ಒಕ್ಕೂಟ ಸರ್ಕಾರವು ಬುಧವಾರವಷ್ಟೇ ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಹೆಸರನ್ನು ಬದಲಿಸಿದೆ. ಯೋಜನೆಗೆ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆ ಅಥವಾ ‘ಪಿಎಂ ಪೋಷಣ್’ ಎಂದು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಮೋದಿ ನೇತೃತ್ವದ ಬಿಜೆಪಿ ಪಕ್ಷವು ಒಕ್ಕೂಟ ಸರ್ಕಾರದಲ್ಲಿ ಅಧಿಕಾರ ಹಿಡಿದ ನಂತರ, ಈ ಹಿಂದಿನ ಸರ್ಕಾರಗಳು ರೂಪಿಸಿದ್ದ ಹಲವಾರು ಯೋಜನೆಗಳ ಹೆಸರುಗಳನ್ನು ಬದಲಿಸಿದೆ. ಇದೀಗ, ಶಾಲೆಗಳಲ್ಲಿ ನೀಡುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆ ಈ ಪಟ್ಟಿಗೆ ಹೊಸದಾಗಿ ಸೇರಿಕೊಂಡಂತಾಗಿದೆ.
ಯೋಜನೆಯ ಅಡಿಯಲ್ಲಿ ‘ತಿಥಿ ಭೋಜನ’ ಎಂದು ಕರೆಯಲಾಗುವ ಕಾರ್ಯಕ್ರಮವೂ ಸೇರಿದ್ದು, ಈ ಬಗ್ಗೆ ನೆಟ್ಟಿಗರು ಒಕ್ಕೂಟ ಸರ್ಕಾರವನ್ನು ಮತ್ತು ಬಿಜೆಪಿ ಪ್ರತಿನಿಧಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಪಿಎಂ ಪೋಷಣ್’: ಬಿಸಿಯೂಟ ಯೋಜನೆಯ ಹೆಸರು ಬದಲಿಸಿದ ಒಕ್ಕೂಟ ಸರ್ಕಾರ!
ಪಿಎಂ ಪೋಷಣ್ ಅಡಿಯಲ್ಲಿ, ವ್ಯಕ್ತಿಗಳು ಅಥವಾ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಹಬ್ಬದೂಟವನ್ನು ನೀಡುವ ಕಾರ್ಯಕ್ರಮವಾಗಿದೆ ‘ತಿಥಿ ಭೋಜನ್’. ಇದರಲ್ಲಿ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ, ಹಬ್ಬಗಳಂದು ಯಾವುದೇ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಕ್ಕಳಿಗೆ ಸಿಹಿತಿಂಡಿ, ಹಣ್ಣುಗಳು ಇತ್ಯಾದಿಗಳನ್ನು ವಿತರಿಸುವುದಾಗಿದೆ.
‘ತಿಥಿ ಭೋಜನ’ ಯೋಜನೆಯನ್ನು ಗುಜರಾತ್ ರಾಜ್ಯದಲ್ಲಿ ಮೊದಲು ಆರಂಭಿಸಲಾಗಿತ್ತು. ಗುಜರಾತ್‌ನಲ್ಲಿ ಈ ಯೋಜನೆ ಯಶಸ್ವಿಯಾದ ನಂತರ, ಒಕ್ಕೂಟ ಸರ್ಕಾರವು ಈ ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿ ಆರಂಭಿಸಲು ನಿರ್ದೇಶಿಸಿದೆ.
ಕನ್ನಡದಲ್ಲಿ ‘ತಿಥಿ ಭೋಜನ’ ಎಂದರೆ, ಸಾವು ನಡೆದ ಮನೆಯಲ್ಲಿ ಕೆಲವು ದಿನಗಳು ಕಳೆದು, ಧಾರ್ಮಿಕ ಆಚರಣೆಯೊಂದಿಗೆ ಬಂಧುಮಿತ್ರಾದಿಗಳನ್ನು ಕರೆದು ಊಟ ಹಾಕಿಸುವುದಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಜನರು ಒಕ್ಕೂಟ ಸರ್ಕಾರವನ್ನು ಮತ್ತು ಬಿಜೆಪಿ ಪ್ರತಿನಿಧಿಗಳನ್ನು ವ್ಯಂಗ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: 5 ತಿಂಗಳಿಂದ ಬಾರದ ಗೌರವಧನ: ವೇತನ ಕೇಳಿದ ಬಿಸಿಯೂಟ ನೌಕರರ ಬಂಧನ
ಗೌತಮ್ ಮಾಚಯ್ಯ ಅವರು, “Tika ಉತ್ಸವದ ನಂತರ ಈಗ ತಿಥಿ ಭೋಜನ ಪ್ರಾರಂಭವಾಗಿದೆ. ದೇಶದ ವೈವಿಧ್ಯತೆಯನ್ನು ಮರೆತು ನೀವು ಒಂದು ಭಾಷೆಯನ್ನು ಮುಂದೆ ತಂದಾಗ ಇದು ಸಂಭವಿಸುತ್ತದೆ” ಎಂದು ಹೇಳಿದ್ದಾರೆ.
After Tika Utsav, it is now Tithi Bhojan. This is what happens when you push one language, forgetting the country’s diversity. pic.twitter.com/LzvQP6eYKw
— Gautham Machaiah (@GauthamMachaiah) September 30, 2021
ಪಲ್ಲವಿ ಇಡೂರು ಅವರು, “ತಿಥಿ ಭೋಜನ, ಒಂದು ದೇಶ, ಒಂದು ಭಾಷೆಯ ಅಡ್ಡ ಪರಿಣಾಮ! ಮಧ್ಯಾಹ್ನದ ಊಟದ ಯೋಜನೆಯನ್ನು ಮರುನಾಮಕರಣ ಮಾಡಲಾಗಿದೆ. ಜೊತೆಗೆ ಅದರ ಪ್ಯಾಕೇಜ್ ಅನ್ನು ವಿಚಿತ್ರವಾದ ಹೆಸರುಗಳೊಂದಿಗೆ ಉಲ್ಲೇಖಿಸಲಾಗಿದೆ !” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tithi Bhojan, side effect of “one country,one language”!
Mid day meal scheme has been renamed and it’s package mentioned with such weird names!!
#MidDayMealScheme pic.twitter.com/m9n0aWlXyZ— Pallavi Idoor (@pallaviidoor) September 30, 2021
ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಸಿಗುತ್ತಿಲ್ಲ ಪೌಷ್ಠಿಕ ಆಹಾರ: ಅಂಗನವಾಡಿ, ಬಿಸಿಯೂಟ ನೌಕರರ ಗೋಳು ಕೇಳುವವರಿಲ್ಲ
ಆನಂದ ಗುಂಡುರಾವ್ ಅವರು, “Tika ಉತ್ಸವದಿಂದ ತಿಥಿ ಭೋಜನದವರೆಗೆ. ಕನ್ನಡ ಭಾಷೆಯಲ್ಲಿ ತಿಥಿ ಭೋಜನ ಎಂದರೆ ಶ್ರಾದ್ಧದ ಊಟಕ್ಕೆ ಸಮಾನವಾಗಿದೆ” ಎಂದು ಹೇಳಿದ್ದಾರೆ.
From Tika Utsav to Tithi Bhojan. How the eagerness of government to label or relabel programmes can have hilarious consequences in local terms! In Kannada language, a Tithi Bhojan is same as a shraadh meal ? pic.twitter.com/9qmjrZugGR
— Ananda Gundurao (@Anandagundurao) September 30, 2021
ಭರತ್ ಪಿ ಅವರು, “ವಾವ್ ಹಬ್ಬದ ದಿನ ‘ತಿಥಿ ಭೋಜನ’…! ಇದನ್ನು ಸಂಪ್ರದಾಯವಾದಿಗಳು ಒಪ್ಪುತ್ತಾರ. ಹುಚ್ಚರ ಸರ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾವ್ ಹಬ್ಬದ ದಿನ "Tithi Bhojan"…!
ಇದನ್ನ ಸಂಪ್ರದಾಯವಾದಿಗಳು ಓಪ್ಪುತ್ತಾರ .?#ಹುಚ್ಚರಸರ್ಕಾರ pic.twitter.com/fcwURBh8lZ
— ಭರತ್.ಪಿ (@Bharathpkgl) September 30, 2021
ರಾಮಚಂದ್ರ ಎಂ. ಅವರು, “Tika ಉತ್ಸವ ಆಯ್ತು, ಈಗ ತಿಥಿ ಭೋಜನ ಅಂತೆ. ಕನ್ನಡಿಗರದು ಎಂತಾ ಪುಣ್ಯ! ನಮ್ಮ ರಾಜ್ಯದ ನಾಯಕರಿಗೆ ಕನಿಷ್ಠ ನಾಡಿಗೆ ಇರಬೇಕಾದ ಸ್ವಾಯತ್ತತೆ ಬಗ್ಗೆ ಕಿಂಚಿತ್ತಾದರೂ ಅರಿವಿದಿಯೇ?” ಎಂದು ಪ್ರಶ್ನಿಸಿದ್ದಾರೆ.
#TikaUtsav ಆಯ್ತು, ಈಗ #TithiBhojan ಅಂತೆ. ಕನ್ನಡಿಗರದು ಎಂತಾ ಪುಣ್ಯ! ನಮ್ಮ ರಾಜ್ಯದ ನಾಯಕರಿಗೆ ಕನಿಷ್ಠ ನಾಡಿಗೆ ಇರಬೇಕಾದ ಸ್ವಾಯತ್ತತೆ ಬಗ್ಗೆ ಕಿಂಚಿತ್ತಾದರೂ ಅರಿವಿದಿಯೇ? #ಬಿಸಿಯೂಟ
— Ramachandra.M/ ರಾಮಚಂದ್ರ.ಎಮ್ (@nanuramu) September 30, 2021
ಇದನ್ನೂ ಓದಿ: ಅಕ್ಷಯಪಾತ್ರ (ಇಸ್ಕಾನ್)ಗೆ ಹೊರಗುತ್ತಿಗೆಗೆ ವಿರೋಧ: ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಲು ಆಗ್ರಹ


