Homeಮುಖಪುಟಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

ಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

- Advertisement -
- Advertisement -

| ಡಾ.ವಾಸು ಎಚ್.ವಿ |

ಕುಖ್ಯಾತ ಮಾಫಿಯಾ ಡಾನ್, ಭಯೋತ್ಪಾದಕ ಕೃತ್ಯಗಳ ಆರೋಪಿ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬೇನಾಮಿ ಒಡೆತನದ್ದೆಂದು ಹೇಳಲಾಗುತ್ತಿರುವ ಜೆಟ್ ಏರ್‍ವೇಸ್ ಸಂಸ್ಥೆ ಆರ್ಥಿಕವಾಗಿ ಕುಸಿದು ಕುಂತಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 16,000 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಗಗನದಲ್ಲಿ ಓಡಾಡುತ್ತಿದ್ದ ಪೈಲಟ್‍ಗಳು, ಗಗನಸಖಿಯರು ಸೇರಿದಂತೆ ನೂರಾರು ಜನ ಅಕ್ಷರಶಃ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿ, ‘ನಮ್ಮ ಗೋಳನ್ನು ಕೇಳಿ, ಉದ್ಯೋಗ ಉಳಿಸಿಕೊಡಿ’ ಎಂದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ದಾವೂದ್ ಬೇನಾಮಿ ಒಡೆತನದ ಜೆಟ್ ಏರ್ ವೇಸ್

ಕಳೆದ ಅಕ್ಟೋಬರ್‍ನಿಂದ ಕಡಿಮೆಯೆಂದರೂ 2,000 ಉದ್ಯೋಗಿಗಳು ಬಿಟ್ಟು ಹೋಗಿದ್ದಾರೆ. ಆ ನಂತರವೂ 1,500 ಪೈಲಟ್‍ಗಳು, 3,000 ಗಗನಸಖಿಯರನ್ನೊಳಗೊಂಡ ವಿಮಾನ ಸಿಬ್ಬಂದಿ, 5,000 ಭೂಕಾರ್ಯಾಚರಣಾ ಸಿಬ್ಬಂದಿ, 2,000 ತಾಂತ್ರಿಕ ಸಿಬ್ಬಂದಿ ಮತ್ತು 3,000 ಆಡಳಿತ ಅಧಿಕಾರಿಗಳು ಸೇರಿ 14,500 ಜನ ಸಿಬ್ಬಂದಿಗಳು ಉಳಿದುಕೊಂಡಿದ್ದರು. ಇತರ ವಿಮಾನಯಾನ ಕಂಪೆನಿಗಳಿಗೆ ಹೋಲಿಸಿದರೆ ಹೆಚ್ಚೇ ಸಂಬಳ ಕೊಡುತ್ತಿದ್ದ ಜೆಟ್ ಏರ್‍ವೇಸ್‍ನಲ್ಲಿದ್ದ ಇಷ್ಟು ಜನರು ಒಮ್ಮೆಗೇ ಕೆಲಸ ಕಳೆದುಕೊಳ್ಳುವುದೆಂದರೆ, ಅದು ಉಂಟು ಮಾಡುವ ತಲ್ಲಣವನ್ನು ಯಾರೂ ಊಹಿಸಬಹುದು.


ಇವೆಲ್ಲಾ ಸಂಖ್ಯೆಗಳು. ಆದರೆ, ಯಾವುದಾದರೂ ಒಂದು ಕಡೆ ಉದ್ಯೋಗವನ್ನು ನಂಬಿಕೊಂಡು ಕೆಲಸ ಮಾಡುವ ಉದ್ಯೋಗಿಗೆ ಆ ಉದ್ಯೋಗ ಇದ್ದಕ್ಕಿದ್ದಂತೆ ಇಲ್ಲವಾಗಿಬಿಟ್ಟರೆ ಅವರ ಮಟ್ಟಿಗೆ ಅದೊಂದು ಆಘಾತವೇ ಆಗಿರುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ಇನ್ನೊಂದು ಕೆಲಸ ಸಲೀಸಾಗಿ ಸಿಗುವಂತಿದ್ದರೆ ಆ ಮಾತು ಬೇರೆ. ಈಗ ಸ್ಪೈಸ್‍ಜೆಟ್‍ನವರು, ಇಲ್ಲಿ ಕೆಲಸ ಕಳೆದುಕೊಂಡ 100 ಜನ ಪೈಲಟ್‍ಗಳು ಮತ್ತು 400 ಜನ ವಿಮಾನ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗೆ ತಮ್ಮಲ್ಲಿ ಉದ್ಯೋಗ ಕೊಟ್ಟಿದ್ದಾರೆ. ಜೆಟ್‍ನಲ್ಲಿ ಪಡೆಯುತ್ತಿದ್ದ ಸಂಬಳಕ್ಕೆ ಹೋಲಿಸಿದರೆ ಇಲ್ಲಿ ಶೇ.25ರಷ್ಟು ಸಂಬಳ ಮಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಣಾಮವನ್ನು ಅಂದಾಜು ಮಾಡಬಹುದು.

