ಪ್ರಸಿದ್ದ ಹಿಂದಿ ನಟ ಇರ್ಫಾನ್ ಖಾನ್ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಕೊಲೊನ್ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಮಂಗಳವಾರ ಮುಂಬೈಯ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟನಿಗೆ ಮಾರ್ಚ್ 2018 ರಲ್ಲಿ ನ್ಯೂರೋಎಂಡೋಕ್ರೈನ್ ಗೆಡ್ಡೆ ಇರುವುದು ಪತ್ತೆಯಾಯಿತ್ತು.
ನಟನ ಸಾವಿಗೆ ಚಿತ್ರರಂಗ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ನಿರ್ದೇಶಕ ಶೂಜಿತ್ ಸರ್ಕಾರ್ “ನನ್ನ ಪ್ರೀತಿಯ ಸ್ನೇಹಿತ, ನೀನು ಹೋರಾಡಿದೆ, ಹೋರಾಡಿದೆ ಮತ್ತು ಹೋರಾಡಿದೆ, ನಿನ್ನ ಮೇಲೆ ನನಗೆ ಹೆಮ್ಮೆಯಿದೆ. ಮತ್ತೆ ಭೇಟಿಯಾಗೋಣ, ಓಂ ಶಾಂತಿ, ಸೆಲ್ಯೂಟ್ ಇರ್ಫಾನ್ ಖಾನ್” ಎಂದು ಟ್ವೀಟ್ ಮಾಡಿದ್ದಾರೆ.
My dear friend Irfaan. You fought and fought and fought. I will always be proud of you.. we shall meet again.. condolences to Sutapa and Babil.. you too fought, Sutapa you gave everything possible in this fight. Peace and Om shanti. Irfaan Khan salute.
— Shoojit Sircar (@ShoojitSircar) April 29, 2020
ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರು ಇರ್ಫಾನ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಪ್ರಸನ್ನ ಅವರ ನೇರ ಶಿಷ್ಯರಾಗಿದ್ದ ಇರ್ಫಾನ್ ಅವರೊಂದಿಗೆ ದೀರ್ಘಕಾಲದ ಸ್ನೇಹ ಒಡನಾಟ ಹೊಂದಿದ್ದರು. ಮೈಸೂರಿನ ಬದನವಾಳುವಿನಲ್ಲಿ ಪ್ರಸನ್ನ ಕೈಗೊಂಡಿದ್ದ ಸತ್ಯಾಗ್ರಹಕ್ಕೆ ಬೆಂಬಲಿಸಿ ಸತ್ಯಾಗ್ರಹದಲ್ಲಿ ಇರ್ಫಾನ್ ಪಾಲ್ಗೊಂಡಿದ್ದರು.
My student, friend, Gram Seva Sangh important activist, Actor Irrfan Khan's health is deteriorated seriously. We are…
Posted by Prasanna Heggodu Vols Handle on Tuesday, April 28, 2020
54 ವರ್ಷದ ನಟ, ಪತ್ನಿ ಸುತಪಾ ಸಿಕ್ದಾರ್ ಹಾಗೂ ಪುತ್ರರಾದ ಬಾಬಿಲ್ ಮತ್ತು ಅಯಾನ್ ಖಾನ್ ಮತ್ತು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇರ್ಫಾನ್ ಅವರ ತಾಯಿ ಸಯೀದಾ ಬೇಗಂ ಅವರು ತಮ್ಮ 95 ನೇ ವಯಸ್ಸಿನಲ್ಲಿ ಜೈಪುರದಲ್ಲಿ ಶನಿವಾರ ಬೆಳಿಗ್ಗೆ ನಿಧನರಾಗಿದ್ದರು.
ಇರ್ಫಾನ್ ಖಾನ್ ಕೊನೆಯ ಬಾರಿಗೆ “ಆಂಗ್ರೆಜಿ ಮೀಡಿಯಂ” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭಾರತದಲ್ಲಿ ಲಾಕ್‌ಡೌನ್ ಹೇರುವ ಒಂದು ವಾರದ ಮೊದಲು ಬಿಡುಗಡೆಯಾಗಿತ್ತು. ಆನಾರೋಗ್ಯದಿಂದಾಗಿ ನಟ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ಚಿತ್ರದ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ವೀಡಿಯೊ ಸಂದೇಶದ ಮೂಲಕ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇರ್ಫಾನ್ ನಟಿಸಿದ ಪ್ರಮುಖ ಚಿತ್ರಗಳು.
- ಸಲಾಂ ಬಾಂಬೆ
- ಮಕ್ಬೂಲ್
- ಲೈಫ್ ಇನ್ ಎ ಮೆಟ್ರೋ
- ದಿ ನೇಮ್ ಸೇಕ್
- ಮುಂಬೈ ಮೇರಿ ಜಾನ್
- ಸ್ಲಂ ಡಾಗ್ ಮಿಲೇನನಿಯರ್
- ಬಿಲ್ಲು
- ಪಾನ್ ಸಿಂಗ್ ತೋಮರ್
- ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್
- ಲೈಫ್ ಆಫ್ ಪೈ
- ಲಂಚ್ ಬಾಕ್ಸ್
- ಪೀಕು
- ಜುರಾಸಿಕ್ ವಲ್ಡ್
- ಕಾರ್ವಾ
- ಮದಾರಿ
- ಹಿಂದಿ ಮೀಡಿಯಂ
- ಅಂಗ್ರೇಜಿ ಮೀಡಿಯಂ



ಇರ್ಫಾನ್ ಖಾನ್ ರ ಇಂಗ್ಲೀಷ್ ಚಿತ್ರ ವಾರಿಯರ್, ಅದ್ಭುತ ಸಿನೆಮಾ. ಈ ಸಿನೆಮಾದಲ್ಲಿ ಅವರ ಅಭಿನಯ ತುಂಬಾ ಚೆನ್ನಾಗಿದೆ. ಅವರ ಅಭಿಮಾನಿಗಳು ಈ ಸಿನೆಮಾ ನೋಡಬಹುದು.
The warrior
ಭಾವಪೂರ್ಣ ಶ್ರದ್ಧಾಂಜಲಿ.