ಮೋದಿ ಸರ್ಕಾರದ ಶೂನ್ಯ ವ್ಯಾಕ್ಸೀನ್ ನೀತಿಯು ಭಾರತ ಮಾತೆಯ ಎದೆ ಬಗೆಯುವ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ದ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ನಿರ್ವಹಣೆಯನ್ನು ಕೇಂದ್ರವು ಕಲಪೆಯಾಗಿ ಮಾಡುತ್ತಿರುವ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಇತ್ತೀಚೆಗೆ ಕೇಂದ್ರದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಇಂದು ಹಿಂದಿಯಲ್ಲಿ ಟ್ವೀಟ್ ರಾಹುಲ್ ಗಾಂಧಿ, “ಮೋದಿ ಸರ್ಕಾರದ ಶೂನ್ಯ ವ್ಯಾಕ್ಸೀನ್ ಭಾರತ ಮಾತೆಯ ಎದೆ ಬಗೆಯುವ ಕೆಸಲ ಮಾಡುತ್ತಿದೆ. ದುಃಖದ ಸತ್ಯ” ಎಂದು ಹೇಳಿದ್ದಾರೆ.
मोदी सरकार की ज़ीरो वैक्सीन नीति भारत माता के सीने में ख़ंजर का काम कर रही है।
दुखद सच।
— Rahul Gandhi (@RahulGandhi) May 31, 2021
ಇದು ಬೆಳಿಗ್ಗೆ ಟ್ವಿಟ್ ಮಾಡಿದ್ದ ಅವರು, ಪ್ರಧಾನಿ ಮೋದಿ ಅಹಂಕಾರದಿಂದ 97% ದಷ್ಟು ಭಾರತೀಯರು ತಮ್ಮ ಆದಾಯದ ಇಳಿಕೆಯನ್ನು ಕಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಏಕಾಏಕಿ ಎತ್ತಂಗಡಿ: ಬೆಂಗಳೂರಿನಲ್ಲಿ ನೆಲೆಯಿಲ್ಲದೆ ಅಲೆಯುತ್ತಿರುವ 15 ಬಡ ಕುಟುಂಬಗಳು
ಅವರು ತನ್ನ ಟ್ವೀಟ್‌ನಲ್ಲಿ, ಕೊರೊನಾ ಎರಡನೆ ಅಲೆಯು 90% ಭಾರತೀಯರನ್ನು ಬಡವರನ್ನಾಗಿ ಮಾಡಿದೆ ಎಂಬ ವರದಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮತ್ತು ಈ ಬಡತನ್ನಕ್ಕೆ “ಒಂದನೆ ಕಾರಣ ಒಬ್ಬ ಮತ್ತು ಮನುಷ್ಯ ಮತ್ತು ಅಹಂಕಾರ, ಎರಡನೆ ಕಾರಣ ಒಂದು ವೈರಸ್ ಮತ್ತು ಅದರ ರೂಪಾಂತರ” ಎಂದು ಟ್ಟೀಟ್ ಮಾಡಿದ್ದಾರೆ.
One man and his arrogance
+
One virus and its mutants pic.twitter.com/mHeaG5Bg3X
— Rahul Gandhi (@RahulGandhi) May 31, 2021
ರಾಹುಲ್ ಗಾಂಧಿ ಹಂಚಿಕೊಂಡ ವರದಿಯು, ಕೊರೊನಾ ಎರಡನೇ ಅಲೆಯು ಭಾರತದ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಸಂಬಳ ಪಡೆಯುವ ಉದ್ಯೋಗಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಇದಲ್ಲದೆ, ಶೇಕಡಾ 97 ರಷ್ಟು ಭಾರತೀಯರು ತಮ್ಮ ಆದಾಯದಲ್ಲೂ ಇಳಿಕೆ ಕಂಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಲಾಕ್‌ಡೌನ್-2020 ಸಮಯದಲ್ಲಿ 1200 ಕಿ.ಮಿ ಸೈಕಲ್ ತುಳಿದಿದ್ದ ಬಾಲಕಿಯ ತಂದೆ ಸಾವು