ಜೆಟ್ ಏರ್‍ವೇಸ್‍ಅನ್ನು ಬೇರೆ ಯಾರಾದರೂ ಕೊಂಡುಕೊಳ್ಳಲಿ, ಎಸ್‍ಬಿಐ ಈ ಕಂಪೆನಿಗೆ ಸಾಲ ಕೊಡಲಿ, ಸರ್ಕಾರವು ತುರ್ತು ಪರಿಹಾರ ನಿಧಿಯನ್ನು ಕೊಟ್ಟು ಸಂಬಳದ ಬಾಕಿ (ಈಗಾಗಲೇ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲ) ತೀರಿಸಲಿ ಹೀಗೆ ಹಲವು ಬೇಡಿಕೆಗಳನ್ನು ಸಿಬ್ಬಂದಿ ಮುಂದಿಟ್ಟಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಎಲ್ಲರಿಗೂ ಅವರ ಬೇಡಿಕೆ ತಲುಪಿದೆ. ಇವುಗಳಲ್ಲಿ ಕೆಲವನ್ನು ಸರ್ಕಾರ, ಬ್ಯಾಂಕ್‍ಗಳು ಪರಿಶೀಲಿಸುತ್ತಲೂ ಇವೆ.

ಈ ರೀತಿಯ ಸಹಾಯವನ್ನು ಸರ್ಕಾರ ಮಾಡಬೇಕಾಗುತ್ತದೆ. ಈ ಸಿಬ್ಬಂದಿಯಲ್ಲಿ ಪೈಲಟ್‍ಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ವೇತನವಿದ್ದರೆ, ಮೂರು ಲಕ್ಷಕ್ಕೂ ಹೆಚ್ಚು ತಿಂಗಳ ಕಂತು ಪಾವತಿ ಮಾಡುವಂತಹ ಸಾಲಗಳನ್ನು ಮಾಡಿಕೊಂಡಿರಬಹುದು. ಇನ್ನು ಕೆಳಹಂತದವರಿಗೆ 50 ಸಾವಿರ ಸಂಬಳವಿದ್ದರೆ, ಮನೆ ಸಾಲವೂ ಒಳಗೊಂಡಂತೆ ಹಲವು ಇಎಂಐಗಳನ್ನು ಪಾವತಿಸುವ ಕಷ್ಟ ಅವರಿಗಿರಬಹುದು. ಹಾಗಾಗಿ ಇದ್ದಕ್ಕಿದ್ದಂತೆ ನಾಲ್ಕೈದು ತಿಂಗಳ ವೇತನವೇ ಇಲ್ಲದಿದ್ದರೆ ಆಕಾಶವು ನೆಲಕ್ಕೆ ಮತ್ತು ಪಾತಾಳಕ್ಕೆ ಕುಸಿದಂತೆ ಆಗುವ ಎಲ್ಲಾ ಸಾಧ್ಯತೆ ಇದ್ದೇ ಇರುತ್ತದೆ. ಇವರಲ್ಲೇ ಕೆಲವರು ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗಿಲ್ಲ ಎಂದು ಗೋಳಾಡಿದ್ದನ್ನು ನೋಡಬಹುದು. ಇವರೆಲ್ಲರ ಕಷ್ಟಕ್ಕೆ ಮರುಗಬೇಕಿದೆ. ಈ ಕಂಪೆನಿ ದಾವೂದ್ ಇಬ್ರಾಹಿಂನ ಬೇನಾಮಿ ಎಂಬುದೂ ಒಂದು ಆರೋಪ (ಆರೋಪಕ್ಕೆ ಎಷ್ಟೇ ಗಟ್ಟಿ ಕಾರಣಗಳಿದ್ದರೂ, ಅದನ್ನು ಪ್ರತ್ಯೇಕವಾಗಿ ನಿಭಾಯಿಸಬೇಕು).

