ವಾಕ್ ಸ್ವಾತಂತ್ಯ್ರ ಮತ್ತು ನ್ಯಾಯಾಂಗದ ಬಗ್ಗೆಗಿನ ಚರ್ಚೆಯನ್ನು ಹತ್ತಿಕ್ಕಲು ನ್ಯಾಯಾಂಗ ನಿಂದನೆ ಕಾನೂನಿನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಈ ವಾರ ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಒಂದು ರೂಪಾಯಿ ಶಿಕ್ಷೆ ವಿಧಿಸಿತ್ತು. ಈ ಪ್ರಕರಣ ರಾಷ್ಟ್ರಾದ್ಯಂತ ಗಮನ ಸೆಳೆದಿತ್ತು.
ಓದಿ: ಪ್ರಶಾಂತ್ ಭೂಷಣ್‌ಗೆ 1 ರೂ ದಂಡ ಅಥವಾ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ
ಕ್ಲಬ್ ಆಫ್ ಸೌತ್ ಏಷ್ಯಾ ಆಯೋಜಿಸಿದ್ದ “ವಾಕ್ ಸ್ವಾತಂತ್ರ್ಯ ಮತ್ತು ಭಾರತೀಯ ನ್ಯಾಯಾಂಗ” ಎಂಬ ವೆಬಿನಾರ್‌ನಲ್ಲಿ ಅವರು ಮಾತನಾಡಿದ ಅವರು, ನ್ಯಾಯಾಂಗ ನಿಂದನೆ ಕಾನೂನಿನ ಅಧಿಕಾರದ ವ್ಯಾಪ್ತಿಯು ಅತ್ಯಂತ ಅಪಾಯಕಾರಿಯಾಗಿದ್ದು ಅದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
“ಪ್ರಜಾಪ್ರಭುತ್ವದಲ್ಲಿರುವ ಪ್ರತಿಯೊಬ್ಬ ನಾಗರಿಕರು, ನ್ಯಾಯಾಂಗ ವ್ಯವಸ್ಥೆ ಮತ್ತು ಸುಪ್ರೀಂ ಕೋರ್ಟ್‌ನ ಕೆಲಸಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಅಗತ್ಯ. ಆದರೆ ದುರದೃಷ್ಟವಶಾತ್ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರದ ಪ್ರಭಾವ ಹೆಚ್ಚುತ್ತಿದೆ
“ಇದು ಬಹಳ ಅಪಾಯಕಾರಿ ನ್ಯಾಯವ್ಯಾಪ್ತಿಯಾಗಿದ್ದು, ಇದರಲ್ಲಿ ನ್ಯಾಯಾಧೀಶರು ತಮ್ಮದೇ ಆದ ಹಿತಾಸಕ್ತಿಯಿಂದ ವರ್ತಿಸುತ್ತಾರೆ. ಅದಕ್ಕಾಗಿಯೇ ಹಲವು ದೇಶಗಳಲ್ಲಿ ಈ ಕಾನೂನನ್ನು ರದ್ದುಪಡಿಸಲಾಗಿದೆ. ಭಾರತದಂತಹ ಕೆಲವು ದೇಶಗಳಲ್ಲಿ ಮಾತ್ರ ಮುಂದುವರಿಸಲಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಖ್ಯಾತ ಲೇಖಕಿ ಅರುಂಧತಿ ರಾಯ್ ಕೂಡ ಈ ಸಂದರ್ಭದಲ್ಲಿ ಮಾತನಾಡುತ್ತಾ, ವಾಕ್ ಸ್ವಾತಂತ್ಯ್ರದ ಹಕ್ಕು ಪ್ರಜಾಪ್ರಭುತ್ವದ ಅತ್ಯಂತ ಮೂಲಭೂತ ಅಂಶ ಎಂದು ಹೇಳಿದರು.
ನ್ಯಾಯಾಂಗವು ನ್ಯಾಯಾಂಗ ನಿಂದನೆ ಕಾನೂನನ್ನು ರದ್ದುಗೊಳಿಸುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ. ನಾಗರಿಕರು ಜವಾಬ್ದಾರಿಯುತವಾಗಿ ಮಾತನಾಡುವ ಮೂಲಕ ಅದನ್ನು ಅನಗತ್ಯವಾಗಿಸಲು ಪ್ರಯತ್ನಿಸಬೇಕಾಗುತ್ತದೆ ಎಂದು ರಾಯ್ ಹೇಳಿದರು.
ಇದನ್ನೂ ಓದಿ: ಪ್ಲೇಗ್ ವೇಳೆ ವೇಶ್ಯೆಯರು & ಯಹೂದಿಗಳನ್ನು ಬಲಿಪಶು ಮಾಡಲಾಗಿತ್ತು! ಕೊರೋನ ವೇಳೆಯಲ್ಲಿ?


