್ನೆಷ್ಟು ಸಾವುಗಳು ಬೇಕೋ? ಹೊಣೆಗೇಡಿ ಸರ್ಕಾರಗಳು ತಂದಿಟ್ಟ ಆಪತ್ತಿಗೆ ಹೋರಾಟದ ಗೆಳೆಯ ಹೂವಪ್ಪ ಕೂಡ ಬಲಿಯಾಗಿ ಬಿಟ್ಟ ಎನ್ನುವುದನ್ನು ಅತ್ಯಂತ ರೋಷದಿಂದಲೇ ಹೇಳುತ್ತಿದ್ದೇನೆ. ಕಳೆದ 25 ವರ್ಷ ಜನಪರ ಕ್ರಾಂತಿಕಾರಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಗೆಳೆಯ ಹೂವಪ್ಪ. ದೊಡ್ಡ ಜನಪ್ರಿಯತೆ ಇದ್ದಾಗಿಯೂ ಯಾವುದೇ ರೀತಿಯ ರಾಜಕಾರಣದ ಆಮಿಷಕ್ಕೂ ಬಲಿಯಾಗದೆ ಪ್ರಾಮಾಣಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಪ್ರಾಮಾಣಿಕ ಹೋರಾಟಗಾರ ಅನ್ನೋ ಮಾತಿಗೆ ಮುಕುಟ ಪ್ರಾಯವೇ ಆಗಿದ್ದರು ಹೂವಪ್ಪ. ಬಡ ವಕೀಲನಾಗಿ ಸದಾ ಬಡವರ ಪರ ದುಡಿಯುವ ವ್ಯಕ್ತಿಯಾಗಿದ್ದರು. ಚಿಕ್ಕಮಗಳೂರು ಸುತ್ತ ಮುತ್ತ ಚಳುವಳಿಯ ಕಾರ್ಯಕರ್ತರು ಪೋಲಿಸ್ ಏನ್ಕೌಂಟರ್‌ಗಳಿಗೆ ಒಳಗಾದಾಗ ತನ್ನ ಜೊತೆಗಿನ ಸಂಗಾತಿಗಳನ್ನು ಕರೆದಕೊಂಡು ಹೋಗಿ ಸುಳ್ಳು ಏನ್ಕೌಂಟರ್‌ಗೆ ಸಂಬಂಧಿಸಿ ಸತ್ಯ ಶೋಧನೆ ಬಯಲಿಗೆಳೆಯಲು ಪ್ರಯತ್ನಿಸಿದ್ದರು. ಆಮೂಲಕ ಚಿಕ್ಕಮಗಳೂರಿನ ಈ ಪುಟ್ಟ ಲಾಯರ್, ಜನಪರ ಕ್ರಾಂತಿಕಾತಿ ಲಾಯರ್ ಎಂದೇ ಖ್ಯಾತಿ ಹೊಂದಿದ್ದರು’ ಎಂದು ಅವರನ್ನು ಹತ್ತಿರದಿಂದ ಬಲ್ಲ ದೇಶಾದ್ರಿ ಹೊಸ್ಮನೆ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ನಾಡಿನ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗು ದಮನಿತರ ಮೇಲಿನ ಅನ್ಯಾಯಗಳ ವಿರುದ್ಧ ಅವರು ನಿಂತಿದ್ದರು. ಅದಕ್ಕಾಗಿ ರಾಜ್ಯದ ಹಲವೆಡೆಗಳಲ್ಲಿ ಓಡಾಡಿದ್ದರು. ಸರ್ಕಾರದ ಪಡೆಗಳು ಹೋರಾಟನಿರತ ಜನರ ಮೇಲೆ ನಡೆಸಿದ್ದ ಎನ್ ಕೌಂಟರ್ ಹೆಸರಿನ ಕಗ್ಗೊಲೆಗಳನ್ನು ಜನರೆದುರು ಸತ್ಯಶೋಧನೆಗಳ ಮೂಲಕ ಬಯಲುಗೊಳಿಸುವ ಕಾರ್ಯ ಮಾಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ದನಿಯೆತ್ತುತ್ತಾ ಬಂದವರಾಗಿದ್ದರು. ನಾಡಿನಲ್ಲಿ ನಡೆದ ಹಲವಾರು ಅಕ್ರಮ, ದೌರ್ಜನ್ಯಗಳ ವಿರುದ್ಧ ಸತ್ಯಶೋಧನಾ ತಂಡಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು’ ಎಂದು ‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ತುಂಗಾ ಉಳಿಸಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ನಂದಕುಮಾರ್ ಕೆ.ಎಸ್. ತಮ್ಮ ಫೇಸ್‌ಬುಕ್‌ನಲ್ಲಿ ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಳಸೇಶ್ವರ ಇನಾಮು ಭೂಮಿ, ಮೀಸಲು ಅರಣ್ಯ, ರಕ್ಷಿತಾರಣ್ಯ ಹೆಸರಿನಲ್ಲಿ ಆದಿವಾಸಿ ಮತ್ತಿತರ ಜನಸಾಮಾನ್ಯರ ಎತ್ತಂಗಡಿಗಳನ್ನು, ಅಪಾಯಕಾರಿ ಪರಿಸರ ವಿನಾಶಗಳನ್ನು, ಭಾರಿ ಕಾರ್ಪೋರೇಟುಗಳ ಕೊಳ್ಳೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಜನರ ಹೋರಾಟದ ಭಾಗವಾಗಿ ಸಕ್ರಿಯರಾಗಿ ಕೆಲಸ ಮಾಡಿದ್ದರು ಹೂವಪ್ಪ.

ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಹೇಳಲಾಗದ ಹತ್ತು ಹಲವು ಪ್ರತ್ಯಕ್ಷ ಹಾಗೂ ಪರೋಕ್ಷ ದೌರ್ಜನ್ಯ, ಅಪಮಾನ ಸಹಿಸಿ ಹೋರಾಡುತ್ತಾ ಬಹಳ ಕಷ್ಟದಿಂದ ಶಿಕ್ಷಿತರಾಗಿ ವಕೀಲರಾದವರು ಹೂವಪ್ಪ.

ಹೂವಪ್ಪ ದುಡಿಯುವ ಜನರ ಸಂಗಾತಿಯಾಗಿದ್ದರು. ದಲಿತ ದಮನಿತರ ನೋವಿನ ದನಿಯಾಗಿದ್ದರು, ಸಮಾಜ ಬದಲಾವಣೆಯ ಕ್ರಾಂತಿಕಾರಿ ಪ್ರಜಾತಾಂತ್ರಿಕ ಆಶೋತ್ತರಗಳನ್ನು ಹೃದಯದಲ್ಲಿಟ್ಟು ಕೊಂಡ ಸಹೃದಯ ಹೋರಾಟಗಾರರಾಗಿದ್ದರು. ಜಾತಿ ವಿನಾಶದ ಕಾರ್ಯಕರ್ತರಾಗಿದ್ದ ಹೂವಪ್ಪ. ವರ್ಗ, ಜಾತಿ, ಲಿಂಗ, ವರ್ಣಭೇಧಗಳ ವಿರುದ್ಧವಿದ್ದ ಮಾನವೀಯ ಕಳಕಳಿಯವರಾಗಿದ್ದರು.

ದುಡಿಯುವ ಜನತೆ ತನ್ನ ಒಂದು ದನಿಯನ್ನು ಕಳೆದುಕೊಂಡಿದೆ. ದಲಿತ, ಆದಿವಾಸಿ, ಅಲ್ಪ ಸಂಖ್ಯಾತ, ದಮನಿತರು ತಮ್ಮ ಹೋರಾಟದ ಸಂಗಾತಿಯನ್ನು ಕಳೆದುಕೊಂಡಿದ್ದಾರೆ.
ಅವರ ಬಾಳ ಸಂಗಾತಿ, ಪುಟ್ಟ ಮಗಳು ಹಾಗೂ ಕುಟುಂಬ ವರ್ಗದವರ ದುಃಖದಲ್ಲಿ ಪಾಲ್ಗೊಳ್ಳುತ್ತಾ ಭೌತಿಕವಾಗಿ ಅಗಲಿದ ಹೂವಪ್ಪರಿಗೆ ಶ್ರದ್ದಾಂಜಲಿ ಸಲ್ಲಿಸೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಜನಪರ ಹೋರಾಟಗಾರ, ವಕೀಲ ಹೂವಪ್ಪ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಾಮ್ರೇಡ್ ಹೂವಪ್ಪ ಅವರ ಜನಪರ ಕಾಳಜಿಯ ಬಗ್ಗೆ ಈಗ ತಾನೆ ಗೊತ್ತಾಗಿದೆ.
    *ಹೋರಾಟದ ಒಡನಾಡಿ ಹೂವಪ್ಪ* ಅವರಿಗೆ ಹೃದಯ ಪೂರ್ವಕ ಶ್ರದ್ಧಾಂಜಲಿ.

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...