ಆದರೆ, ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದು – ಯಾವುದೇ ಕಂಪೆನಿಯು ಇದ್ದಕ್ಕಿದ್ದಂತೆ ಕಾರ್ಯಾಚರಣೆ ನಿಲ್ಲಿಸಿ ಕೈ ಎತ್ತುವುದಾದರೆ ಅದಕ್ಕೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲವೇ? ಲೇಆಫ್ ಕಾನೂನುಗಳು ಈಗ ಹೇಗೂ ಇವೆ. ಅಂತಹ ಸಂದರ್ಭದಲ್ಲಿ ಸಂಬಂಧಿಸಿದ ಮಾಲೀಕರ ಇತರ ಆಸ್ತಿಪಾಸ್ತಿಗಳನ್ನು ಬಳಸಿ ಸಿಬ್ಬಂದಿಗೆ ಪರಿಹಾರ ಕಲ್ಪಿಸಲು ಏಕೆ ಸಾಧ್ಯವಿಲ್ಲ? ಲಾಭ ಬಂದಾಗ ಮಾತ್ರ ಹೆಚ್ಚಿನ ಪಾಲು ಕಬಳಿಸಬೇಕು, ನಷ್ಟವಾದರೆ ಸಿಬ್ಬಂದಿ ಅಥವಾ ಸಾರ್ವಜನಿಕ ಬ್ಯಾಂಕು ಅಥವಾ ಸರ್ಕಾರ ಏಕೆ ಹೊರಬೇಕು? ಈ ವಿಚಾರ ಚರ್ಚೆಯಾಗುತ್ತಲೇ ಇಲ್ಲ. ವಿಜಯ್ ಮಲ್ಯನ ಕಿಂಗ್‍ಫಿಷರ್ ಏರ್‍ಲೈನ್ಸ್ ನಷ್ಟಕ್ಕೀಡಾದಾಗಲೂ ಆತ ಕೇಳಿದ್ದು, ‘ನನ್ನ ಐಷಾರಾಮಿ ಏರ್‍ಲೈನ್ಸ್ ನಷ್ಟಕ್ಕೀಡಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ?’ ಎಂಬ ಧಮಕಿ! ಆತನ ಇನ್ನೂ ಎಷ್ಟೋ ಬೇರೆ ಬೇರೆ ಆಸ್ತಿಗಳು ಆಗಲೂ ಇದ್ದವು, ಈಗಲೂ ಇವೆ. ದಕ್ಷಿಣ ಆಫ್ರಿಕಾದಲ್ಲಿರುವ ಸ್ವಂತ ಕಾಡನ್ನೂ ಒಳಗೊಂಡು (ರೆಸಾರ್ಟ್ ಅಲ್ಲ, ಕಾಡು!!). ಹಾಗೆಯೇ ಜೆಟ್ ಏರ್‍ವೇಸ್‍ನ ನರೇಶ್ ಗೋಯೆಲ್‍ನ ಆಸ್ತಿಪಾಸ್ತಿಯ ವಿವರಗಳು ಸಾರ್ವಜನಿಕವಾಗಬೇಕು. ಉಳಿದ ವ್ಯವಹಾರಗಳೂ ಸಹಾ ಪಾರದರ್ಶಕವಾಗಿರಬೇಕು. ಸಾಧ್ಯವಾದಷ್ಟೂ ಅವುಗಳಿಂದಲೇ ಸಿಬ್ಬಂದಿ ಅಥವಾ ಸಿಬ್ಬಂದಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ ಸರ್ಕಾರ ಅಥವಾ ಬ್ಯಾಂಕಿಗೆ ಋಣ ಸಂದಾಯ ಆಗಬೇಕು.


ಎರಡು, ವಿಮಾನಯಾನ ಸಿಬ್ಬಂದಿಯ ಕುರಿತು ಮಾಧ್ಯಮಗಳು, ಸರ್ಕಾರ, ಬ್ಯಾಂಕು ಎಲ್ಲರೂ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಖಾಸಗಿ ಕಂಪೆನಿಗಳ ಕಾರ್ಮಿಕರು, ದಿನನಿತ್ಯವೂ ಖಾಸಗಿ ಗುತ್ತಿಗೆ ಕಾರ್ಮಿಕರು ಮತ್ತು ಸರ್ಕಾರೀ ಗುತ್ತಿಗೆ ನೌಕರರು ಬೇಕಾಬಿಟ್ಟಿ ಕೆಲಸ ಕಳೆದುಕೊಳ್ಳುತ್ತಿದ್ದಾರಲ್ಲಾ, ಅವರ ಬಗ್ಗೆ ಈ ಥರದಲ್ಲಿ ಯಾರೂ ಕಣ್ಣೀರು ಮಿಡಿಯುವುದಿಲ್ಲವಲ್ಲಾ ಏಕೆ? ಅವರ ಜೀವನ ಕಡಿಮೆ ಬೆಲೆಯುಳ್ಳದ್ದಾ? ಅಪಘಾತ ಪರಿಹಾರ ಕೊಡುವಾಗಲೂ ಬೀದಿಯಲ್ಲಿ ಸತ್ತವರಿಗೊಂದು ಬೆಲೆ, ವಿಮಾನದಲ್ಲಿ ಸತ್ತವರಿಗೊಂದು ಪರಿಹಾರ ನಿಗದಿಯಾಗುತ್ತದಲ್ಲಾ ಹಾಗೇನಾ ಇದೂ?

ಇರಲಿ, ಪೈಲಟ್‍ಗೂ ಗುತ್ತಿಗೆ ಕಾರ್ಮಿಕರಿಗೂ ಒಂದೇ ಸಂಬಳ ಕೊಡಿ ಎಂಬುದೂ ಇಲ್ಲಿನ ಚರ್ಚೆಯಲ್ಲ. ಉದ್ಯೋಗ ಕಳೆದುಕೊಳ್ಳುವುದರ ವಿಚಾರದಲ್ಲಿ ಪೈಲಟ್‍ಗೆ ಇರುವ ಕಷ್ಟ ಹೇಗೆ ಕಷ್ಟವೋ, ಗುತ್ತಿಗೆ ನೌಕರರಿಗೂ ಅಂತಹುದೇ ಕಷ್ಟ ಇರುವುದಿಲ್ಲವಾ? ಇಲ್ಲಿ, ಪೈಲಟ್‍ಗಿದ್ದದ್ದು ಖಾಯಂ ಕೆಲಸ, ಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಅಂತಹ ಗ್ಯಾರಂಟಿ ಇರುವುದಿಲ್ಲ ಎಂಬ ವಾದವನ್ನು ತರಬಾರದು. ಗುತ್ತಿಗೆ ನೌಕರಿ ಎನ್ನುವುದೇ ದೊಡ್ಡ ಬೋಗಸ್. ಖಾಯಂ ನೌಕರಿಯನ್ನು ತಪ್ಪಿಸಲು ಕಾನೂನಿಗೆ ವಿರುದ್ಧವಾಗಿ ಜಾರಿಗೆ ತಂದಿರುವ, ವರ್ಷಾನುಗಟ್ಟಲೇ ದುಡಿಸಿಕೊಳ್ಳುವ ಪದ್ಧತಿ ಗುತ್ತಿಗೆಯದ್ದಾಗಿದೆ.

ಅಂತಿಮವಾಗಿ ಇಷ್ಟು ಹೇಳಬಹುದು. ಜೆಟ್ ಏರ್‍ವೇಸ್‍ನ ಸಿಬ್ಬಂದಿಯ ನೆರವಿಗೆ ಸರ್ಕಾರವು ನಿಲ್ಲಲಿ, ಅವರ ತಲ್ಲಣವನ್ನು ಕೊನೆಗೊಳಿಸಲಿ. ಅದೇ ರೀತಿ ದೇಶದ ಎಲ್ಲೆಡೆ ಏಕಾಏಕಿ ಕೆಲಸ ಕಳೆದುಕೊಳ್ಳುವ ಎಲ್ಲರ ಪರವಾಗಿಯೂ ದುಡಿಸಿಕೊಳ್ಳುವ ಕಂಪೆನಿ, ಮಾಲೀಕರು, ಸರ್ಕಾರ ನಿಲ್ಲಬೇಕು.

(ಲೇಖಕರು, ಗುತ್ತಿಗೆ ನೌಕರರ ಸಂಘಟನೆಯ ಮುಂಚೂಣಿ ವ್ಯಕ್ತಿ.
ಲೇಖನದ ಅಭಿಪ್ರಾಯಗಳು ಲೇಖಕರವು. ಅವು ನಾನುಗೌರಿ.ಕಾಂ ವೆಬ್‍ತಂಡದ ಅಭಿಪ್ರಾಯಗಳು ಆಗಿರಲೇಬೇಕೆಂದಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...