ಕಳ್ಳತನ ಆರೋಪ ಹೊರಿಸಿ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದ 17 ವರ್ಷದ ಅಪ್ರಾಪ್ತ ಬಾಲಕನನ್ನು ಮರಕ್ಕೆ ಕಟ್ಟಿ, ಥಳಿಸಿ, ಒಳ ಉಡುಪುಗಳೊಳಗೆ ಕೆಂಪು ಇರುವೆಗಳನ್ನು ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಸಂತ್ರಸ್ತ ಬಾಲಕನ ಅಜ್ಜ ಹಲ್ಲೆಕೋರರ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದಾಗಿ ವರದಿಯಾಗಿದೆ.
ಕೃತ್ಯದ ವಿಡಿಯೋ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಘಟನೆ ಏಪ್ರಿಲ್ 4 ರಂದು ಚನ್ನಗಿರಿ ತಾಲ್ಲೂಕಿನ ಅಷ್ಟಪ್ಪನಹಳ್ಳಿಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪ್ರಾಪ್ತ ಬಾಲಕನನ್ನು ರಕ್ಷಿಸಲು ಯತ್ನಿಸಿದ ಮತ್ತೊಬ್ಬ ಬಾಲಕನ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಒಂಬತ್ತು ಜನರನ್ನು ಬಂಧಿಸಿ ಹೆಚ್ಚಿನ ತನಿಖೆ ಆರಂಭಿಸಿದ್ದಾಗಿ ಹೇಳಿದ್ದಾರೆ. ಬಂಧಿತರನ್ನು ಸುಭಾಷ್ (23), ಲಕ್ಕಿ (21), ದರ್ಶನ್ (22), ಪರಶು (25), ಶಿವದರ್ಶನ್ (23), ಹರೀಶ್ (25), ಪಟ್ಟಿ ರಾಜು (20), ಭೂನಿ (18), ಮತ್ತು ಸುಧನ್ ಅಲಿಯಾಸ್ ಮಧುಸೂಧನ್ (30) ಎಂದು ಗುರುತಿಸಲಾಗಿದೆ..
ಕಳ್ಳತನ ಮತ್ತು ಮಹಿಳೆಯರೊಂದಿಗೆ ಅನುಚಿತ ವರ್ತನೆಯ ಆರೋಪದ ಮೇಲೆ ಬಾಲಕನ ಚಿಕ್ಕಪ್ಪ ಮತ್ತು ಸಂಬಂಧಿಕರೆ ಈ ಹಲ್ಲೆ ನಡೆಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ದುಷ್ಕರ್ಮಿಗಳು ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ್ದಾಗಿ ವರದಿ ಹೇಳಿದೆ. ಕಳ್ಳತನ ಆರೋಪ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತನ್ನ ಮೇಲಿನ ಎಫ್‌ಐಆರ್ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋದ ಕುನಾಲ್

