ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ. ಆಕ್ಸಿಜನ್ ಇರುವ ಹಾಸಿಗೆಗಳು ಕೊರತೆಯಾಗುತ್ತಿರುವುದರಿಂದ ಕೊರೊನಾ ರೋಗಿಗಳ ಕುಟುಂಬಗಳು ಹತಾಶರಾಗುತ್ತಿದ್ದಾರೆ. ಗುರುವಾರ ರೋಗಿಯೊಬ್ಬರ ಪತ್ನಿ ತೀವ್ರವಾಗಿ ಅನಾರೋಗ್ಯಕ್ಕೊಳಗಾದ ತನ್ನ ಗಂಡನನಿಗೆ ಆಸ್ಪತ್ರೆಯ ಹಾಸಿಗೆ ಸಿಗದೆ ಇರುವುದರಿಂದ ಹತಾಶರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಅಧಿಕೃತ ನಿವಾಸದ ಹೊರಗೆ ಧರಣಿ ಪ್ರತಿಭಟನೆ ನಡೆಸಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದು ಜಗಜ್ಜಾಹೀರಾಗಿದೆ. ಇದು ರಾಷ್ಟ್ರೀಯ ಸುದ್ದಿಯಾಗಿದ್ದು, ಕರ್ನಾಟಕದ ಸ್ಥಿತಿ ದೇಶದಾದ್ಯಂತ ಕಳವಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!
ಮಹಿಳೆಯ ಪ್ರತಿಭಟನೆ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳ ಗಮನವನ್ನು ಸೆಳೆದಿದ್ದು, ಅವರ ಪತಿಗೆ ಹಾಸಿಗೆಯನ್ನು ವ್ಯವಸ್ಥೆಗೊಳಿಸಿ, ಆಂಬ್ಯುಲೆನ್ಸ್ ನೀಡಲಾಗಿತ್ತು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಅವರು ನಿಧನರಾಗಿದ್ದಾರೆ. ಮೃತರನ್ನು ಬೆಂಗಳೂರು ಹೊರವಲಯದಲ್ಲಿರುವ ರಾಮೋಹಳ್ಳಿ ನಿವಾಸಿ ಎಂದು ಗುರುತಿಸಲಾಗಿದೆ. ಈ ಕುಟುಂಬವು ಹತಾಶರಾಗಿ ಮುಖ್ಯಮಂತ್ರಿಯ ಮನೆ ಬಾಗಿಲಿಗೆ ತಲುಪುವುದಕ್ಕಿಂತ ಮುಂಚೆ ಸುಮಾರು 12 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಹಾಸಿಗೆಗಳನ್ನು ಹುಡುಕಿದೆ ಎಂದು ವರದಿಯಾಗಿದೆ.
ಗುರುವಾರ ನಡೆದ ಮತ್ತೊಂದು ಘಟನೆಯಲ್ಲಿ, ಕೊರೊನಾ ರೋಗಿಯ ಕುಟುಂಬವು ವಿಧಾನ ಸೌಧದ ಹೊರಗೆ ಪ್ರತಿಭಟನೆ ನಡೆಸಿತು. ರೋಗಿಯೊಬ್ಬರ ಮಗಳು ತನ್ನ ತಾಯಿಯ ಸ್ಥಿತಿ ಹದಗೆಡುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರೂ ಅವರಿಗೆ ಆಸ್ಪತ್ರೆಯ ಹಾಸಿಗೆ ಲಭ್ಯವಾಗಿರಲಿಲ್ಲ.
ನಂತರ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ಮಧ್ಯಪ್ರವೇಶಿಸಿ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿದರು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. ಈ ಕುಟುಂಬ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರು ಕೂಡಾ ಆಗಮಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ


