Homeಮುಖಪುಟಕೋಮು ಸಾಮರಸ್ಯ ಕದಡಿದ ಆರೋಪ: ಪ್ರಕಾಶ್ ಬೆಳವಾಡಿ ವಿರುದ್ಧ ದೂರು ಸಲ್ಲಿಸಿದ ವಕೀಲ

ಕೋಮು ಸಾಮರಸ್ಯ ಕದಡಿದ ಆರೋಪ: ಪ್ರಕಾಶ್ ಬೆಳವಾಡಿ ವಿರುದ್ಧ ದೂರು ಸಲ್ಲಿಸಿದ ವಕೀಲ

- Advertisement -
- Advertisement -

‘ಕೋಮು ಸಾಮರಸ್ಯ ಕದಡಿದ ಆರೋಪದ ಮೇಲೆ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬೆಳಗಾವಿ ಎಸ್‌ಪಿ ಅವರಿಗೆ ಅಥಣಿಯ ವಕೀಲರಾದ ಭೀಮನಗೌಡ ಪರಗೊಂಡ ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ತಲುಪಿಸಿದ್ದಾರೆ.

ಬಂಗಾಳ ಚುನಾವಣೆ ಫಲಿತಾಂಶದ ನಂತರ ಪ್ರಕಾಶ್ ಬೆಳವಾಡಿ ಹಾಕಿದ್ದ ಫೇಸ್‌ಬುಕ್ ಪೋಸ್ಟಿನಲ್ಲಿ ಅವರು, ‘ಸದ್ಯದಲ್ಲೇ ಬಂಗಾಳದಲ್ಲಿ ಮುಸ್ಲಿಮರ ಮೇಲೆ ವ್ಯವಸ್ಥಿತ, ಭಯಾನಕ ದಾಳಿ ನಡೆಯಲಿದೆ, ಯಾರೂ ಇದನ್ನು ತಡೆಯಲಾಗದು’ ಎಂದು ಬರೆದಿದ್ದಲ್ಲದೇ, 2002ರ ಗುಜರಾತ್ ಹತ್ಯಾಕಾಂಡವನ್ನು ಸಮರ್ಥೀಸುವ ರೀತಿಯಲ್ಲಿ ಬರೆದಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಅವರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿ ಪ್ರೋಫೈಲ್ ಅನ್ನು ಡಿ-ಆಕ್ಟಿವೇಟ್ ಮಾಡಿದ್ದರು.

ಈ ಕುರಿತು ಅಥಣಿಯಲ್ಲಿ ದೂರು ಸಲ್ಲಿಸಲು ಓಡಾಡಿದ ವಕೀಲ ಭೀಮನಗೌಡ ಪರಗೊಂಡರಿಗೆ ಪೊಲೀಸರು ಹಲವು ತಾಂತ್ರಿಕ ಸಮಸ್ಯೆಗಳನ್ನು (ಸೈಬರ್ ಕಾನೂನುಗಳ ತಿಳುವಳಿಕೆಯ ಕೊರತೆ ಅಥವಾ ಇಂತಹ ಕೇಸುಗಳಲ್ಲಿ ಅವರಿಗೆ ಸೂಕ್ತ ಅಧಿಕಾರವೇ ಇಲ್ಲದಿರಬಹುದು) ಮುಂದೆ ಮಾಡಿದರು.

ಈಗ ಅಥಣಿಯ ಪೊಲೀಸರ ಸಲಹೆಯಂತೆ, ಪರಗೊಂಡ ಅವರು, ನೇರವಾಗಿ ಬೆಳಗಾವಿ ಎಸ್.ಪಿ ಮತ್ತು ರಾಜ್ಯದ ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ, ಬೆಳವಾಡಿ ವಿರುದ್ಧ ದೂರು ದಾಖಲಿಸಿ ಎಂದು ಮನವಿ ಸಲ್ಲಿಸಿದ್ದಾರೆ. ತಮ್ಮ ದೂರನ್ನು ರಿಜಿಸ್ಟ್ರೆಡ್ ಪೋಸ್ಟ್ ಮೂಲಕವಲ್ಲದೇ, ವ್ಯಾಟ್ಸಾಪ್ ಮತ್ತು ಇ-ಮೇಲ್ ಮೂಲಕವು ಎಸ್‌ಪಿ ಅವರಿಗೆ ತಲುಪಿಸಿದ್ದಾರೆ.

ಪ್ರಕಾಶ್ ಬೆಳವಾಡಿ ವಿರುದ್ಧ ದೂರು ನೀಡಿದ ಭೀಮನಗೌಡ ಪರಗೊಂಡ

ಈ ಬಗ್ಗೆ ನಾನುಗೌರಿ.ಕಾಂ ಬೆಳಗಾವಿಯ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರನ್ನು ಸಂಪರ್ಕಿಸಿದಾಗ, ‘ಬೇರೆ ಕೆಲಸಗಳ ಒತ್ತಡದಿಂದ ವಾಟ್ಸಾಪ್ ನೋಡಲು ನೋಡಿಲ್ಲ. ನೋಡಿದ ತಕ್ಷಣ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇನೆ. ನಾಳೆ ಸಂಜೆಯೊಳಗೆ ತೀರ್ಮಾನ ಹೇಳುತ್ತೇನೆ’ ಎಂದರು.

ಪ್ರಕಾಶ್ ಬೆಳವಾಡಿಯವರ ಪೋಸ್ಟ್‌ಗೆ ಸಾಕಷ್ಟು ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.


ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...