ಈ ವರ್ಷದಲ್ಲಿ ದೇಶಾದ್ಯಂತ ದಾಖಲಾಗಿರುವ 1,273 ಆಸಿಡ್ ದಾಳಿ ಪ್ರಕರಣಗಳಲ್ಲಿ 799 ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದ್ದು, ಇದರ ಬಗ್ಗೆ ರಾಜ್ಯಗಳು ತಕ್ಷಣ ಗಮನ ಹರಿಸಬೇಕೆಂದು ಒತ್ತಾಯಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ನೋಡಲ್ ಅಧಿಕಾರಿಗಳು 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ನಡೆದ ಇ-ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ, ಆಯೋಗದ ನಿರ್ವಹಣಾ ಮಾಹಿತಿ ವ್ಯವಸ್ಥೆಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾದ ಆಸಿಡ್ ದಾಳಿ ಪ್ರಕರಣಗಳನ್ನು ಪರಿಶೀಲಿಸಲಾಯಿತು.
ಆಸಿಡ್ ದಾಳಿಯ ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸದಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎ ಪ್ರಾಮಿಸ್ಡ್ ಲ್ಯಾಂಡ್: ಒಬಾಮಾ ಪುಸ್ತಕದಲ್ಲಿ ನಿಜಕ್ಕೂ ಏನಿದೆ?
ಅಕ್ಟೋಬರ್ 20 ರವರೆಗಿನ ಮಾಹಿತಿಯ ಪ್ರಕಾರ, ದೇಶಾದ್ಯಂತ 1,273 ಆಸಿಡ್ ದಾಳಿ ಪ್ರಕರಣಗಳಲ್ಲಿ ಕೇವಲ 474 ಪ್ರಕರಣಗಳ ಆಸಿಡ್ ದಾಳಿಯ ಸಂತ್ರಸ್ತರಿಗೆ ಮಾತ್ರ ಪರಿಹಾರವನ್ನು ನೀಡಲಾಗಿದೆ.
ಈ ಸಭೆಯಲ್ಲಿ, ದಾಳಿ ಪ್ರಕರಣಗಳಲ್ಲಿ ಬದುಕುಳಿದವರನ್ನು ಬೆಂಬಲಿಸುವ ಕಾನೂನುಗಳು ಮತ್ತು ಯೋಜನೆಗಳನ್ನು ಎತ್ತಿಹಿಡಿಯಲು ನೋಡಲ್ ಅಧಿಕಾರಿಗಳಿಗೆ ವಿನಂತಿಸಲಾಗಿದೆ.
ಇದನ್ನೂ ಓದಿ: ಅವರು ನನ್ನ ಸಿನಿಮಾದ ರೇಟಿಂಗ್ ಬದಲಿಸಬಹುದು, ಆದರೆ ನನ್ನ ಮನಸ್ಸು ಬದಲಿಸಲು ಸಾಧ್ಯವಿಲ್ಲ : ದೀಪಿಕಾ ಪಡುಕೋಣೆ
2020 ರಲ್ಲಿ ಯಾವುದೇ ಆಸಿಡ್ ದಾಳಿ ಪ್ರಕರಣಗಳು ವರದಿಯಾಗಿಲ್ಲ ಎಂದು ಸಿಕ್ಕಿಂ, ತಮಿಳುನಾಡು, ಗೋವಾ (ಉತ್ತರ ಜಿಲ್ಲೆ), ಜಮ್ಮು ಮತ್ತು ಕಾಶ್ಮೀರ, ದಾದರ್ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಪ್ರದೇಶಗಳ ಪ್ರತಿನಿಧಿಗಳು ಮಾಹಿತಿ ನೀಡಿದರು.
ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಅಪರಾಧ ದಾಖಲೆಗಳ ವಿಭಾಗವು ಅಂಕಿಅಂಶಗಳು ಹೇಳಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ-ದಿನೇ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.
ಇದನ್ನೂ ಓದಿ: ’ಬಾಯ್ಕಟ್ ಮತ್ತು ಟ್ರೋಲ್’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್…


